ಹಾಗಾಗಿ ನನಗೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ ನನಗೆ ಅಚ್ಚುಮೆಚ್ಚು ! – ಆಶಾ ಭೋಸಲೆ, ಹಿರಿಯ ಗಾಯಕಿ

ಠಾಣೆ – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಭಾಷಣ ಸಭ್ಯವಾಗಿರುತ್ತದೆ. ವಿರೋಧ ಪಕ್ಷದವರು ಎಷ್ಟೇ ಆರೋಪ ಮಾಡಿದರೂ ಆದರು ಅವರು ಎಂದಿಗೂ ಅವರಿಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಪ್ರಧಾನಮಂತ್ರಿ ಮೋದಿ ಬೆಳಿಗಿನಜಾವ ಎದ್ದು ಯೋಗಾಸನ ಮಾಡಿ ಬಳಿಕ ಕೆಲಸ ಮುಂದುವರಿಸುತ್ತಾರೆ. ಯೋಗಿ ಆದಿತ್ಯನಾಥ ಇವರಲ್ಲಿ ನನಗೆ ನನ್ನ ಪ್ರತಿಮೆ ಕಾಣುತ್ತದೆ. ಅವರಲ್ಲಿ ಧೈರ್ಯ ಇದೆ. ಆದ್ದರಿಂದ ನನಗೆ ರಾಜಕಾರಣದಲ್ಲಿ ಮೋದಿ ಮತ್ತು ಯೋಗಿ ಹಿಡಿಸುತ್ತಾರೆ, ಎಂದು ಹಿರಿಯ ಗಾಯಕಿ ಆಶಾ ಭೋಸಲೆ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಾತಂತ್ರ್ಯವೀರ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಆನಂದೋತ್ಸವ ಸಂಗೀತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಅವರ ವಿಶೇಷ ಸಂದರ್ಶನ ನಡೆಸಲಾಯಿತು. ಆ ಸಮಯದಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ಹುಟ್ಟು ಹಬ್ಬದ ಪ್ರಯುಕ್ತ ‘ಏಕನಾಥ ತು… ಲೋಕನಾಥ ತೂ’ ಈ ಹಾಡಿನ ಲೋಕಾರ್ಪಣೆಯನ್ನು ಆಶಾ ಭೋಸಲೆ ಇವರು ಮಾಡಿದರು. ಅದರ ನಂತರ ನಟ ಅಭಿಜಿತ್ ಖಾಂಡಕೇಕರ ಇವರು ಆಶಾ ಭೋಸಲೆ ಇವರ ಸಂದರ್ಶನ ನಡೆಸಿದರು. ಈ ಸಂದರ್ಶನ ಕೇಳಲು ಸ್ಥಳಿಯ ಜನರು ಕಿಕ್ಕಿರಿದು ಉಪಸ್ಥಿತರಿದ್ದರು.

ಆಶಾ ಭೋಸಲೆ ಇವರು ಮಾತನಾಡುತ್ತಾ,

೧. ಬಾಳಾಸಾಹೇಬ ಠಾಕರೆ ಇವರು ನನ್ನ ಮೆಚ್ಚಿನ ರಾಜಕಾರಣಿ ಆಗಿದ್ದರು. ಕೊನೆ ಕ್ಷಣದವರೆಗೆ ಅವರು ನನ್ನ ಸ್ನೇಹಿತರಾಗಿದ್ದರು. ಬಾಳಾಸಾಹೇಬರು ಶಿವಸೇನೆ ರೂಪಿಸಿದರು, ಹಾಗೆಯೇ ಏಕನಾಥ ಶಿಂದೆ ಈಗ ರೂಪಿಸುತ್ತಿದ್ದಾರೆ. ಏಕನಾಥ ಶಿಂದೆ ಧೈರ್ಯದಿಂದ ಮುಂದೆ ಬಂದಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ಅವರಿಗೆ ನನ್ನ ಆಶೀರ್ವಾದವಿದೆ. ಶಿಂದೆ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಒಳ್ಳೆಯ ಕರ್ಮ ಮಾಡುವವರು ನಾಶವಾಗುವುದಿಲ್ಲ.

೨. ಮನಸೆಯ ಅಧ್ಯಕ್ಷ ರಾಜ ಠಾಕರೆ ಇವರು ಕೂಡ ನನಗೆ ಇಷ್ಟ. ರಾಜ ಠಾಕರೆ ಇವರ ಮಾತು ಒಳ್ಳೆಯದಾಗಿದೆ. ದೇವೇಂದ್ರ ಪಡಣವಿಸ ಇವರು ಕೂಡ ನನ್ನ ನೆಚ್ಚಿನ ನಾಯಕರು. ಸ್ವಾತಂತ್ರ್ಯವೀರ ಸಾವರ್ಕರ್ ಇವರಿಗೆ ನಾನು ಭೇಟಿಯಾಗಿದ್ದೆ, ಅದಕ್ಕಾಗಿ ನಾನು ಭಾಗ್ಯವಂತಳು ಎಂದು ಅವರು ಉಲ್ಲೇಖಿಸಿದ್ದಾರೆ.

೩. ಮೈಕ್ ನನಗಾಗಿ ದೇವರು. ನಾನು ಪ್ರತಿಯೊಂದು ಹಾಡು ಇದು ಮೊದಲನೆಯ ಹಾಡಿನ ಹಾಗೆಯೇ ಹಾಡುತ್ತೇನೆ.

೪. ತಂತ್ರಜ್ಞಾನ ಇದು ವಿಷ ಮತ್ತು ಅಮೃತದ ಹಾಗೆ ಇದೆ. ತಂತ್ರಜ್ಞಾನ ಇದು ವಿಚಾರ ಮಾಡುವ ಕ್ಷಮತೆ ಕಳೆಯುತ್ತದೆ. ನನ್ನ ಧ್ವನಿಯಲ್ಲಿ ಎಐನ (ಕೃತ್ರಿಮ ಬುದ್ಧಿಮತ್ತೆಯ) ಮಾಧ್ಯಮದಿಂದ ಹಾಡು ತಯಾರಿಸುವಿರಿ: ಆದರೆ ಹಾಡಿನಲ್ಲಿ ಭಾವನೆ ಎಲ್ಲಿಂದ ತರುವಿರಿ ?

೫. ಪ್ರಸ್ತುತ ಪೀಳಿಗೆಯ ಬಗ್ಗೆ ಅವರು ಮಾತನಾಡುತ್ತಾ, ಹಿಂದಿನಂತೆ ಈಗ ಮನುಷ್ಯತ್ವ ಉಳಿದಿಲ್ಲ. ಈಗ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಕಾಣುತ್ತಿದೆ ಎಂದು ಹೇಳಿದರು.