ಹೆದರಿದ್ದ ಹಿಂದೂಗಳೇ ಬೇರೆ ಧರ್ಮಗಳಿಗೆ ಹೋದರು! – ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ

ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ ಅವರ ಹೇಳಿಕೆ

ಝುಂಝುನು (ರಾಜಸ್ಥಾನ) – ಹೆದರಿದ್ದ ಹಿಂದೂಗಳು ಈಗ ಇತರ ಧರ್ಮಗಳಲ್ಲಿದ್ದಾರೆ. ಭಯಪಡದವರು ಇನ್ನೂ ಹಿಂದೂಗಳಾಗಿದ್ದಾರೆ, ಎಂದು ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗಡೆ ಇವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು. ಬಲವಂತಪುರದ ದುಂಡಲೋಡ ಬಾಲಕಿಯರ ಶಾಲೆಯ ವಾರ್ಷಿಕ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ರಾಜ್ಯಪಾಲ ಬಾಗಡೆ ಅವರು ಕಾರ್ಯಕ್ರಮದಲ್ಲಿ ಮಂಡಿಸಿದ ಸೂತ್ರಗಳು

ಹಿಂದೂ ಸಂಘಟನೆಯಲ್ಲಿ ಸೇರಿದ್ದಾರೆಂದು ಹಿಂದೂಗಳನ್ನು ಗುರಿಯಾಗಿಸಿಕೊಂಡರೆ, ನಾವು ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುವೆವು!

ಅಜ್ಮೇರನ ವಿಜಯನಗರದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಬಲೆಗೆ ಬೀಳಿಸಿ ಅವರ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯಪಾಲ ಬಾಗಡೆಯವರು, ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಸಂತ್ರಸ್ತ ಹುಡುಗಿಯರು ಹಿಂದೂ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಕಾರಣ ಅವರನ್ನು ಗುರಿಯಾಗಿಸಲಾಗಿತ್ತು, ಎಂಬ ವರದಿಗಳು ಹೊರಬರುತ್ತಿವೆ; ಆದರೆ ಹಿಂದೂ ಸಂಘಟನೆಗೆ ಸೇರುವುದು ಪಾಪವಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಒಂದು ವೇಳೆ ಜನರು ಯಾವುದೇ ಹಿಂದೂ ಸಂಘಟನೆಗೆ ಸೇರಿದರೆ, ಅವರನ್ನು ಗುರಿಯಾಗಿಸಲಾಗುತ್ತಿದ್ದರೆ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಮತ್ತು ಎದುರಿನ ಜನರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸೋಣ, ಎಂದು ಅವರು ಎಚ್ಚರಿಸಿದರು.

ಕೇಸರಿ ಬಣ್ಣವನ್ನು ಆಕ್ಷೇಪಿಸುವವರು ತಮ್ಮ ವಿಚಾರ ಬದಲಾಯಿಸಿಕೊಳ್ಳಿ !

ರಾಜಸ್ಥಾನ ವೀರರ ಭೂಮಿಯಾಗಿದೆ. ಕೇಸರಿ ಬಣ್ಣದ ಕುರಿತು ಯಾರಿಗಾದರೂ ಆಕ್ಷೇಪವಿದ್ದರೆ ಅವರು ತಮ್ಮ ವಿಚಾರವನ್ನು ಬದಲಾಯಿಸಿಕೊಳ್ಳಬೇಕು. ಭಾರತದಲ್ಲಿ, ಕೇಸರಿ ಬಣ್ಣವು ಶಕ್ತಿ, ತ್ಯಾಗ, ಸಂಸ್ಕೃತಿ, ಶೌರ್ಯ ಮತ್ತು ಧರ್ಮವನ್ನು ಸಂಕೇತಿಸುತ್ತದೆ.

ವಕ್ರದೃಷ್ಟಿಯಿಂದ ನೋಡುವವರಿಗೆ ಪಾಠ ಕಲಿಸಿರಿ!

ಎಲ್ಲಾ ಹುಡುಗಿಯರು ಧೈರ್ಯಶಾಲಿಯಾಗಿರಬೇಕು. ನಾವು ಯಾವುದರಲ್ಲೂ ಕಡಿಮೆಯಿಲ್ಲ. ನಮ್ಮನ್ನು ವಕ್ರದೃಷ್ಟಿಯಿಂದ ನೋಡುವ ಕಣ್ಣುಗಳಲ್ಲಿ ಕಣ್ಣ ಹಾಕಿ ಕಠಿಣ ಸಂದೇಶವನ್ನು ನೀಡಿರಿ. ಅವನಿಗೆ, ಅವನ ಕಣ್ಣು ವಕ್ರವಾಗಿದೆಯೆಂದು ಹೇಳಿರಿ, ನಾವು ಅದನ್ನು ಸಹಿಸುವುದಿಲ್ಲ. ನಾವು ಅದಕ್ಕೆ ಉತ್ತರಿಸುತ್ತೇವೆ’, ಎಂದು ಹೇಳಿ. “ನಾವು ಇಟ್ಟಿಗೆಯ ಹೊಡೆತಕ್ಕೆ ಕಲ್ಲುಗಳಿಂದ ಉತ್ತರಿಸುತ್ತೇವೆ” ಎಂದು ಹೇಳಬೇಕು. ಹುಡುಗಿಯರಲ್ಲಿ ಅಷ್ಟೊಂದು ಶಕ್ತಿ ಇರಬೇಕು.

ಕೌಶಲ್ಯಗಳನ್ನು ಬೆಳೆಸಿಕೊಳ್ಳಿರಿ!

ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ಯುವ ಇಂಜಿನಿಯರ್‍‌ಗಳು ಸಿದ್ಧರಾಗುತ್ತಿದ್ದಾರೆ; ಆದರೆ ಅವರಲ್ಲಿ ಕೇವಲ ಶೇ. 1 ರಷ್ಟು ಜನರಿಗೆ ಮಾತ್ರ ಉತ್ತಮ ಉದ್ಯೋಗಗಳು ಸಿಗಬಹುದು; ಏಕೆಂದರೆ ಅವರು ತಮ್ಮ ಪದವಿಗಳ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಆದ್ದರಿಂದ ನಾವು ಪ್ರತಿಭೆಯತ್ತ ಗಮನ ಹರಿಸಬೇಕು.

ಸಂಪಾದಕೀಯ ನಿಲುವು

ಇತರ ಧರ್ಮಗಳಿಗೆ ಹೋಗಿರುವ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಕೇಂದ್ರ ಮತ್ತು ಭಾಜಪ ಆಡಳಿತವಿರುವ ರಾಜ್ಯಗಳು ಪ್ರಯತ್ನಿಸಬೇಕು! ಛತ್ರಪತಿ ಶಿವಾಜಿ ಮಹಾರಾಜರು ಶುದ್ಧೀಕರಣದ ಮಹತ್ವವನ್ನು ತೋರಿಸಿದ್ದಾರೆ. ಆ ಮಾರ್ಗದಲ್ಲಿ ಮುಂದುವರಿಯುವ ಸಮಯ ಈಗ ಬಂದಿದೆ!