Trump To Distribute Funds : ಸರಕಾರಿ ಉಳಿತಾಯದಿಂದ ಪ್ರತಿ ಅಮೆರಿಕನ್ ಕುಟುಂಬಕ್ಕೆ 4 ಲಕ್ಷ 33 ಸಾವಿರ ರೂಪಾಯಿ ನೀಡಲಿರುವ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ (ಅಮೇರಿಕಾ) – ನಮ್ಮ ಸರಕಾರವು ಪ್ರತಿ ಅಮೆರಿಕನ್ ಕುಟುಂಬಕ್ಕೆ ತಲಾ 5 ಸಾವಿರ ಅಮೇರಿಕನ್ ಡಾಲರ್ಸ್ (4 ಲಕ್ಷ 33 ಸಾವಿರ ರೂಪಾಯಿ) ನೀಡಲಿದೆ. ಡಿಪಾರ್ಟ್ ಮೆಂಟ್ ಆಫ್ ಗೌರ್ನಮೆಂಟ್ ಏಫೀಶಿಯನ್ಸಿ (ಸರಕಾರದ ದಕ್ಷತೆಯ ಇಲಾಖೆ) (‘ಡಿಒಜಿಇ’)ಯಿಂದ ನಿರ್ಮಾಣವಾಗುವ ಉಳಿತಾಯದಿಂದ ನೀಡಲಾಗುವುದು, ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ‘ಡಿಒಜಿಇ’ ಇದು ಒಂದು ಸಲಹಾ ಸಂಸ್ಥೆಯಾಗಿದ್ದು ಸರಕಾರದ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕೆಲಸ ಮಾಡುತ್ತದೆ.

ಮಯಾಮಿಯಲ್ಲಿ ನಡೆದ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ಡಿಒಜಿಇ’ ಯಿಂದ ಬರುವ ಉಳಿತಾಯದ ಹಣದಲ್ಲಿ 20 ಸಾವಿರ ಕೋಟಿ ರೂಪಾಯಿಗಳನ್ನು ಅಮೇರಿಕದ ನಾಗರಿಕರಿಗೆ ಹಿಂತಿರುಗಿಸಲಾಗುವುದು ಎಂದು ಹೇಳಿದರು. ಇದರರ್ಥ ಪ್ರತಿ ಅಮೇರಿಕನ್ ಕುಟುಂಬಕ್ಕೆ ತಲಾ 5 ಸಾವಿರ ಡಾಲರ್ಸ್ ಸಿಗಲಿದೆ.