Trump Ultimatum to Hamas : ಫೆಬ್ರುವರಿ ೧೫ ವರೆಗೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಯುದ್ಧ ವಿರಾಮ ಒಪ್ಪಂದ ರದ್ದುಪಡಿಸುವೆವು !

ಡೊನಾಲ್ಡ್ ಟ್ರಂಪ್ ಇವರಿಂದ ಭಯೋತ್ಪಾದಕ ಸಂಘಟನೆ ಹಮಾಸ್ ಗೆ ಎಚ್ಚರಿಕೆ

ವಾಷಿಂಗ್ಟನ್ (ಅಮೇರಿಕಾ) – ಫೆಬ್ರುವರಿ ೧೫ ಮಧ್ಯಾಹ್ನ ೧೨ ಗಂಟೆಯ ವರೆಗೆ ಎಲ್ಲಾ ಒತ್ತೆ ಆಳುಗಳನ್ನು ಬಿಡುಗಡೆಗೊಳಿಸದಿದ್ದರೆ, ಯುದ್ಧ ವಿರಾಮ ಒಪ್ಪಂದ ರದ್ದುಪಡಿಸುವುದು ಸೂಕ್ತ ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಪ್ಯಾಲೆಸ್ಟೈನಿನ ಭಯೋತ್ಪಾದಕ ಸಂಘಟನೆ ಹಮಾಸಗೆ ಎಚ್ಚರಿಕೆ ನೀಡಿದರು.

ರಾಷ್ಟ್ರಾಧ್ಯಕ್ಷ ಟ್ರಂಪ್ ಇವರು, ಯುದ್ಧ ವಿರಾಮ ಮುಂದುವರಿಸುವುದು ಅಥವಾ ಮುಗಿಸುವುದು ಇದರ ನಿರ್ಣಯ ಕೇವಲ ಇಸ್ರೇಲ್ ದ್ದಾಗಿರುತ್ತದೆ; ಆದರೆ ಉಳಿದಿರುವ ಎಲ್ಲಾ ಒತ್ತೆ ಆಳುಗಳನ್ನು ೩-೪ ಜನರ ಗುಂಪು ಮಾಡಿ ಬಿಡುಗಡೆ ಮಾಡದೆ ಒಟ್ಟಿಗೆ ಬಿಡುಗಡೆಗೊಳಿಸಬೇಕು. ನಮಗೆ ಎಲ್ಲಾ ಒತ್ತೆ ಆಳುಗಳ ಬಿಡುಗಡೆ ಒಂದೇ ಸಮಯದಲ್ಲಿ ಬೇಕಿದೆ’, ಎಂದು ಹೇಳಿದರು.