ಬೇವಾರ (ರಾಜಸ್ಥಾನ) ಇಲ್ಲಿಯ ಘಟನೆ
ಜಯಪುರ (ರಾಜಸ್ಥಾನ) – ರಾಜಸ್ಥಾನದ ಬೇವಾರ ಜಿಲ್ಲೆಯಲ್ಲಿನ ಮುಸಲ್ಮಾನ ಯುವಕರು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಬಲೆಗೆ ಸಿಲುಕಿಸಿ ಅವರ ಲೈಂಗಿಕ ಶೋಷಣೆ ಮಾಡುವುದರ ಜೊತೆಗೆ ಅವರ ಮತಾಂತರದ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೭ ಜನರನ್ನು ಬಂಧಿಸಿದ್ದಾರೆ. ಆರೋಪಿ ರಿಹಾನ್ ಮಹಮ್ಮದ್, ಸೋಹೇಲ್ ಅನ್ಸಾರಿ, ಲುಕಮಾನ್, ಅರ್ಮಾನ್ ಪಠಾಣ, ಮತ್ತು ಸಾಹಿಲ್ ಕುರೇಶಿ ಇವರು ೧೯ ರಿಂದ ೨೦ ವರ್ಷದ ವಯೋಮಾನದವರಾಗಿದ್ದಾರೆ, ಹಾಗೂ ಇತರ ೨ ಅಪ್ರಾಪ್ತರಾಗಿದ್ದಾರೆ.
ನ್ಯಾಯವಾದಿಗಳಿಂದ ಆರೋಪಿಗೆ ಥಳಿತ !
ನ್ಯಾಯಾಲಯವು ೫ ಪ್ರೌಢ ಆರೋಪಿಗಳಿಗೆ ೪ ದಿನ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಾಗ ನ್ಯಾಯವಾದಿಗಳು ಇವರನ್ನು ಥಳಿಸಿದ್ದಾರೆ. ಅವರ ಮೇಲೆ ಬೂಟು ಮತ್ತು ಚಪ್ಪಲಿ ಎಸೆದಿದ್ದಾರೆ. ಇಲ್ಲಿಯ ಹಿಂದೂ ಜನಾಂಗ ಕೂಡ ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಬ್ಬರು ಅಪ್ರಾಪ್ತ ಹುಡುಗರನ್ನು ಬಾಲ ಅಪರಾಧ ಕೇಂದ್ರಕ್ಕೆ ಕಳುಹಿಸಿದ್ದಾರೆ.
೧. ಪೊಲೀಸರು, ೫ ಹುಡುಗಿಯರು ದೂರಿನಲ್ಲಿ, ಕೆಲವು ಜನರು ಅವರಿಗೆ ಮೊಬೈಲ್ ನೀಡಿದ್ದಾರೆ ಮತ್ತು ಅವರ ಲೈಂಗಿಕ ಕಿರುಕುಳ ಮಾಡಿದ್ದಾರೆ. ಈ ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ಹುಡುಗಿಯರನ್ನು ಸಂಪರ್ಕಿಸಿದ್ದರು ಮತ್ತು ಅವರಿಗೆ ಮಾತನಾಡಲು ಚೀನಾದ ಮೊಬೈಲ್ ನೀಡಿದ್ದರು. ಈ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು ಮತ್ತು ಮತಾಂತರಕ್ಕಾಗಿ ಅನಿವಾರ್ಯಗೊಳಿಸಲಾಗಿತ್ತು, ಎಂದು ಪೊಲೀಸರು ಹೇಳಿದರು.
೨. ಆರೋಪಿ ಮುಸಲ್ಮಾನ ಯುವಕರಲ್ಲಿ ಕೆಲವು ಜನ ವೆಲ್ದರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ ಹಾಗೂ ಕೆಲವರು ಫರ್ನಿಚರ್ ಅಂಗಡಿಯಲ್ಲಿ ಕಾರ್ಮಿಕರೆಂದು ಕೆಲಸ ಮಾಡುತ್ತಾರೆ. ಅವರ ಗುರಿ ಶಾಲೆಯಲ್ಲಿ ಕಲಿಯುವ ಹತ್ತನೆಯ ತರಗತಿಯ ಹಿಂದೂ ವಿದ್ಯಾರ್ಥಿನಿಗಳು ಆಗಿದ್ದರು. ಸಂತ್ರಸ್ತ ಹುಡುಗಿಯೂ ಕೂಡ ಹತ್ತಿರದ ಪರಿಸರದಲ್ಲಿ ವಾಸಿಸುತ್ತಾರೆ ಮತ್ತು ಅವರು ಮುಸಲ್ಮಾನ ಹುಡುಗರ ಪರಿಸರದಿಂದ ಶಾಲೆಗೆ ಹೋಗುತ್ತಿದ್ದರು.
೩. ಓರ್ವ ಸಂತ್ರಸ್ತೆಯು, ಸೊಹೆಲ್ ಮನ್ಸೂರಿ ೧೫ ದಿನಗಳಿಂದ ಶಾಲೆಯಿಂದ ಮನೆಗೆ ಹೋಗುವವರೆಗೆ ಆಕೆಯನ್ನು ಬೆಂಬೆತ್ತುದ್ದನು. ಅವನು ಅವನ ಮೊಬೈಲ್ ನಂಬರ್ ಹುಡುಗಿಗೆ ನೀಡಿದ್ದನು. ನಂತರ ಒಂದು ದಿನ ಹುಡುಗಿಯು ಅವನನ್ನು ಸಂಪರ್ಕ ಮಾಡಿದ ನಂತರ ಅವನು ಆಕೆಯನ್ನು ಒಂದು ಕೆಫೆಯಲ್ಲಿ ಭೇಟಿಯಾಗಲು ಹೇಳಿದನು. ಮತ್ತು ಅಲ್ಲಿ ಆಕೆಯ ದೈಹಿಕ ಶೋಷಣೆ ಮಾಡಿ ಅದರ ಛಾಯಾ ಚಿತ್ರಗಳು ಕೂಡ ಸೆರೆಹಿಡಿಯಲಾಯಿತು. ಸೊಹೇಲ್ ಮನ್ಸೂರಿ ಜೊತೆಗೆ ಇತರ ಮುಸಲ್ಮಾನ ಹುಡುಗರು ಕೂಡ ಇದ್ದರು. ಇದರ ನಂತರ ಸೋಹೇಲನು ಆಕೆಯ ಸ್ನೇಹಿತೆಯ ಜೊತೆಗೆ ಮಾತನಾಡುವುದಕ್ಕಾಗಿ ಆಕೆಗೆ ಕಿರುಕುಳ ನೀಡಲು ಆರಂಭಿಸಿದನು.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈಗ ಈ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕಾಗಿ ಸರಕಾರ ಪ್ರಯತ್ನ ಮಾಡಬೇಕು ಮತ್ತು ರಾಜ್ಯದಲ್ಲಿ ಮತಾಂಧರಿಗೆ ಕಡಿವಾಣ ಹಾಕಬೇಕು ! |