ರಾಜಸ್ಥಾನದ ಭಾಜಪ ಸರಕಾರದಿಂದ ಬಜೆಟ್‌ನಲ್ಲಿ ಘೋಷಣೆ
ಜಯಪುರ (ರಾಜಸ್ಥಾನ) – ರಾಜಸ್ಥಾನ ರಾಜ್ಯದ 2025 ರ ಬಜೆಟ್ ಮಂಡಿಸುವಾಗ, ರಾಜಸ್ಥಾನದ ಹಣಕಾಸು ಸಚಿವೆ ದಿಯಾ ಕುಮಾರಿ ಅವರು ಧಾರ್ಮಿಕ ಪ್ರವಾಸೋದ್ಯಮ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ದೇವಸ್ಥಾನಗಳಲ್ಲಿ ನೈವೇದ್ಯಕ್ಕೆ ತಿಂಗಳಿಗೆ 3 ಸಾವಿರ ರೂಪಾಯಿ ಮತ್ತು ಅರ್ಚಕರಿಗೆ 7 ಸಾವಿರದ 500 ರೂಪಾಯಿ ಗೌರವ ಧನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
1. ಮಂಡಿಸಲಾದ ಬಜೆಟ್‌ನಲ್ಲಿ, ತೀರ್ಥಯಾತ್ರೆಯಡಿಯಲ್ಲಿ, 6 ಸಾವಿರ ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗುವುದು ಮತ್ತು 50 ಸಾವಿರ ಹಿರಿಯ ನಾಗರಿಕರಿಗೆ ಹವಾನಿಯಂತ್ರಿತ ರೈಲು ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗುವುದು.
2. ಪ್ರವಾಸೋದ್ಯಮವನ್ನು ಉತ್ತೇಜಿಸಲು, 975 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಅಡಿಯಲ್ಲಿ, 100 ಕೋಟಿ ರೂಪಾಯಿ ವೆಚ್ಚದಲ್ಲಿ ಬುಡಕಟ್ಟು ಪ್ರವಾಸೋದ್ಯಮ ಸರ್ಕ್ಯೂಟ್ ಹೌಸ ಅನ್ನು ನಿರ್ಮಿಸಲಾಗುವುದು, ಇದರಲ್ಲಿ ಮಾನಗಡ ಧಾಮ, ಗೋಮಟೇಶ್ವರ ದೇವಸ್ಥಾನ ಮತ್ತು ಇತರ ಪ್ರಮುಖ ಸ್ಥಳಗಳು ಸೇರಿವೆ.
3. ರಾಜಸ್ಥಾನ ಸರಕಾರವು ಗೋಶಾಲೆಗಳು ಮತ್ತು ನಂದಿಶಾಲೆಗಳ ವೆಚ್ಚದಲ್ಲಿ ಶೇ 15 ರಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿದೆ. ಈ ಮೊತ್ತವನ್ನು ಗೋಶಾಲೆಗಳ ಅಭಿವೃದ್ಧಿಗೆ ಬಳಸಲಾಗುವುದು.
ಸಂಪಾದಕೀಯ ನಿಲುವುರಾಜಸ್ಥಾನ ಸರಕಾರದಂತೆ ಇತರ ರಾಜ್ಯಗಳು ಸಹ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ. ಹಾಗೆಯೇ ಸರಕಾರೀಕರಣವಾಗಿರುವ ದೇವಸ್ಥಾನಗಳನ್ನು ಭಕ್ತರ ನಿಯಂತ್ರಣಕ್ಕೆ ನೀಡಬೇಕು ಎಂಬ ಈ ಬೇಡಿಕೆಯನ್ನು ಸರಕಾರ ಈಗ ಈಡೇರಿಸಬೇಕು ! |