ತ್ರಿವೇಣಿ ಸಂಗಮದ ನೀರು ಸ್ನಾನ ಮತ್ತು ಕುಡಿಯಲು ಒಳ್ಳೆಯದು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ತ್ರಿವೇಣಿ ಸಂಗಮದ ನೀರು ಸ್ನಾನ ಮತ್ತು ಕುಡಿಯಲು ಒಳ್ಳೆಯದು. ಮಾಲಿನ್ಯ ನಿಯಂತ್ರಣ ಸಿಬ್ಬಂದಿ ತ್ರಿವೇಣಿ ಸಂಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಗಮದ ನೀರಿನ ಬಗ್ಗೆ ತಪ್ಪು ಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿ ಸಮಾಜವಾದಿ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ಜನರು ಭಾಗಿಯಾಗಿದ್ದಾರೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕರಿಗೆ ಅಕ್ಬರ್ ಕೋಟೆಗಳು ತಿಳಿದಿವೆ; ಆದರೆ ಅಕ್ಷಯವಟ ಗೊತ್ತಿಲ್ಲ!

ಸಮಾಜವಾದಿ ಪಕ್ಷದ ನಾಯಕರಿಗೆ ಅಕ್ಬರ್ ಕೋಟೆಗಳು ತಿಳಿದಿವೆ; ಆದರೆ ಅವರಿಗೆ ಅಕ್ಷಯವಟ ಮತ್ತು ಸರಸ್ವತಿ ಕೂಪ್‌ನ ಮಹತ್ವ ತಿಳಿದಿಲ್ಲ. ಇದು ಅವರ ಮಹಾಕುಂಭ ಮತ್ತು ಪ್ರಯಾಗರಾಜ್ ಬಗ್ಗೆ ಸಾಮಾನ್ಯ ಜ್ಞಾನ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.

ಸರಕಾರ ಕೇವಲ ಸೇವಕನಾಗಿ ಮಹಾಕುಂಭದ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, “ನಾವು ಇಲ್ಲಿ ಚರ್ಚಿಸುತ್ತಿರುವಾಗ, ಕೋಟ್ಯಂತರ ಜನರು ಶ್ರದ್ಧೆಯಿಂದ ಮಹಾಕುಂಭದಲ್ಲಿ ಸ್ನಾನ ಮಾಡುತ್ತಿದ್ದಾರೆ. ಈ ಆಯೋಜನೆ ಯಾವುದೇ ಸರಕಾರದದ್ದಲ್ಲ, ಬದಲಾಗಿ ಸಮಾಜದ್ದು ಆಗಿದೆ. ಸರಕಾರ ಕೇವಲ ಸೇವಕನಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ನೂಕುನುಗ್ಗಲಿನಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ನಮಗೆ ಸಹಾನುಭೂತಿ ಇದೆ.