ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆಯ ಮೂಲಕ ಆಗ್ರಹ
ಪುನರಾಭಿವೃದ್ಧಿಯ ಹೆಸರಿನಲ್ಲಿ ಸಾವರ್ಕರ್ ಸದನವನ್ನು ನೆಲಸಮ ಮಾಡಲು ಬಿಡುವುದಿಲ್ಲ ! - ಸಾವರ್ಕರ್ ಪ್ರೇಮಿಗಳ ದೃಢ ನಿರ್ಧಾರ

ರತ್ನಾಗಿರಿ – ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಮೇರು ವ್ಯಕ್ತಿತ್ವವಾದ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಮುಂಬಯಿನ ದಾದರ್ ನಲ್ಲಿರುವ ಐತಿಹಾಸಿಕ ಸಾವರ್ಕರ್ ಸದನ ಕಟ್ಟಡದ ಮೇಲೆ ಪುನರಾಭಿವೃದ್ಧಿಯ ಹೆಸರಿನಲ್ಲಿ ಬಿಲ್ಡರ್ ಲಾಬಿಯಿಂದ ನೆಲಸಮವಾಗುವ ಆತಂಕ ಎದುರಾಗಿದೆ. ಈ ಐತಿಹಾಸಿಕ ಕಟ್ಟಡವನ್ನು ನೆಲಸಮವಾಗುವುದರಿಂದ ಉಳಿಸಲು ಮತ್ತು ಅದನ್ನು ಸಂರಕ್ಷಿಸಲು ಸರಕಾರ ಆ ಕಟ್ಟಡವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಧರಣಿ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಈ ಪ್ರತಿಭಟನೆಯನ್ನು ಮೇ 28 ರಂದು ಇಲ್ಲಿನ ಜಯಸ್ತಂಭದಲ್ಲಿ ಮಾಡಲಾಯಿತು. ಈ ವೇಳೆ ಸಾವರ್ಕರ್ ಪ್ರೇಮಿಗಳು, ಪುನರಾಭಿವೃದ್ಧಿಯ ಹೆಸರಿನಲ್ಲಿ ಸಾವರ್ಕರ್ ಸದನವನ್ನು ನೆಲಸಮ ಮಾಡಲು ಬಿಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದರು. ಇದರ ನಂತರ ಸಾವರ್ಕರ್ ಪ್ರೇಮಿಗಳ ನಿಯೋಗವು ಜಿಲ್ಲಾಧಿಕಾರಿ ಮನೋಜ ಜಿಂದಾಲ್ ಅವರಿಗೆ ಬೇಡಿಕೆಗಳ ಮನವಿಯನ್ನು ನೀಡಿತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ