ಕೇಂದ್ರ ಸಚಿವ ಚೌಹಾಣ್ ಇವರಿಂದ ಏರ್ ಇಂಡಿಯಾಗೆ ಪ್ರಶ್ನೆ !

ಭೋಪಾಲ್ (ಮಧ್ಯಪ್ರದೇಶ) – ಭೋಪಾಲ್ ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಾಳಾದ ಸೀಟು ನೀಡಿದ್ದಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಪ್ರಶ್ನೆಗಳನ್ನು ಎತ್ತಿದ್ದಾರೆ.
ಚೌಹಾಣ್ ಅವರು “ನಾನು ಹೋಗಿ ಸೀಟಿನ ಮೇಲೆ ಕುಳಿತೆ, ಸೀಟು ಮುರಿದು ಒಳಗೆ ಆಳವಾಗಿ ಬಿದ್ದಿತ್ತು”. ಕುಳಿತುಕೊಳ್ಳುವುದು ಅಪಾಯಕಾರಿಯಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿಗಳಿಗೆ ‘ಆಸನ ಹಾಳಾಗಿದ್ದರೆ, ನೀವು ಅದನ್ನು ನನಗೆ ಏಕೆ ಕೊಟ್ಟಿದ್ದೀರಿ?’ ಎಂದು ಕೇಳಿದಾಗ ಅವರು, ‘ಈ ಆಸನ ಉತ್ತಮವಾಗಿಲ್ಲ ಮತ್ತು ಅದರ ಟಿಕೆಟ್‌ಗಳನ್ನು ಮಾರಾಟ ಮಾಡಬಾರದು’, ಎಂದು ಆಡಳಿತ ಮಂಡಳಿಗೆ ಈಗಾಗಲೇ ತಿಳಿಸಲಾಗಿತ್ತು.’ ಅಂತಹ ಒಂದೇ ಒಂದು ಆಸನವಲ್ಲ, ಹಲವು ಆಸನಗಳಿವೆ. ನನ್ನ ಸಹ ಪ್ರಯಾಣಿಕರು ನನಗೆ ಉತ್ತಮವಾದ ಆಸನದಲ್ಲಿ ಕುಳಿತುಕೊಳ್ಳಲು ವಿನಂತಿಸಿದರು; ಆದರೆ ನನಗಾಗಿ ಇನ್ನೊಬ್ಬ ಸ್ನೇಹಿತನಿಗೆ ಯಾಕೆ ತೊಂದರೆ ಕೊಡಬೇಕು, ಇದೇ ಸೀಟಿನಲ್ಲಿ ಕುಳಿತು ನನ್ನ ಪ್ರಯಾಣವನ್ನು ಮುಗಿಸುತ್ತೇನೆ’, ಎಂದು ನಿರ್ಧರಿಸಿದೆ. ಭವಿಷ್ಯದಲ್ಲಿ ಯಾವುದೇ ಪ್ರಯಾಣಿಕರು ಇಂತಹ ಸಮಸ್ಯೆಗಳನ್ನು ಎದುರಿಸದಂತೆ ಏರ್ ಇಂಡಿಯಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಪ್ರಯಾಣಿಕರು ತಮ್ಮ ಉದ್ದೇಶಿತ ಸ್ಥಾನಕ್ಕೆ ಬೇಗ ತಲುಪಲು ಅವರ ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತಾರೆಯೇ ?
ಕೇಂದ್ರ ಸರಕಾರವನ್ನು ಟೀಕಿಸಿದ ಕಾಂಗ್ರೆಸ್
ಯುವ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಇವರು ಒಂದು ಪೋಸ್ಟ ಮಾಡುತ್ತಾ, ಕುಂಭಮೇಳಕ್ಕೆ ಹೋಗುವ ಲಕ್ಷಾಂತರ ಭಕ್ತರಿಗೆ ಕಾರುಗಳನ್ನು ನಿಲ್ಲಿಸುವ ಸ್ಥಳಾವಕಾಶ ನೀಡಲು ಶಿವರಾಜ್ ಚೌಹಾಣ್ ಅವರ ಸರಕಾರಕ್ಕೆ ಸಾಧ್ಯವಾಗಲಿಲ್ಲ; ಆದರೆ ಅವರಿಗೆ ಯಾವುದೇ ನೋವು ಅನಿಸಲಿಲ್ಲ; ಆದರೆ ವಿಮಾನದಲ್ಲಿ ಮುರಿದ ಕುರ್ಚಿಯನ್ನು ಕಂಡು ಸಚಿವರು ದುಃಖಿತರಾದರು’, ಎಂದು ಬರೆದಿದ್ದಾರೆ.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!