ಈ ಎಲ್ಲಾ ಹಣ ಸಹಾಯವನ್ನು ನಿಲ್ಲಿಸಿದ ಟ್ರಂಪ್
ವಾಷಿಂಗ್ಟನ್ (ಅಮೇರಿಕಾ) – ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ, ಅಮೇರಿಕಾದಲ್ಲಿ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಲಾಗುತ್ತಿದೆ. `ಯುನೈಟೆಡ್ ಸ್ಟೇಟಸ್ ಏಜನ್ಸಿ ಫಾರ ಇಂಟರನ್ಯಾಶನಲ್ ಡೆವಲಪಮೆಂಟ’(ಯುಎಸ್ಎಐಡಿ) ಈ ವಿಭಾಗವು ಅಮೇರಿಕಾದ ತೆರಿಗೆದಾರರ ಹಣವನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಂಡಿರುವುದು ಬಹಿರಂಗವಾಗಿದೆ. (ಯುಎಸ್ಎಐಡಿ) ಇದು ಅಮೇರಿಕಾ ವಿದೇಶಾಂಗ ನೀತಿ ನೆರವು ವಿಭಾಗವಾಗಿದೆ. ಈ ವಿಭಾಗದ ಮೂಲಕ, ಅಮೇರಿಕಾ ಜಗತ್ತಿನ ಬಡ ದೇಶಗಳಿಗೆ ಆರೋಗ್ಯ ಮತ್ತು ತುರ್ತು ಸಹಾಯವನ್ನು ಒದಗಿಸುತ್ತದೆ.
ಅಧ್ಯಕ್ಷ ಟ್ರಂಪ್ ಅವರು ಈ ಇಲಾಖೆಯನ್ನು ಟೀಕಿಸುತ್ತಾ, (ಯುಎಸ್ಎಐಡಿ) ಕಟ್ಟರವಾದಿ ಕಮ್ಯುನಿಸ್ಟರನ್ನು ತಪ್ಪುದಾರಿಗೆ ತಳ್ಳುತ್ತಿದೆ ಎಂದು ಹೇಳಿದರು. ಹಣವನ್ನು ಖರ್ಚು ಮಾಡುವ ಹೆಚ್ಚಿನ ವಿಧಾನವು ಗ್ರಹಿಸಲಾಗದು. ಭ್ರಷ್ಟಾಚಾರದ ಮಟ್ಟವನ್ನು ಹಿಂದೆಂದೂ ಕಂಡಿರಲಿಲ್ಲ ಇದನ್ನು ನಿಲ್ಲಿಸಿ ಎಂದು ಹೇಳಿದ್ದರು!
ಸಹಾಯದ ಹೆಸರಿನಲ್ಲಿ ಈ ವಿಭಾಗ ಮಾಡಿದ್ದೇನು?
1. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆ ಒಂದೂವರೆ ಕೋಟಿ ಡಾಲರ್ (131 ಕೋಟಿ 732 ಲಕ್ಷ ರೂ.) ಮೌಲ್ಯದ ಗರ್ಭನಿರೋಧಕಗಳನ್ನು ವಿತರಿಸಿದೆ.
2. ನೇಪಾಳದಲ್ಲಿ ನಾಸ್ತಿಕತೆಯನ್ನು ಉತ್ತೇಜಿಸಲು ನಾಲ್ಕೂವರೆ ಲಕ್ಷ ಡಾಲರ್ (ಸುಮಾರು 4 ಕೋಟಿ ರೂ.) ಅನುದಾನ ನೀಡಿದೆ.
3. ಕೊಲಂಬಿಯಾದಲ್ಲಿ, ಓರ್ವ ಟ್ರಾನ್ಸಜೆಂಡರ್ ಸಮುದಾಯದವರಿಗೆ ಸಭಾಂಗಣವನ್ನು ನಿರ್ಮಿಸಲು 47 ಸಾವಿರ ಡಾಲರ್ (41 ಲಕ್ಷ 27 ಸಾವಿರ ರೂಪಾಯಿ) ಖರ್ಚು ಮಾಡಿದೆ.
4. ಅರ್ಜೆಂಟೀನಾದಲ್ಲಿ ಸಲಿಂಗಿ ಪತ್ರಕರ್ತರಿಗೆ ಹವಾಮಾನ ಬದಲಾವಣೆಯ ಕುರಿತು ಚರ್ಚಿಸಲು 55 ಸಾವಿರ ಡಾಲರ್ (48 ಲಕ್ಷ 29 ಸಾವಿರ ರೂ.) ನೀಡಿದೆ.
ಸಂಪಾದಕೀಯ ನಿಲುವುನೇಪಾಳ ಹಿಂದೆ ಹಿಂದೂ ರಾಷ್ಟ್ರವಾಗಿತ್ತು ಮತ್ತು ಅಲ್ಲಿ ಬಹುಸಂಖ್ಯಾತ ಧಾರ್ಮಿಕ ಹಿಂದೂಗಳಿರುವಾಗ ಅವರನ್ನು ನಾಸ್ತಿಕರನ್ನಾಗಿ ಮಾಡುವುದರ ಹಿಂದೆ ಅಮೇರಿಕಾದ ಉದ್ದೇಶವೇನಿತ್ತು ಎಂಬುದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಬಾಹ್ಯ ಹಸ್ತಕ್ಷೇಪದಿಂದಾಗಿಯೇ ನೇಪಾಳ ಇಂದು ‘ಜಾತ್ಯತೀತ ರಾಷ್ಟ್ರ’ವಾಗಿ ಬದಲಾಗಿದ್ದು ಭಾರತದಿಂದ ದೂರವಾಗಿದೆ. ಈ ವಿಷಯವನ್ನು ನೇಪಾಳಿ ಹಿಂದೂಗಳ ಗಮನಕ್ಕೆ ಬಂದ ದಿನವೇ ಸುದಿನವೆನ್ನಬಹುದು. |