‘ದೇವಸ್ಥಾನ ಇನಾಮು ನಿರ್ಮೂಲನ ಅಧಿನಿಯಮ’ಕ್ಕೆ ವ್ಯಕ್ತವಾಗುತ್ತಿರುವ ವಿರೋಧದ ಪ್ರಕರಣ
ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್ ೩೦ ರವರೆಗೆ ಗಡುವು ವಿಸ್ತರಿಸುವುದಾಗಿ ಸಚಿವರ ಆಶ್ವಾಸನೆ

ಮುಂಬಯಿ, ೨೬ ಮೇ (ವಾರ್ತೆ.) – ಮಹಾರಾಷ್ಟ್ರ ದೇವಸ್ಥಾನ ಇನಾಮು ನಿರ್ಮೂಲನ ಅಧಿನಿಯಮದ ಕರಡನ್ನು ತಕ್ಷಣವೇ ರದ್ದುಗೊಳಿಸಬೇಕು, ಎಂಬ ಬೇಡಿಕೆಗಾಗಿ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ನಿಯೋಗವು ಮೇ ೨೬ ರಂದು ಮಂತ್ರಾಲಯದಲ್ಲಿ ಕಂದಾಯ ಸಚಿವ ಚಂದ್ರಶೇಖರ ಬಾವನಕುಳೆ ಅವರೊಂದಿಗೆ ಪ್ರಮುಖ ಸಭೆ ನಡೆಸಿತು. ಅದರಲ್ಲಿ ಅವರು ‘ಮಂದಿರದ ವಿಶ್ವಸ್ಥರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು’, ಎಂದು ಹೇಳಿದರು. ಇದರೊಂದಿಗೆ ‘ರಾಜ್ಯದ ದೇವಸ್ಥಾನಗಳ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸುವ ಹಾಗೂ ಮೇಲಿನ ಪ್ರಸ್ತಾವಿತ ಕಾನೂನಿನ ಕರಡಿನ ಕುರಿತು ಆಕ್ಷೇಪಣೆ ಮತ್ತು ಸಲಹೆಗಳನ್ನು ದಾಖಲಿಸಲು ಜೂನ್ ೩೦ ರವರೆಗೆ ಗಡುವು ವಿಸ್ತರಿಸುವ ಆಶ್ವಾಸನೆ ನೀಡಿದ್ದಾರೆ’, ಎಂಬ ಮಾಹಿತಿಯನ್ನು ಮಹಾಸಂಘದ ರಾಷ್ಟ್ರೀಯ ಸಂಯೋಜಕ ಶ್ರೀ. ಸುನೀಲ ಘನವಟ ಅವರು ನೀಡಿದರು.
ಮಹಾಸಂಘದ ನಿಯೋಗದಲ್ಲಿ ಸ್ವಾತಂತ್ರ್ಯವೀರ ಸಾವರಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ.ರಣಜಿತ ಸಾವರಕರ್, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ರಾಷ್ಟ್ರೀಯ ವಾರಕರಿ ಪರಿಷತ್ತಿನ ಕಾರ್ಯಾಧ್ಯಕ್ಷ ಹ.ಭ.ಪ. ಬಾಪು ರಾವಕರ್, ಶ್ರೀ ಮೊರಯಾ ಗೋಸಾವಿ ಅಷ್ಟವಿನಾಯಕ ಮಂದಿರದ ವಿಶ್ವಸ್ಥ ಶ್ರೀ. ಕೇಶವ ವಿಧ್ವಂಸ, ಪಾಲಿಯ ಶ್ರೀ ಬಲ್ಲಾಳೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀ. ಜಿತೇಂದ್ರ ಗದ್ರೆ ಮತ್ತು ಉಪಾಧ್ಯಕ್ಷ ಶ್ರೀ. ವೈಭವ ಆಪ್ಟೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ, ‘ವಿಲಭ್ ದೇವಸ್ಥಾನ ಸಮಿತಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅನೂಪ ಜೈಸ್ವಾಲ್, ಅಮರಾವತಿಯ ಶ್ರೀ ಪಿಂಗಳಾಯಿ ಮಾತಾ ದೇವಸ್ಥಾನದ ಶ್ರೀ. ವಿನೋದ ಪಾಖೋಡೆ ಮುಂತಾದ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ನಿಯೋಗವು ದೇವಸ್ಥಾನಗಳ ಭೂಮಿಯ ಮೇಲಿನ ಅತಿಕ್ರಮಣಗಳು, ದೇವಸ್ಥಾನಗಳ ಅರ್ಚಕರು ಹಾಗೂ ವಿಶ್ವಸ್ಥರ ಸಮಸ್ಯೆಗಳನ್ನು ಕಂದಾಯ ಸಚಿವರ ಮುಂದೆ ಮಂಡಿಸಿತು. ‘ದೇವಸ್ಥಾನಗಳ ಇನಾಮು ಭೂಮಿಯನ್ನು ಮಾರಾಟ ಮಾಡುವ ಬದಲಾಗಿ ದೇವಸ್ಥಾನಗಳ ಭೂಮಿಯ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸುವ ಕುರಿತು ಮಹಾರಾಷ್ಟ್ರ ಸರಕಾರವು ಕ್ರಮ ಕೈಗೊಳ್ಳಬೇಕು’, ಎಂದು ಮಹಾಸಂಘದ ವತಿಯಿಂದ ಒತ್ತಾಯಿಸಲಾಯಿತು. ಇದಕ್ಕೆ ಸಕಾರಾತ್ಮಕ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಬಾವನಕುಳೆ ಅವರು ನೀಡಿದರು. ‘ಈ ಅಧಿನಿಯಮದ ಕುರಿತು ಗರಿಷ್ಠ ಸಂಖ್ಯೆಯ ವಿಶ್ವಸ್ಥರು ಸಲಹೆ ಮತ್ತು ಆಕ್ಷೇಪಣೆಗಳನ್ನು ದಾಖಲಿಸಲು ಅನುಕೂಲವಾಗುವಂತೆ ವಿಭಾಗೀಯ ಆಯುಕ್ತರೊಂದಿಗೆ ತಹಶೀಲ್ದಾರ್ ಮತ್ತು ಜಿಲ್ಲ್ಲಾಧಿಕಾರಿಗಳ ಕಚೇರಿಗಳಲ್ಲೂ ಇವುಗಳನ್ನು ಸ್ವೀಕರಿಸಲು ಸೂಚನೆ ನೀಡಲಾಗುವುದು’, ಎಂದು ಕಂದಾಯ ಸಚಿವರು ಆಶ್ವಾಸನೆ ನೀಡಿದರು.
ಅಧಿನಿಯಮ ರದ್ದಾಗುವವರೆಗೂ ವಿರೋಧ ಮುಂದುವರಿಯುವುದು ! – ಸುನೀಲ ಘನವಟ
ಅಧಿನಿಯಮಕ್ಕೆ ಮಹಾರಾಷ್ಟ್ರ ಮಂದಿರ ಮಹಾಸಂಘದ ತೀವ್ರ ವಿರೋಧವಿದೆ. ಸರಕಾರವು ಹಿಂದುತ್ವನಿಷ್ಠವಾಗಿದೆ. ಆದ್ದರಿಂದ ಸರಕಾರವು ದೇವಸ್ಥಾನಗಳ ಹಿತದೃಷ್ಟಿಯ ಕಾನೂನನ್ನು ತರಬೇಕು. ದೇವಸ್ಥಾನಗಳ ಇನಾಮು ಭೂಮಿ ಮಾರಾಟದ ಪ್ರಸ್ತಾವಿತ ಕಾನೂನಿನ ಕರಡನ್ನು ರದ್ದುಗೊಳಿಸುವವರೆಗೂ ನಮ್ಮ ವಿರೋಧ ಮುಂದುವರಿಯುವುದು. ರಾಜ್ಯದ ಎಲ್ಲ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಭಕ್ತರು ಮತ್ತು ಸಮಸ್ತ ನಾಗರಿಕರು ಅಧಿನಿಯಮದ ವಿರುದ್ಧ ಆದಷ್ಟು ಬೇಗ ಸಲಹೆ ಹಾಗೂ ಆಕ್ಷೇಪಣೆಗಳನ್ನು ದಾಖಲಿಸಬೇಕು, ಎಂದು ಶ್ರೀ. ಸುನೀಲ ಘನವಟ ಅವರು ಕರೆ ನೀಡಿದರು.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು