ಮಹಾಕುಂಭಕ್ಷೇತ್ರದಿಂದ ಹೊರಹೋಗುವ ಕಲ್ಪವಾಸಿಗಳಿಗೆ ತಡೆಯಬಾರದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಆದೇಶ !

ಪ್ರಯಾಗರಾಜ ಕುಂಭಮೇಳ 2025

(ಕುಂಭಮೇಳದಲ್ಲಿ ಯಾರು ಗಂಗಾ ನದಿಯ ತೀರದಲ್ಲಿ ವ್ರತ ಮಾಡುತ್ತಾರೆ, ಅವರಿಗೆ ‘ಕಲ್ಪವಾಸಿ’ ಎನ್ನುತ್ತಾರೆ.)

ಪ್ರಯಾಗರಾಜ, ಫೆಬ್ರುವರಿ ೧೪ (ಸುದ್ಧಿ) – ಮಹಾಕುಂಭ ಕ್ಷೇತ್ರದಿಂದ ಹೊರಹೋಗುವ ಕಲ್ಪವಾಸಿಗಳಿಗೆ ಯಾವುದೇ ರೀತಿಯಲ್ಲಿ ತಡೆಯಬಾರದು. ಕುಂಭ ಕ್ಷೇತ್ರದಿಂದ ಹೊರಹೋಗುವ ಕಲ್ಪವಾಸಿಯರ ವಾಹನಗಳಿಗೆ ಅಡಚಣೆ ಇಲ್ಲದೆ ಮಹಾಕುಂಭ ಕ್ಷೇತ್ರದಿಂದ ಹೊರಗೆ ಹೋಗಲು ಬಿಡಬೇಕೆಂದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಪೊಲೀಸರಿಗೂ ಮತ್ತು ಆಡಳಿತಕ್ಕೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಆದ್ದರಿಂದ ಫೆರುವರಿ ೧೩ ರಿಂದ ಪೊಲೀಸರು ವಾಹನಗಳನ್ನು ತಡೆಯುವ ಕಾರ್ಯ ನಿಲ್ಲಿಸಿದ್ದಾರೆ. ಮುಖ್ಯಮಂತ್ರಿ ಯೋಗೀ ಆದಿತ್ಯನಾಥ್ ಇವರ ಆದೇಶದ ನಂತರ ಪ್ರಯಾಗರಾಜ ಮೇಳ ಪ್ರಾಧೀಕರಣ ಕಾರ್ಯಾಲಯದ ಮೂಲಕ ಮಹಾಕುಂಭ ಕ್ಷೇತ್ರದಲ್ಲಿ ಹಾಕಲಾಗಿರುವ ಡಿಜಿಟಲ್ ಫಲಕದ ಮೇಲೆ ಕಲ್ಪವಾಸಿ ಮತ್ತು ಅಖಾಡಾದ ಸಾಧುಗಳಿಗೆ ಹೊರಗೆ ಹೋಗಲು ಸಹಾಯ ಮಾಡುವ ಸೂಚನೆ ನೀಡಿದ್ದಾರೆ. ಮಹಾಕುಂಭ ಮೇಳಕ್ಕೆ ೧೦ ಲಕ್ಷಕ್ಕಿಂತಲೂ ಹೆಚ್ಚಿನ ಕಲ್ಪವಾಸಿಗಳು ಬಂದಿದ್ದರು. ಫೆಬ್ರುವರಿ ೧೨ ರಂದು ಕಲ್ಪವಾಸ ಮುಗಿದಿದೆ. ಆದ್ದರಿಂದ ಫೆಬ್ರುವರಿ ೧೩ ರಿಂದ ಎಲ್ಲಾ ಕಲ್ಪವಾಸಿಗಳು ಅವರ ಗ್ರಾಮಕ್ಕೆ ಹೊರಟಿದ್ದಾರೆ. ವಿವಿಧ ರಾಜ್ಯಗಳಿಂದ ಸಮೂಹದಲ್ಲಿ ಬಂದಿರುವ ಕಲ್ಪವಾಸಿಗಳು ಟ್ರಕ್, ಟೆಂಪೋ ಮುಂತಾದ ದೊಡ್ಡ ದೊಡ್ಡ ವಾಹನಗಳಲ್ಲಿ ಹೊರಡುತ್ತಿದ್ದಾರೆ. ಭಕ್ತರ ದಟ್ಟಣೆಯಿಂದ ಪ್ರತಿಯೊಂದು ವೃತದಲ್ಲಿ ಹಾಕಿರುವ ‘ಬ್ಯಾರಿಕೆಟ್’ ಮತ್ತು ಪೊಲೀಸರ ಸುರಕ್ಷಾ ವ್ಯವಸ್ಥೆ ಇದರಿಂದ ಮಹಾಕುಂಭ ಕ್ಷೇತ್ರದಿಂದ ಹೊರಗೆ ಹೋಗಲು ಕಲ್ಪವಾಸಿಗಳಿಗೆ ಅಡಚಣೆ ಆಗಬಾರದು, ಇದಕ್ಕಾಗಿ ಮುಖ್ಯಮಂತ್ರಿಗಳು ಪೊಲೀಸರು ಮತ್ತು ಆಡಳಿತಕ್ಕೆ ಕಲ್ಪವಾಸಿಗಳಿಗೆ ಸಹಾಯ ಮಾಡುವಂತೆ ಆದೇಶ ನೀಡಿದ್ದಾರೆ.