ನಕ್ಸಲವಾದವನ್ನು ಕಿತ್ತೆಸೆಯುವ ಯೋಜನೆ

’ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)’, ಅಂದರೆ ’ಸಿಪಿಐ (ಎಮ್)’ ಈ ರಾಜಕೀಯ ಪಕ್ಷ ಸಪ್ಟೆಂಬರ ೨೧ ರಿಂದ ೨೦ ಅಕ್ಟೋಬರ ೨೦೧೪ ಈ ಅವಧಿಯಲ್ಲಿ ಪಕ್ಷದ ೨೦ ನೇ ವಾರ್ಷಿಕೋತ್ಸವದ ನಿಮಿತ್ತದಲ್ಲಿ ೨೫ ಪುಟಗಳ ಒಂದು ಪುಸ್ತಿಕೆಯನ್ನು ಪ್ರಕಟಿಸಿತು. ವಾಸ್ತವದಲ್ಲಿ ೨೦೦೯ ರಿಂದಲೇ ನಮ್ಮ ದೇಶದಲ್ಲಿ ’ಸಿಪಿಐ (ಎಮ್)’ಗೆ ’ಕಾನೂನುಬಾಹಿರ ಕೃತ್ಯ ಪ್ರತಿಬಂಧಾತ್ಮಕ ಕಾನೂನು (ಯುಎಪಿಎ)’ ಇದರ ಮೂಲಕ ನಿರ್ಬಂಧ ಹೇರಲಾಗಿದೆ. ಚಾರೂ ಮುಜೂಮ್‌ದಾರ್ ಮತ್ತು ಕಾನಾಯೀ ಚಟರ್ಜಿ ಇವರು ೧೯೬೮ ರಲ್ಲಿ ನಕ್ಸಲ ಚಳುವಳಿ ಆರಂಭಿಸಿದ್ದರು. ಅನಂತರ ಈ ಚಳುವಳಿಯ ಕಾರ್ಯಾಚರಣೆಯಲ್ಲಿ ಬಿರುಕು ಬಿದ್ದು ಅನೇಕ ಗುಂಪುಗಳಾದವು. ಅನಂತರ ೨೧ ಸಪ್ಟೆಂಬರ್ ೨೦೦೪ ರಲ್ಲಿ ಮಾರ್ಕ್ಸ್, ಲೆನಿನ್ ಹಾಗೂ ಮಾವೋ ಇವರ ತತ್ತ್ವಗಳಿಂದ ಪ್ರೇರಣೆ ಪಡೆದವರು ಒಗ್ಗಟ್ಟಾಗಿ ’ಸಿಪಿಐ (ಎಮ್)’ ಈ ಸಂಘಟನೆಯನ್ನು ಸ್ಥಾಪಿಸಿದರು. ಅಮೇರಿಕಾ ಪುರಸ್ಕೃತ ಬಂಡವಾಳದಾರರು ಮತ್ತು ಈ ದೇಶದಲ್ಲಿ ಉಳಿದಿರುವ ಊಳಿಗಮಾನ್ಯ ಪ್ರವೃತ್ತಿಯನ್ನು ಸಂಪೂರ್ಣ ನಾಶಗೊಳಿಸಲು ಸಶಸ್ತ್ರ ಕ್ರಾಂತಿಯ ಆಧಾರದಲ್ಲಿ ಅಧಿಕಾರ ವಶಪಡಿಸಿಕೊಳ್ಳುವ ಧ್ಯೇಯವನ್ನು ಈ ಸಂಘಟನೆ ನಿರ್ಧರಿಸಿತು.

ನಕ್ಸಲವಾದಿಗಳು ಕಳೆದ ೨೦ ವರ್ಷಗಳಲ್ಲಿ ಮಾಡಿದ ಹತ್ಯೆಗಳು

  • ಅರೆಸೈನಿಕಪಡೆ ಮತ್ತು ಪೊಲೀಸ್ ದಳಗಳ ಮೇಲೆ ಅನೇಕ ಆಕ್ರಮಣ ಮಾಡಿ ೩ ಸಾವಿರದ ೯೦ ಕಮಾಂಡೋ ಅಥವಾ ಪೊಲೀಸರ ಹತ್ಯೆ
  • ಇಂದಿನ ವರೆಗೆ ವಿವಿಧ ಆಕ್ರಮಣಗಳಲ್ಲಿ ೪ ಸಾವಿರದ ೭೭ ಜನರು ಗಾಯಾಳುಗಳು
  • ೨ ಸಾವಿರದ ೩೬೬ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ೧ ಲಕ್ಷ ೧೯ ಸಾವಿರದ ೬೮೨ ಮದ್ದು ಗುಂಡುಗಳ ಅಪಹರಣ

೧. ನಕ್ಸಲವಾದಿಗಳು ಕಳೆದ ೨೦ ವರ್ಷಗಳಲ್ಲಿ ಮಾಡಿದ ಹತ್ಯೆಗಳು

ದೇಶದ ಗ್ರಾಮೀಣ ಪ್ರದೇಶಗಳಿಂದ ಈ ಕ್ರಾಂತಿ ಯನ್ನು ಪ್ರಾರಂಭಿಸಿ ನಂತರ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಯೋಜನೆ ಈ ಸಂಘಟನೆಯದ್ದಾಗಿದೆ. ’ಸಿಪಿಐ (ಎಮ್)’ ಈ ಸಂಘಟನೆಯ ಅಭಿಪ್ರಾಯಕ್ಕನುಸಾರ ’ನಗರ ಪ್ರದೇಶದಲ್ಲಿ ಅವರ ವಿಚಾರಶೈಲಿಗೆ ಹೊಂದಾಣಿಕೆಯಾಗುವ ಕಾರ್ಯಕರ್ತರು, ಸಂಘಟನೆ ಪುರಸ್ಕೃತ ಕ್ರಾಂತಿಗೆ ಸಹಾನುಭೂತಿ ನೀಡಿ ವ್ಯಾಪಕ ಜನಾಂದೋಲನವನ್ನು ಮುಂದಕ್ಕೊಯ್ಯುವರು.’ ಇದೇ ವಿಚಾರದಲ್ಲಿ ಮುಳುಗಿರುವ ’ಸಿಪಿಐ (ಎಮ್)’ ಸಂಘಟನೆಯ ಕರಪತ್ರಕ್ಕನುಸಾರ ಕಳೆದ ೨೦ ವರ್ಷಗಳಲ್ಲಿ ಅವರು ಅನೇಕ ಪರಿಶಿಷ್ಟ ಜಾತಿ-ಪಂಗಡಗಳ ಜನರನ್ನು ಕೇವಲ ಪೊಲೀಸರ ಸುದ್ದಿಗಾರರಾಗಿದ್ದಾರೆಂಬ ಸಂಶಯದಲ್ಲಿ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ, ಅದರ ಬಗ್ಗೆ ಮಾತ್ರ ಈ ಪತ್ರಿಕೆ ಮೌನ ವಹಿಸಿದೆ. ಚಳುವಳಿಯಲ್ಲಿನ ಕ್ರೌರ್ಯದಿಂದ ಹತಾಶರಾಗಿ ಆತ್ಮಸಮರ್ಪಣೆ ಮಾಡಿಕೊಂಡಿರುವ ತಮ್ಮ ಸಹಚರರನ್ನು ಕೂಡ ಮಾವೋವಾದಿ ಗಳು ಅಮಾನವಿಯವೀಯವಾಗಿ ಹತ್ಯೆ ಮಾಡಿದರು. ಈ ದೇಶದಲ್ಲಿ ಸಾಮಾಜಿಕ ನ್ಯಾಯ, ನಿಜವಾದ ಸ್ವಾತಂತ್ರ್ಯ, ಪ್ರಜಾರಾಜ್ಯದ ಸ್ಥಾಪನೆ ಹಾಗೂ ದೇಶವನ್ನು ಮುರಿಯಲು ಸಹಜವಾಗಿ ಸಾಧ್ಯ ವಾಗಬೇಕೆಂಬಂತಹ ಸ್ವಯಂನಿರ್ಣಯದ ಸ್ವಾತಂತ್ರ್ಯ ಬೇಕಾಗಿರು ವುದರಿಂದ ’ಸಶಸ್ತ್ರ ಕ್ರಾಂತಿ’ ಒಂದೇ ಮಾರ್ಗವಾಗಿದೆಯೆಂಬುದು ಈ ಸಂಘಟನೆಯ ದೃಢ ಅಭಿಪ್ರಾಯವಾಗಿದೆ.

೨. ’ಸಿಪಿಐ (ಎಮ್)’ ಈ ಸಂಘಟನೆಯ ಉದ್ದೇಶ

’ಸಿಪಿಐ (ಎಮ್)’ ಈ ಸಂಘಟನೆಯು ಮುದ್ರಿಸಿದ ಪುಸ್ತಿಕೆ ಯಲ್ಲಿ ಈ ಉದ್ದೇಶವನ್ನು ಸಾಧಿಸಲು ೩ ಉತ್ತಮವಾದ ಮಾರ್ಗ ಗಳನ್ನೂ ನಮೂದಿಸಿಲಾಗಿದೆ. ಅವು ಮುಂದಿನಂತಿವೆ –

ಅ. ಮೊದಲ ಮಾರ್ಗವೆಂದರೆ ’ಸಿಪಿಐ (ಎಮ್)’ ಸಂಘಟನೆ.

ಆ. ಅನಂತರ ದಂಡಕಾರಣ್ಯದಲ್ಲಿ ಸಕ್ರಿಯವಾಗಿರುವ ’ಪೀಪಲ್ಸ್ ಲಿಬರೇಶನ್ ಆರ್ಮಿ’ ಹಾಗೂ

ಇ. ಈ ಸಂಘಟನೆಯ ಕಾನೂನುಬಾಹಿರ ಕೃತ್ಯಗಳಿಗಾಗಿ ನಗರ ಭಾಗಗಳಲ್ಲಿ ಸಹಾನುಭೂತಿ ಮತ್ತು ಸಂಪನ್ಮೂಲಗಳನ್ನು ನಿರ್ಮಿಸುವ ನಗರ ಪ್ರದೇಶಗಳ ಸಂಘಟನೆ.

ಸಂಘಟನೆಯ ಈ ಉದ್ದೇಶವನ್ನು ಈಡೇರಿಸಲು ೨೦೦೭ ರಲ್ಲಿ ’ಸಿಪಿಐ (ಎಮ್)’ ತನ್ನ ರಣನೀತಿಯನ್ನು ಸ್ಪಷ್ಟಪಡಿಸಿತ್ತು. ಅದರಲ್ಲಿ ಮೊಟ್ಟಮೊದಲು ಹೆಚ್ಚೆಚ್ಚು ಭಾರತೀಯ ಸೈನ್ಯ, ಪೊಲೀಸ್ ಮತ್ತು ಸರಕಾರಿ ಅಧಿಕಾರಿಗಳನ್ನು ಹತ್ಯೆಗೊಳಿಸಲು ರಣನೀತಿಯನ್ನು ರಚಿಸಿತ್ತು. ಸಂಘಟನೆಗೆ ಅಪೇಕ್ಷಿತ ಮುಕ್ತಕ್ಷೇತ್ರ ನಿರ್ಮಾಣ ಮಾಡಲು ಹೀಗೆ ಮಾಡುವುದು ಆವಶ್ಯಕವಾಗಿತ್ತು ಮತ್ತು ಈ ನಕ್ಸಲವಾದಿ ಚಳುವಳಿಗಾಗಿ ಹೊಸ ಯುವಕರ ಭರ್ತಿ, ಔಷಧಗಳು ಮತ್ತು ಜೀವನಾವಶ್ಯಕ ವಸ್ತುಗಳ ಪೂರೈಕೆಯ ವ್ಯವಸ್ಥೆ ಹಾಗೂ ಹೋರಾಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆಯುವ ಉದ್ದೇಶವನ್ನೂ ನಿರ್ಧರಿಸಲಾಗಿತ್ತು, ಈ ಚಳುವಳಿಯನ್ನು ದೂರದ ವರೆಗೆ ಹಬ್ಬಿಸಲು ಪ್ರಾಮುಖ್ಯವಾಗಿ ಕಾರ್ಮಿಕರು, ಅರೆಕುಶಲಕರ್ಮಿಗಳು, ಮಧ್ಯಮವರ್ಗದ ಬುದ್ಧಿಜೀವಿಗಳು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು, ಅದೇ ರೀತಿ ಈ ಚಳುವಳಿಯ ಯಶಸ್ಸಿಗಾಗಿ ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡದ ವರೆಗೆ ತಲುಪಲು ಹೆಚ್ಚು ಪ್ರಯತ್ನ ಮಾಡಬೇಕು’, ಎಂದು ನಿರ್ಧರಿಸಲಾಯಿತು. ಈ ಚಳುವಳಿಯಲ್ಲಿನ ಕಾರ್ಯಕರ್ತರಿಗೆ ಕಾರ್ಮಿಕರ ಶೋಷಣೆಯ ವಿರುದ್ಧ, ಜಾಗತಿಕೀಕರಣವನ್ನು ವಿರೋಧಿಸಲು ಹಾಗೂ ಹಿಂದೂ ವರ್ಚಸ್ವದ ವಿರುದ್ಧ ಹೋರಾಡಲು, ಪ್ರೋತ್ಸಾಹ ನೀಡುವ ವಿಷಯದಲ್ಲಿಯೂ ಚರ್ಚೆ ಯಾಗಿತ್ತು. ಇಷ್ಟು ಮಾತ್ರವಲ್ಲ, ನಗರ ನಕ್ಸಲವಾದಿ ಸಂಘಟನೆಯ ಕಾರ್ಯಕರ್ತರಿಗೆ ಅರೆಸೇನಾಪಡೆ, ಪೊಲೀಸ್ ಪಡೆ ಮತ್ತು ವರಿಷ್ಠ ಸರಕಾರಿ ಅಧಿಕಾರಿಗಳ ವರ್ತುಲದಲ್ಲಿ ನುಸುಳಲು ಕೂಡ ಪ್ರೋತ್ಸಾಹ ನೀಡುವವರಿದ್ದರು.

೨ ಅ. ’ಸಿಪಿಐ (ಎಮ್)’ನ ಪದ್ಧತಿ : ಆಡಳಿತ ವ್ಯವಸ್ಥೆಯಲ್ಲಿ ನುಸುಳಿರುವ ಈ ಸಂಘಟನೆಯ ನಗರದ ಕಾರ್ಯಕರ್ತರು ಚಳವಳಿಯ ಉದ್ದೇಶಪೂರ್ತಿಗಾಗಿ ಸರಿಯಾದ ಮಾಹಿತಿಯನ್ನು ನೀಡುವುದು, ಮಹತ್ವದ ಮಾಹಿತಿ ನೀಡಿ ಚಳುವಳಿಗೆ ಎಲ್ಲ ರೀತಿಯಲ್ಲಿ ಸಹಾಯ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಅವಶ್ಯಕತೆಗನುಸಾರ ಪೂರೈಕೆ, ಪ್ರಸಾರಮಾಧ್ಯಮಗಳ ವ್ಯವಸ್ಥಾಪನೆ, ಔಷಧಗಳ ಪೂರೈಕೆ, ಚಳುವಳಿಗೆ ಪ್ರಸಿದ್ಧಿ ಹಾಗೂ ಗಾಯಗೊಂಡಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ ಚಳುವಳಿಗೆ ಆಂತರಿಕ ಸಹಾಯ ಮಾಡುವುದು ಇತ್ಯಾದಿ ಅಪೇಕ್ಷಿತವಾಗಿದೆ. ಇಂದಿನ ಸ್ಥಿತಿಯಲ್ಲಿ ದೇಶದಲ್ಲಿ ಇಂತಹ ಸುಮಾರು ೨೨೭ ವಿವಿಧ ಸಂಸ್ಥೆಗಳು ಕಾರ್ಯನಿರತವಾಗಿವೆ, ಅವುಗಳು ಮೇಲ್ನೋಟಕ್ಕೆ ನಿರುಪದ್ರವಕಾರಿ ಅನಿಸುತ್ತಿದ್ದರೂ ಚಳುವಳಿಯ ಕಾರ್ಯ ಆಳವಾಗಿ ನಡೆಯುತ್ತಿದೆ. ಈ ಸಂಸ್ಥೆಗಳು ’ಎ ೪’ ಎಂದು ವರ್ಗೀಕರಣವಾಗಿದ್ದು ಆ ಸಂಸ್ಥೆಗಳನ್ನು ಸಾಮ್ಯವಾದಿಗಳಲ್ಲದ ಸಮಾಜವಾದಿ ವಿಚಾರಶೈಲಿಯ ಸಂಘಟನೆಗಳೆಂದು ಗುರುತಿಸಲಾಗುತ್ತದೆ. ಈ ಸಂಸ್ಥೆಗಳಲ್ಲಿನ ಕೆಲವು ಸದಸ್ಯರು ಕೂಡ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇಚ್ಛೆಯನ್ನಿಟ್ಟು ಕೊಂಡಿರುತ್ತಾರೆ. ಅವರನ್ನು ಪ್ರಾರಂಭದಲ್ಲಿ ಪ್ರಬೋಧನೆಗಾಗಿ ಆರಿಸಲಾಗುತ್ತದೆ. ಅನಂತರ ಅವರನ್ನು ’ಎ ೩’, ಅಂದರೆ ಸಶಸ್ತ್ರ ಕ್ರಾಂತಿ ಮಾಡುವವರ ವರೆಗೆ ಪದೋನ್ನತಿ (ಮುಂಬಡ್ತಿ) ಆಗುತ್ತಿದೆ. ಈ ಚಳುವಳಿಯ ವಿಷಯದಲ್ಲಿ ಸಹಾನುಭೂತಿ ಮೂಡಿಸುವ ಪಕ್ಷದ ಕಾರ್ಯಕರ್ತರು ಕೆಲವರು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ವಿದ್ಯಾಪೀಠಗಳ ವಿದ್ಯಾರ್ಥಿ ಚಳುವಳಿಯಲ್ಲಿಯೂ ಕಾಣಿಸುತ್ತಾರೆ. ’ಸಿಪಿಐ (ಎಮ್)’ ಈ ಪಕ್ಷ ಭಾಜಪವನ್ನು ಮೊದಲ ಕ್ರಮಾಂಕದ ಶತ್ರುವೆಂದು ತಿಳಿಯುತ್ತದೆ ಹಾಗೂ ಅದನ್ನು ಸೋಲಿಸುವ ಧ್ಯೇಯವನ್ನಿಟ್ಟುಕೊಂಡಿದೆ. ಅದಕ್ಕಾಗಿ ವಿರೋಧಿ ಪಕ್ಷಗಳಲ್ಲಿ ಪಾಲ್ಗೊಂಡು ಭಾಜಪದ ವಿರುದ್ಧ ಪ್ರಚಾರ ಮಾಡುವ ಆದೇಶ ’ಸಿಪಿಐ (ಎಮ್)’ ನೀಡಿದೆ.

೩. ನಕ್ಸಲೀಯರ ಚಳುವಳಿಯನ್ನು ಕಡಿಮೆ ಮಾಡಲು ಕೇಂದ್ರದಲ್ಲಿನ ಭಾಜಪ ಸರಕಾರ ಮಾಡುತ್ತಿರುವ ಪ್ರಯತ್ನ !

ಶ್ರೀ. ಪ್ರವೀಣ ದೀಕ್ಷಿತ

ವಾಸ್ತವದಲ್ಲಿ ನೋಡಿದರೆ ನಕ್ಸಲ್ ಚಳುವಳಿ ಬಂಗಾಲದ ಸಿಲಿಗುಡಿಯ ಸಮೀಪದ ನಕ್ಸಲ್‌ಬಾರಿಯಿಂದ ಆರಂಭವಾಗಿದ್ದರೂ, ಅದರ ವಿಸ್ತಾರ ಅಲ್ಪಾವಧಿಯಲ್ಲಿಯೆ ಪಶುಪತಿಯಿಂದ ತಿರುಪತಿಯ ವರೆಗೆ ಹೆಚ್ಚು ಕಡಿಮೆ ಎಲ್ಲ ರಾಜ್ಯಗಳಲ್ಲಿ ಹರಡಿರುವುದು ಕಾಣಿಸುತ್ತದೆ. ೨೦೧೩ ರ ವರೆಗೆ ದೇಶದಲ್ಲಿನ ೧೧೦ ಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ಈ ಚಳುವಳಿಯ ವರ್ಚಸ್ಸು ಸಂಪೂರ್ಣ ನಿರ್ಮಾಣವಾಗಿತ್ತು; ಆದರೆ ೨೦೧೪ ರಲ್ಲಿ ಕೇಂದ್ರದಲ್ಲಿ ಭಾಜಪ ಸರಕಾರವು ಅಧಿಕಾರಕ್ಕೆ ಬಂತು. ಅನಂತರ ಮೋದಿ ಸರಕಾರ ’ಅಂತ್ಯೋದಯ’ದ ಸಿದ್ಧಾಂತಕ್ಕನುಸಾರ ಅವರ ಎಲ್ಲ ವಿಕಾಸಾತ್ಮಕ ಉಪಕ್ರಮಗಳು ಯಾವುದೇ ಅಡಚಣೆ ಇಲ್ಲದೆ ಕೊನೆಯ ವ್ಯಕ್ತಿಯ ವರೆಗೆ ತಲುಪಬೇಕು’, ಎಂದು ’ಒಂದು ಕಿಟಕಿ ಸಹಾಯ ಯೋಜನೆ’ ಸಹಿತ ವಿವಿಧ ವಿಕಾಸಾತ್ಮಕ ಉಪಾಯಯೋಜನೆಯನ್ನು ಆರಂಭಿಸಿತು. ಈ ಯೋಜನೆಯ ಅಂತರ್ಗತ ನಿವಾಸದ ಪ್ರಮಾಣಪತ್ರ ಹಾಗೂ ಆವಶ್ಯಕ ಇನ್ನಿತರ ಎಲ್ಲ ಪ್ರಮಾಣಪತ್ರಗಳು, ಯುವಕರಿಗೆ ವೃತ್ತಿಪರ ಕೌಶಲ್ಯ, ಉದ್ಯೋಗ ಅಥವಾ ವ್ಯವಹಾರವನ್ನು ಆರಂಭಿಸಲು ಸೌಲಭ್ಯಗಳ ಲಾಭ ಸಿಗುವಂತೆಯೂ ವ್ಯವಸ್ಥೆಯನ್ನೂ ಮಾಡಲಾಯಿತು. ಈ ಯೋಜನೆಗಳ ಹೊರತು ಅನೇಕ ರಾಜ್ಯ ಸರಕಾರಗಳು ಕೂಡ ’ಸಿಪಿಐ (ಎಮ್)’ ಪುರಸ್ಕೃತ ನಕ್ಸಲವಾದಿ ಚಳುವಳಿಯಿಂದ ಹೊರಬರಲು ಇಚ್ಛಿಸುವವರಿಗಾಗಿ ’ಸಮರ್ಪಣ ಧೋರಣೆ’ಯನ್ನು ಸಿದ್ಧಪಡಿಸಿವೆ. ನಕ್ಸಲವಾದಿಗಳು ’ಬಾಲ ಸೈನಿಕ’ರೆಂದು ಬಂಧಿಸಿದ ಹಾಗೂ ಚಳುವಳಿಯಲ್ಲಿ ಮಹತ್ವದ ಹುದ್ದೆಯಲ್ಲಿ ಕಾರ್ಯನಿರತ ಮಹಿಳೆಯರ ಸಹಿತ ಅನೇಕ ನಕ್ಸಲವಾದಿಗಳು ಈ ಯೋಜನೆಯ ಲಾಭ ಪಡೆಯಲು ಮುಂದೆ ಬಂದಿದ್ದಾರೆ. ಸರಕಾರದ ಈ ಧೋರಣೆಯಿಂದ ನಕ್ಸಲ ಚಳುವಳಿಗೆ ದೊಡ್ಡ ಆಘಾತವಾಗಿದೆ. ಇದರ ಹೊರತು ಸರಕಾರ ಉತ್ಖನನ ಕ್ಷೇತ್ರದಲ್ಲಿ ಸ್ಥಳೀಯ ಪರಿಶಿಷ್ಟ ಪಂಗಡದ ಕಾರ್ಮಿಕರ ಸಹಾಯದಿಂದ ಗಣಿಯ ಕೆಲಸವನ್ನು ಆರಂಭಿಸಿದೆ. ಇದರಿಂದ ಅನೇಕರಿಗೆ ಶಾಶ್ವತ ಉದ್ಯೋಗ ಸಿಗುತ್ತಿದ್ದು ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕ ಪರಿಣಾಮವಾಗಿರುವುದು ಕಾಣಿಸುತ್ತಿದೆ. ಈ ಹಿಂದೆ ನಕ್ಸಲ ಚಳುವಳಿಯಿಂದ ಪೀಡಿತವಾಗಿದ್ದ ಜಿಲ್ಲೆಗಳ ಪೈಕಿ ಅನೇಕ ಜಿಲ್ಲೆಗಳನ್ನು ಭಾರತ ಸರಕಾರವು ’ಮಹತ್ವಾಕಾಂಕ್ಷಿ ಜಿಲ್ಲೆಗಳು’ ಎಂದು ಕೂಡ ಘೋಷಿಸಿದೆ, ಹಾಗೂ ಈ ಜಿಲ್ಲೆಗಳಲ್ಲಿ ರಸ್ತೆ ಮತ್ತು ದೂರಸಂಚಾರ ಸೌಲಭ್ಯಗಳ ಸಹಿತ ಒಳ್ಳೆಯ ವೈದ್ಯಕೀಯ ಮತ್ತು ಶೈಕ್ಷಣಿಕ ಸೌಲಭ್ಯಗಳ ಮೂಲಕ ಸ್ಥಳೀಯ ಸ್ಥಿತಿ ಸುಧಾರಿಸಲು ಸರಕಾರವು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ.

೪. ನಕ್ಸಲ ಚಳುವಳಿಯನ್ನು ತೊಡೆದುಹಾಕಲು…

ಭಾರತ ಸರಕಾರ ನಕ್ಸಲ್ ಹಾವಳಿಯಿಂದ ಪೀಡಿತ ಜಿಲ್ಲೆಗಳಲ್ಲಿನ ಪೊಲೀಸ್ ದಳಗಳಲ್ಲಿ ರಹಸ್ಯ ಮಾಹಿತಿ, ತರಬೇತಿ ಕಾರ್ಯಕ್ರಮಗಳ ವಿಕಾಸಕ್ಕಾಗಿ ಉಪಾಯಯೋಜನೆಯನ್ನು ಹಮ್ಮಿಕೊಂಡಿದೆ. ಕಾನೂನನ್ನು ಅನುಷ್ಠಾನಗೊಳಿಸುವ ವ್ಯವಸ್ಥೆಯ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು ಅದು ಹೆಚ್ಚುವರಿ ಅರೆಸೈನಿಕಪಡೆ ಮತ್ತು ಹಣಕಾಸಿನ ವ್ಯವಸ್ಥೆಯನ್ನೂ ಮಾಡಿದೆ. ಅದರ ಪರಿಣಾಮದಿಂದ ನಕ್ಸಲವಾದಿ ಚಳವಳಿಯ ಹಾವಳಿಯಿದ್ದ ಜಿಲ್ಲೆಗಳ ಸಂಖ್ಯೆ ಈಗ ೧೧೦ ರಿಂದ ೩೪ ಕ್ಕೆ ಇಳಿದಿದೆ. ಸದ್ಯ ಛತ್ತೀಸ್‌ಗಡದ ಅಬುಜಮಲ ಗುಡ್ಡಪ್ರದೇಶದಲ್ಲಿ ’ಸಿಪಿಐ (ಎಮ್)’ ಸಕ್ರಿಯವಾಗ್ತಿದೆ.ಕಠಿಣ ಭೂಭಾಗ, ಸಂಪರ್ಕಿಸಲು ಅಸಾಧ್ಯವಾಗಿರುವ ಜನ ವಸತಿಯಿರುವ ಈ ಪ್ರದೇಶವನ್ನು ’ಮುಕ್ತ ಕ್ಷೇತ್ರ’ ಎನ್ನುವ ನಕ್ಸಲವಾದಿಗಳು ಹರಡಿರುವ ಅರಾಜಕತೆಗೆ ಸ್ಥಳೀಯರ ಅಸಹಾಯಕತೆಯೂ ಕಾರಣವಾಗಿದೆ. ಈ ಪ್ರದೇಶದಲ್ಲಿ ನಕ್ಸಲರ ಆಕ್ರಮಣಗಳಿಂದ ಸುರಕ್ಷಾವ್ಯವಸ್ಥೆಗಾಗುವ ಹಾನಿಯನ್ನು ಕಡಿಮೆಗೊಳಿಸುವುದು, ನಕ್ಸಲವಾದಿಗಳ ವಿರುದ್ಧ ಹೋರಾಡಲು ಸ್ಥಳೀಯರಿಗೆ ಸಹಾಯ ಮಾಡುವುದು ಹಾಗೂ ಇದರ ಮೂಲಕ ನಕ್ಸಲರ ಚಳುವಳಿಯನ್ನು ತೊಡೆದುಹಾಕಲು ಸುರಕ್ಷಾ ವ್ಯವಸ್ಥೆಯಲ್ಲಿ ತಕ್ಷಣ ಹೊಸ ಡ್ರೋನ್ ತಂತ್ರಜ್ಞಾನವನ್ನು ಅವಲಂಬಿಸುವ ಅವಶ್ಯಕತೆಯಿದೆ.

ಇದರ ಹೊರತು ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ವಿರೋಧಿ ಪಕ್ಷಗಳು, ಮಾಧ್ಯಮಗಳು, ಶಿಕ್ಷಣತಜ್ಞರು ಮತ್ತು ವ್ಯಾಪಾರಿಗಳು, ಸಮಾಜದಲ್ಲಿ ಪ್ರಭಾವಶಾಲಿಯಾಗಿರುವವರು ಇದನ್ನು ಗಮನಿಸುವ ಅವಶ್ಯಕತೆಯಿದೆ, ಏಕೆಂದರೆ, ’ಸಿಪಿಐ (ಎಮ್)’ನ ವಿಚಾರಧಾರೆ ಬದಲಾಗಲಾರದು. ಅವರು ಸಶಸ್ತ್ರ ಕ್ರಾಂತಿಯ ಮೂಲಕ ರಾಜಕೀಯ ಅಧಿಕಾರವನ್ನು ಕಬಳಿಸಲು ನಿರ್ಧರಿಸಿದ್ದಾರೆ. ಆದ್ದರಿಂದ ಭಾರತದಲ್ಲಿನ ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಭದ್ರತೆಗಾಗಿ ’ಸಾರ್ವಜನಿಕ ಸುರಕ್ಷಾ ಮಸೂದೆ, ೨೦೨೪’ನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ, ಅದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಬೆಂಬಲಿಸಬೇಕು. ಭಾರತದ ಗೃಹಮಂತ್ರಿಯವರು ಮಾರ್ಚ್ ೨೦೨೬ ರ ಒಳಗೆ ನಕ್ಸಲವಾದವನ್ನು ಕೊನೆಗೊಳಿಸುವ ನಿರ್ಧಾರವನ್ನು ವ್ಯಕ್ತ ಪಡಿಸಿದ್ದಾರೆ. ಈ ಯೋಜನೆಗಳಿಂದ ಅಷ್ಟರವರೆಗೆ ನಕ್ಸಲವಾದವನ್ನು ಬೇರುಸಹಿತ ಕಿತ್ತೆಸೆಯ ಬಹುದೆಂಬ ವಿಶ್ವಾಸವಿದೆ.

– ಶ್ರೀ. ಪ್ರವೀಣ ದೀಕ್ಷಿತ, ಮಾಜಿ ಪೊಲೀಸ ಮಹಾಸಂಚಾಲಕರು ಮುಂಬಯಿ.