“ಭಾರತದಲ್ಲಿ ‘ಟೆಸ್ಲಾ’ ಯೋಜನೆಯನ್ನು ಸ್ಥಾಪಿಸುವುದು ಅಮೆರಿಕಕ್ಕೆ ದೊಡ್ಡ ತಪ್ಪಾಗುತ್ತದೆ!” – ಡೊನಾಲ್ಡ ಟ್ರಂಪ್

ಅಮೇರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರ ಹೇಳಿಕೆ

ವಾಷಿಂಗ್ಟನ (ಅಮೇರಿಕಾ) – ಭಾರತದಲ್ಲಿ ‘ಟೆಸ್ಲಾ’ ಯೋಜನೆಯನ್ನು ಸ್ಥಾಪಿಸುವುದು ಅಮೇರಿಕಾಕ್ಕೆ ದೊಡ್ಡ ತಪ್ಪಾಗುತ್ತದೆ, ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ‘ಫಾಕ್ಸ್ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ವಿಶೇಷವೆಂದರೆ ಆ ಸಮಯದಲ್ಲಿ ಟೆಸ್ಲಾ ಮಾಲೀಕರಾದ ಅಮೇರಿಕನ ಉದ್ಯಮಿ ಇಲಾನ್ ಮಸ್ಕ್ ಹಾಜರಿದ್ದರು. ಟೆಸ್ಲಾ ಭಾರತದಲ್ಲಿ ನೇಮಕಾತಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಹೇಳಿಕೆ ಚರ್ಚೆಯ ವಿಷಯವಾಗಬಹುದು.

ಟ್ರಂಪ್ ಮಾತಾನಾಡುತ್ತಾ, ಜಗತ್ತಿನ ಪ್ರತಿಯೊಂದು ದೇಶವೂ ನಮ್ಮ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಅವರು ನಮ್ಮ ದೇಶದ ಸಂಸ್ಥೆಗಳ ಉತ್ಪನ್ನಗಳಿಗೆ ಶುಲ್ಕಗಳನ್ನು ವಿಧಿಸುತ್ತಾರೆ. ಇದರಿಂದ, ಈ ಸಂಸ್ಥೆಗಳು ವ್ಯವಹಾರ ಮಾಡುವಾಗ ಅನೇಕ ತೊಂದರೆಗಳನ್ನು ಎದುರಿಸುತ್ತವೆ. ಇಲಾನ್ ಮಸ್ಕ್ ಭಾರತದಲ್ಲಿ ಯೋಜನೆಗಳನ್ನು ಸ್ಥಾಪಿಸುತ್ತಿದ್ದರೆ, ಅದು ಅವರಿಗೆ ಸರಿಯಾಗಿರಬಹುದು; ಆದರೆ ಇದು ಅಮೇರಿಕಕ್ಕೆ ಸೂಕ್ತವಾಗುವುದಿಲ್ಲ. ಅಮೇರಿಕಾಗಾಗಿ ಅದು ತುಂಬಾ ತಪ್ಪಾಗುವುದು’, ಎಂದು ಹೇಳಿದರು.