|

ಪ್ರಯಾಗರಾಜ (ಉತ್ತರ ಪ್ರದೇಶ), ಫೆಬ್ರವರಿ 9 (ಸುದ್ದಿ) – ಯಾವುದೇ ಪರಿಸ್ಥಿತಿಯಲ್ಲೂ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ವಿಶ್ವ ಹಿಂದೂ ಪರಿಷತ್ತು ನಿರ್ಧರಿಸಿದೆ. ವಿಶ್ವಹಿಂದೂ ಪರಿಷತ್ತಿನ ಕೇಂದ್ರ ಮಂಡಳಿಯ 3 ದಿನಗಳ (ಫೆಬ್ರವರಿ 7 ರಿಂದ -9 ವರೆಗೆ) ರಾಷ್ಟ್ರೀಯ ಸಭೆ ಪ್ರಯಾಗರಾಜನಲ್ಲಿ ನಡೆಯಿತು. ಅದರಲ್ಲಿ ಈ ನಿರ್ಣಯವನ್ನು ವ್ಯಕ್ತಪಡಿಸಲಾಯಿತು. ದೇವಸ್ಥಾನಗಳ ಮುಕ್ತಿಗಾಗಿ ಭಾರತ ಮತ್ತು ವಿದೇಶಗಳಿಂದ ಬಂದ 950 ಪ್ರತಿನಿಧಿಗಳು ಒಂದು ದೊಡ್ಡ ರಣತಂತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಅಧ್ಯಕ್ಷ ಶ್ರೀ. ಅಲೋಕ ಕುಮಾರ ಇವರು ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ದೇವಸ್ಥಾನ ಮುಕ್ತಿ ಚಳವಳಿಯ ಕ್ರಿಯಾ ಯೋಜನೆಯ ಬಗ್ಗೆ ಮಾತನಾಡುತ್ತಾ ಕುಮಾರ ಹೇಳಿದರು…,

1. ದೇವಸ್ಥಾನ ಮುಕ್ತ ಚಳವಳಿಯ ಮೊದಲ ಹಂತದಲ್ಲಿ, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು, ಇತರ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ, ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಮನವಿಯನ್ನು ಸಲ್ಲಿಸಿ, `ಸರಕಾರಗಳು ಹಿಂದೂ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಮರಳಿ ಹಸ್ತಾಂತರಿಸಬೇಕೆಂದು’, ಒತ್ತಾಯಿಸಲಿದ್ದಾರೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ದೊಡ್ಡ ಸಾರ್ವಜನಿಕ ಸಭೆಗಳ ಮೂಲಕ ಈ ಬೇಡಿಕೆಗಳನ್ನು ಮಂಡಿಸಲಾಗುವುದು.
2. ಆಂದೋಲನದ ಎರಡನೇ ಹಂತದಲ್ಲಿ, ಪ್ರತಿ ರಾಜ್ಯದ ರಾಜಧಾನಿಗಳಲ್ಲಿ ಮತ್ತು ಮಹಾನಗರಗಳಲ್ಲಿ ಬುದ್ಧಿಜೀವಿ ಸಮಾಜದ ಸಭೆಯನ್ನು ನಡೆಸಿ ವ್ಯಾಪಕ ಸಾರ್ವಜನಿಕ ಬೆಂಬಲವನ್ನು ಪಡೆಯಲಾಗುವುದು. ಈ ಸಮಸ್ಯೆ ಹೆಚ್ಚು ಗಂಭೀರವಾಗಿರುವ ರಾಜ್ಯಗಳಲ್ಲಿ, ಮುಂಬರುವ ವಿಧಾನಸಭಾ ಅಧಿವೇಶನದ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶಾಸಕರನ್ನು ಭೇಟಿ ಮಾಡಿ ದೇವಸ್ಥಾನಗಳ ಮುಕ್ತಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲಿದ್ದಾರೆ.

3. ದೇವಸ್ಥಾನಗಳಿಗೆ ತಮ್ಮ ಆಡಳಿತ ನಿರ್ವಹಣೆಯನ್ನು ನಡೆಸಲು ಸಂಪೂರ್ಣ ಸ್ವಾಯತ್ತತೆ ನೀಡಬೇಕು. ಈ ವಿಷಯದಲ್ಲಿ ನಾವು ಒಮ್ಮತವನ್ನು ಹೊಂದಿದ್ದೇವೆ. ದೇವಸ್ಥಾನಗಳ ಆಡಳಿತ ನಿರ್ವಹಣೆಯ ಮೇಲೆ ಈಗ ಯಾವುದೇ ಬಾಹ್ಯ ನಿಯಂತ್ರಣವನ್ನು ಸ್ವೀಕರಿಸಲಾಗುವುದಿಲ್ಲ. ಅಂದರೆ, ನಮ್ಮ ಚಳುವಳಿ ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮಾತ್ರ ಇದ್ದು, ಇತರ ದೇವಾಲಯಗಳಿಗೆ ಸಂಬಂಧಿಸಿಲ್ಲ.
4. ದೇವಸ್ಥಾನಗಳ ನಿಧಿಯನ್ನು ಹಿಂದೂ ಸಮಾಜದ ಕಾರ್ಯಗಳಿಗೆ ಮಾತ್ರ ಬಳಸಬೇಕು. ಇದಕ್ಕಾಗಿ ಪಾರದರ್ಶಕ ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನಾ ಪ್ರಕ್ರಿಯೆ ಇರಲಿದೆ.
5. ದೇವಸ್ಥಾನಗಳ ಆಡಳಿತದಲ್ಲಿ ಸಂಪೂರ್ಣ ಹಿಂದೂ ಸಮಾಜದ ಭಾಗವಹಿಸುವಿಕೆಯೊಂದಿಗೆ ದೇವಸ್ಥಾನಕ್ಕೆ ಸ್ಥಾಪಿಸಲಾಗುವ ಟ್ರಸ್ಟಗಳಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲಾಗುವುದು.
6. ವಿಶ್ವಹಿಂದೂ ಪರಿಷತ್ತಿನ ಮೂರು ದಿನಗಳ ಸಭೆಯಲ್ಲಿ, ಪೂ. ಸ್ವಾಮಿ ಶ್ರೀ ಪರಮಾನಂದ ಮಹಾರಾಜರು, ಬೌದ್ಧ ಲಾಮಾ ಪೂ. ಚೋಸ್ ಫೆಲ್ ಜ್ಯೋತಪಾ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಶ್ರೀ. ದತ್ತಾತ್ರೇಯ ಹೊಸಬಾಳೆ ಹಾಗೂ ಸಂಘದ ಮಾಜಿ ಸರಕಾರ್ಯವಾಹಕ ಮತ್ತು ವಿಶ್ವಹಿಂದೂ ಪರಿಷತ್ತಿನ ಉಸ್ತುವಾರಿ ಅಧಿಕಾರಿ ಶ್ರೀ. ಭೈಯಾಜಿ ಜೋಶಿ ಉಪಸ್ಥಿತರಿದ್ದರು.