ಒಂದೇ ಹೊಟೆಲ್ ನಲ್ಲಿ 300 ಅಕ್ರಮ ವಲಸಿಗರನ್ನು ಕೂಡಿ ಹಾಕಿದ ಅಮೇರಿಕಾ!

ಪನಾಮಾ ಸಿಟಿ – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಆಡಳಿತವು ಅಂದಾಜು 300 ಆಕ್ರಮ ವಲಸೆಗಾರರನ್ನು ಮಧ್ಯ ಅಮೆರಿಕದ ಪನಾಮಾದ ಹೋಟೆಲ್‌ವೊಂದರಲ್ಲಿ ತಾತ್ಕಾಲಿಕವಾಗಿ ಬಂಧನದಲ್ಲಿ ಇಟ್ಟಿದೆ. ಎಲ್ಲಿಯವರೆಗೆ ಅಂತರಾಷ್ಟ್ರೀಯ ಅಧಿಕಾರಿಗಳು ಈ ಆಕ್ರಮ ವಲಸೆಗಾರರನ್ನು ಅವರ ದೇಶಕ್ಕೆ ವಾಪಸ್ಸು ಕಳುಹಿಸುವ ವ್ಯವಸ್ಥೆ ಮಾಡುವುದಿಲ್ಲವೋ, ಅಲ್ಲಿಯವರೆಗೆ ಈ ವಲಸಿಗರನ್ನು ಇಲ್ಲಿಯೇ ಇರಿಸಲಾಗುತ್ತದೆ.

1. ಈ ಅಕ್ರಮ ವಲಸಿಗರು ಏಷ್ಯಾದ 10 ದೇಶಗಳಾದ ಭಾರತ, ನೇಪಾಳ, ಇರಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಚೀನಾದಿಂದ ಬಂದವರು. ಈ ವಲಸಿಗರನ್ನು ನೇರವಾಗಿ ಈ ದೇಶಗಳಿಗೆ ಕಳುಹಿಸುವುದ ಅಮೇರಿಕಾಗೆ ಕಠಿಣವಾಗಿದೆ. ಆದ್ದರಿಂದ ಪನಾಮವನ್ನು ‘ಟ್ರಾನ್ಸಿಟ್ ಪಾಯಿಂಟ್’ (ಎರಡು ಮಾರ್ಗಗಳ ನಡುವಿನ ಮಧ್ಯಂತರ ಸ್ಥಳ) ಎಂದು ಮಾಡಲಾಗಿದೆ.

2. ಪನಾಮಾದ ರಕ್ಷಣಾ ಸಚಿವ ಫ್ರಾಂಕ್ ಅಬ್ರೆಗೊ ಪ್ರಕಾರ, ಈ ವಲಸಿಗರಿಗೆ ಆಹಾರ ಮತ್ತು ವೈದ್ಯಕೀಯ ಸೇವೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ.

3. ಫೆಬ್ರವರಿ 13, 2025 ರಂದು ಅಮೇರಿಕಾದಿಂದ ಅಕ್ರಮ ವಲಸಿಗರನ್ನು ಹೊತ್ತೊಯ್ಯುವ ವಿಮಾನದ ಆಗಮನವನ್ನು ಪನಾಮಾದ ಅಧ್ಯಕ್ಷ ಜೋಸೆ ರಾಹುಲ್ ಮುಲಿನೊ ಘೋಷಿಸಿದ್ದರು.