ಸಂಪೂರ್ಣ ದೇಶದಿಂದ ಒಳನುಸುಳುಕೋರರನ್ನು ಯಾವಾಗ ಹೊರಹಾಕಲಾಗುವುದು ?
ಗೌಹಾಟಿ (ಅಸ್ಸಾಂ) – ಅಸ್ಸಾಂನಲ್ಲಿ ಸುಮಾರು 1 ಲಕ್ಷ 66 ಸಾವಿರ ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ. ಇವರಲ್ಲಿ 30 ಸಾವಿರಕ್ಕೂ ಹೆಚ್ಚು ಜನರನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ಅಸ್ಸಾಂ ಒಪ್ಪಂದದ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ಶಾಸಕ ಅಬ್ದುರ್ ರಹೀಮ್ ಅಹ್ಮದ್ ಕೇಳಿದ ಪ್ರಶ್ನೆಗೆ ರಾಜ್ಯ ಸರಕಾರದ ಸಚಿವ ಅತುಲ್ ಬೋರಾ ಈ ಮಾಹಿತಿಯನ್ನು ನೀಡಿದ್ದಾರೆ.
ಸಚಿವ ಅತುಲ್ ಬೋರಾ ಅವರು, ಡಿಸೆಂಬರ್ 31, 2024 ರವರೆಗೆ ಅಸ್ಸಾಂನಲ್ಲಿ 1 ಲಕ್ಷ 65 ಸಾವಿರ 531 ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ. ಇವರಲ್ಲಿ 32 ಸಾವಿರದ 870 ಜನರು 1966 ರಿಂದ 1971 ರ ಅವಧಿಯಲ್ಲಿ ಬಂದಿದ್ದರು. 1971 ರ ನಂತರ 1 ಲಕ್ಷ 32 ಸಾವಿರದ 661 ಜನರು ಬಂದಿದ್ದಾರೆ, ಎಂದು ತಿಳಿಸಿದರು.
ಬಾಂಗ್ಲಾದೇಶ ಗಡಿಯ 228 ಕಿಲೋಮೀಟರ್‌ಗೆ ಬೇಲಿ ಹಾಕುವ ಕಾಮಗಾರಿ ಪೂರ್ಣ
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮುಳ್ಳುತಂತಿ ಬೇಲಿ ಅಳವಡಿಸುವ ಕುರಿತಾದ ಪ್ರಶ್ನೆಗೆ ಸಚಿವ ಅತುಲ್ ಬೋರಾ ಉತ್ತರಿಸಿದರು. ಬಾಂಗ್ಲಾದೇಶದೊಂದಿಗೆ ಒಟ್ಟು 267.5 ಕಿಲೋಮೀಟರ್‌ಗಳ ಅಂತರರಾಷ್ಟ್ರೀಯ ಗಡಿಯಲ್ಲಿ 228 ಕಿಲೋಮೀಟರ್‌ಗೆ ಬೇಲಿ ಹಾಕುವ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು ಗಡಿಯಲ್ಲಿ 171 ಕಿ.ಮೀ ಭೂಮಿಯಲ್ಲಿದೆ ಮತ್ತು ಉಳಿದ 95 ಕಿ.ಮೀ ನೀರಿನಲ್ಲಿದೆ, ಎಂದು ಹೇಳಿದರು.