Ajmer Dargah Jain Pilgrimage Site : ಅಜಮೇರವನ್ನು ‘ರಾಷ್ಟ್ರೀಯ ಜೈನ ತೀರ್ಥ ಕ್ಷೇತ್ರ’ ಎಂದು ಘೋಷಿಸಿ !

  • ಅಜಮೇರ ದರ್ಗಾದ ದಿವಾನರಿಂದ ಪ್ರಧಾನಮಂತ್ರಿ ಮೋದಿ ಇವರಿಗೆ ಪತ್ರ ಬರೆದು ಆಗ್ರಹ

  • ಅಜಮೇರ ದರ್ಗಾ ಹಿಂದೂಗಳ ದೇವಸ್ಥಾನ ಇರುವುದು, ಎಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿರುವ ಹಿಂದೂ ಸೇನೆಯಿಂದ ಆಗ್ರಹಕ್ಕೆ ಬೆಂಬಲ

ದರ್ಗಾದ ದಿವಾನ ಸಯ್ಯದ್ ಜೈನೂಲ್ ಆಬೇದಿನ್

ಅಜ್ಮೇರ್ (ರಾಜಸ್ಥಾನ್) – ಇಲ್ಲಿಯ ‘ಖ್ವಾಜಾ ಮೋಯೀನುದ್ದೀನ್ ಚಿಶ್ತಿ ದರ್ಗಾ’ ಹಿಂದೂಗಳ ದೇವಸ್ಥಾನ ಇರುವುದೆಂದು ಹಿಂದೂ ಸೇನೆಯಿಂದ ನ್ಯಾಯಾಲಯದಲ್ಲಿ ದಾವೆ ಮಾಡಿದೆ. ಈ ಬಗ್ಗೆ ಮೊಕದ್ದಮೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ದರ್ಗಾದ ದಿವಾನ ಸಯ್ಯದ್ ಜೈನೂಲ್ ಆಬೇದಿನ್ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಪತ್ರ ಬರೆದು ಅಜ್ಮೆರನ್ನು ‘ರಾಷ್ಟ್ರೀಯ ಜೈನ ತೀರ್ಥ ಕ್ಷೇತ್ರ’ ಎಂದು ಘೋಷಿಸಲು ಆಗ್ರಹಿಸಿದ್ದಾರೆ. ಈ ಆಗ್ರಹವನ್ನು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣುಗುಪ್ತ ಇವರು ಸ್ವಾಗತಿಸಿದ್ದಾರೆ.

ದಿವಾನ್ ಇವರು, ಭಾರತ ವಿವಿಧ ಧರ್ಮದ ಮತ್ತು ಸಮೃದ್ಧ ಆಧ್ಯಾತ್ಮಿಕ ಪರಂಪರೆಯ ಸಂಗಮವಾಗಿದೆ. ಇಲ್ಲಿ ಸಾವಿರಾರು ಸಂತರು, ಋಷಿಗಳು ಮತ್ತು ಗಣ್ಯ ವ್ಯಕ್ತಿಗಳ ತಪಸ್ಸಿನ ಸ್ಥಳವಾಗಿದೆ. ಮಾನವ ಕಲ್ಯಾಣಕ್ಕಾಗಿ ಸಂತರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಜ್ಮೆರನಲ್ಲಿ ಖ್ವಾಜಾ ಮೋಯಿನುದ್ದೀನ್ ಹಸನ್ ಚಿಶ್ತಿ ಇವರ ದರ್ಗಾ ಇದೆ. ಪುಷ್ಕರ್ ಇದು ಬ್ರಹ್ಮನ ದೇವಸ್ಥಾನ ಮತ್ತು ಸರೋವರ ಇದೆ. ಅದರಂತೆ ಆಚಾರ್ಯ ವಿದ್ಯಾಸಾಗರ ಇವರ ದೀಕ್ಷಾ ಸ್ಥಾನ ಕೂಡ ಇದೇ ನಗರದಲ್ಲಿದೆ.

ನಾನು ದರ್ಗಾ ದೀವಾನರ ಪತ್ರವನ್ನು ಗೌರವಿಸುತ್ತೇನೆ ! – ವಿಷ್ಣು ಗುಪ್ತ

ವಿಷ್ಣು ಗುಪ್ತ

ವಿಷ್ಣು ಗುಪ್ತ ಇವರು, ದರ್ಗಾ ದೀವಾನ್ ಜೈನುಲ್ ಅಬೇದಿನ್ ಇವರು ಅಲ್ಲಿ ಜೈನ ದೇವಸ್ಥಾನವಿತ್ತು ಎಂಬುದು ಒಪ್ಪಿಕೊಂಡಿದ್ದಾರೆ, ದರ್ಗಾ ದಿವಾನರ ಹೇಳಿಕೆಯಿಂದ ಇದು ಐತಿಹಾಸಿಕ ದೃಷ್ಟಿಯಿಂದ ಜೈನ ಧರ್ಮದ ಬೇರುಗಳು ಅಜ್ಮೆರದಲ್ಲಿ ಆಳವಾಗಿ ಇದ್ದವು ಎಂಬುದು ಒಪ್ಪಿಕೊಮಡಿರುವುದು ಸಾಬೀತಾಗುತ್ತದೆ. ಈ ವಿಷಯ ಕೇವಲ ಧಾರ್ಮಿಕ ಅಲ್ಲದೆ, ಐತಿಹಾಸಿಕ ವಾಸ್ತವ ಮತ್ತು ಪುರಾತತ್ವ ಸಾಕ್ಷಿಗಳಿಗೆ ಕೂಡ ಸಂಬಂಧಿತ ಆಗಿದೆ ಎಂದು ಹೇಳಿದರು. ಅಜ್ಮೆರ ದರ್ಗಾ ಇದು ಶಿವ ಮಂದಿರ ಇರುವುದರಿಂದ ಜೈನ ಮಂದಿರ ಕೂಡ ಇತ್ತು ಎಂಬುದು ನಾವು ದಾವೆ ಮಾಡಿದ್ದೇವೆ. ದಿವಾನರ ಆಗ್ರಹದಿಂದ ನಮ್ಮ ಅಂಶ ಇನ್ನಷ್ಟು ಗಟ್ಟಿ ಆಗಿದೆ. ಒಂದು ದಿನ, ಭಗವಾನ ಶಿವನ ಸಂಕಟಮೋಚನ ದೇವಸ್ಥಾನ ಕೆಡವಿ ದರ್ಗಾ ಕಟ್ಟಲಾಗಿದೆ ಎಂಬುದು ಬಹಿರಂಗವಾಗಲಿದೆ.