ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯಲಿರುವ ಲಷ್ಕರ್-ಎ-ತೊಯ್ಬಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ‘ಹಮಾಸ್’ ಭಯೋತ್ಪಾದಕರು!

ನವದೆಹಲಿ – ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ಜೈಶ್- ಎ- ಮಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ಹಮಾಸ್ ನ ಭಯೋತ್ಪಾದಕರು ಕೂಡ ಉಪಸ್ಥಿತರಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮ ರಾವಲಕೋಟ್ ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಸ್ಥಳದಲ್ಲಿ ಹಮಾಸ್ ಭಯೋತ್ಪಾದಕ ನಾಯಕರ ಪೋಸ್ಟರ್ ಗಳನ್ನು ಸಹ ಅಂಟಿಸಲಾಗಿದೆ. ಸಾಬೀರ್ ಶಹೀದ್ ಸ್ಟೇಡಿಯಂ ನಲ್ಲಿ ‘ಕಾಶ್ಮೀರ ಸಾಲಿಡೇರಿಟಿ ಅಂಡ್ ಅಲ್ ಅಕ್ಸಾ ಫ್ಲಡ್ ಕಾನ್ಫರೆನ್ಸ್ ‘ ಎಂಬ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಹಮಾಸ್ ವಕ್ತಾರ ಖಾಲಿದ್ ಕದ್ದುಮಿ ಭಾಷಣ ಕೂಡ ಇರಲಿದೆ ಎಂದುವರದಿಯಾಗಿದೆ.

೧. ಭಾರತ ಸರಕಾರವು ಇಲ್ಲಿಯತನಕ ಹಮಾಸ್ ನನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿಲ್ಲ. ಭಾರತ ಸತತವಾಗಿ ಪ್ಯಾಲೆಸ್ಟೈನ್ ನ ಸಮರ್ಥನೆ ಮಾಡುತ್ತಾ ಬಂದಿದೆ. ಹಮಾಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕೆಂದು ಇಸ್ರೇಲ್ ಆಗಾಗ ಭಾರತಕ್ಕೆ ಆಗ್ರಹಿಸಿದೆ. ೨೦೦೮ ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಲಷ್ಕರ್-ಎ-ತೊಯ್ಬಾ ಒಂದು ಭಯೋತ್ಪಾದಕ ಸಂಘಟನೆ ಎಂದು ೨೦೨೩ ರಲ್ಲಿ ಇಸ್ರೇಲ್ ಘೋಷಿಸಿತ್ತು.

೨. ಕಳೆದ ವರ್ಷ ಆಗಸ್ಟ್ ನಲ್ಲಿ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಸೈಫುಲ್ಲಾ ಖಾಲಿದ್ ನಡುವೆ ಸಭೆ ನಡೆದಿತ್ತು. ಕತಾರ್ ನ ರಾಜಧಾನಿ ದೋಹಾದಲ್ಲಿ ನಡೆದ ಈ ಸಭೆಯ ನಂತರ ಭಾರತ ಎಚ್ಚೆತ್ತುಕೊಂಡಿತ್ತು. ಸೈಫುಲ್ಲಾ ಖಾಲಿದ್ ನನ್ನು ೨೦೧೮ ರಲ್ಲಿ ಅಮೆರಿಕಾ ಭಯೋತ್ಪಾದಕನೆಂದು ಘೋಷಿಸಿದೆ. ಖಾಲಿದ್ ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಹಾಫಿಜ್ ಸಯಿದ್ ನ ಆಪ್ತನೆಂದು ತಿಳಿಯಲಾಗಿದೆ.

೩. ಗೂಢಚಾರ ವಿಭಾಗದ ಪ್ರಕಾರ ಪಾಕಿಸ್ತಾನ ಈ ಮೂಲಕ ಜಮ್ಮು-ಕಾಶ್ಮೀರದ ವಿಷಯವನ್ನು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ. ಪ್ಯಾಲೆಸ್ಟೈನ್ ಮತ್ತು ಕಾಶ್ಮೀರ ಒಂದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಎರಡೂ ಪ್ರದೇಶಗಳಲ್ಲಿ ಮುಸಲ್ಮಾನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ತೋರಿಸಿ ಅನ್ಯ ಇಸ್ಲಾಮಿ ದೇಶಗಳನ್ನು ಒಗ್ಗೂಡಿಸಲು ಕರೆ ನೀಡಬಹುದು ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಪ್ಯಾಲೆಸ್ಟೈನ್ ಗೆ ಬೆಂಬಲ ನೀಡುವ ಭಾರತಕ್ಕೆ ಹಮಾಸ್ ದಿಂದ ಸಿಕ್ಕ ಉಡುಗೊರೆ ಎಂದು ತಿಳಿಯಬೇಕೆ? ಭಾರತವು ಈಗ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ಪ್ಯಾಲೆಸ್ಟೈನ್ ಗೆ ಸಮರ್ಥನೆ ನೀಡುವುದರ ಬಗ್ಗೆ ಪುನರ್ವಿಚಾರ ಮಾಡುವುದು ಆವಶ್ಯಕವಾಗಿದೆ.