ತಿರುವನಂತಪುರಂ (ಕೇರಳ) – ಕೇರಳದಲ್ಲಿ ಮುಸಲ್ಮಾನರ ಜನಸಂಖ್ಯೆ ಹಿಂದುಗಳ ಜನಸಂಖ್ಯೆಯಲ್ಲಿ ಅರ್ಧದಷ್ಟು ಇದೆ; ಆದರೆ ಮುಸಲ್ಮಾನರು ಹೆಚ್ಚು ಮಕ್ಕಳನ್ನು ಜನ್ಮ ನೀಡುತ್ತಿದ್ದಾರೆ. ಕೇರಳದಲ್ಲಿ ಜನಿಸಿರುವ ಸುಮಾರು ಶೇಕಡಾ ೪೪ ರಷ್ಟು ಮುಸಲ್ಮಾನ ಮಕ್ಕಳಿದ್ದಾರೆ. ಇನ್ನೊಂದು ಕಡೆಗೆ ಮುಸಲ್ಮಾನ ಜನರ ಸಾವಿನ ಸಂಖ್ಯೆ ಅವರ ಜನಸಂಖ್ಯೆಯ ತುಲನೆಯಲ್ಲಿ ಬಹಳ ಕಡಿಮೆ ಇದೆ. ಆದ್ದರಿಂದ ಹಿಂದೂಗಳ ತುಲನೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಮುಸಲ್ಮಾನರ ಸಂಖ್ಯೆ ಹಿಂದುಗಳಿಗಿಂತಲೂ ೫ ಪಟ್ಟು ಹೆಚ್ಚು ಇದೆ. ಈ ವಸ್ತುಸ್ಥಿತಿಯ ಮಾಹಿತಿಯನ್ನು ‘ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್’ ನ ವರದಿಯಲ್ಲಿ ನೀಡಲಾಗಿದೆ.
೧. ‘ಭಾರತದಲ್ಲಿನ ಧಾರ್ಮಿಕ ಜನಸಂಖ್ಯಾಶಾಸ್ತ್ರ : ಹೆಚ್ಚುತ್ತಿರುವ ಧಾರ್ಮಿಕ ಅಸಮತೋಲನ’, ಹೀಗೆ ಈ ವರದಿಯ ಹೆಸರು ಇದೆ. ವರದಿಯಲ್ಲಿ ೨೦೦೮ ರಿಂದ ೨೦೨೧ ವರೆಗೆ ಕೇರಳದಲ್ಲಿನ ಹಿಂದೂ, ಮುಸಲ್ಮಾನರು, ಕ್ರೈಸ್ತರು ಮತ್ತು ಇತರ ಜನಾಂಗದ ಅಂಕಿ ಸಂಖ್ಯೆಯ ಕುರಿತು ಸಂಶೋಧನೆ ನಡೆಸಲಾಯಿತು. ಈ ವರದಿಯಲ್ಲಿ ನೂತನ ಜನನ, ಮರಣ ಮತ್ತು ಈ ಜನಾಂಗದಲ್ಲಿನ ಜನಸಂಖ್ಯೆಯ ಕುರಿತು ಅದರ ಮೇಲೆ ಆಗುವ ಪರಿಣಾಮದ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ.
೨. ಇದರಲ್ಲಿ, ೨೦೧೬ ರಿಂದ ಕೇರಳದಲ್ಲಿ ಮುಸಲ್ಮಾನರಲ್ಲಿ ಹೆಚ್ಚಿನ ಮಕ್ಕಳು ಹುಟ್ಟುತ್ತೇವೆ. ೨೦೧೬ ರಲ್ಲಿ ಕೇರಳದಲ್ಲಿ ೨ ಲಕ್ಷ ೭ ಸಾವಿರ ಹಿಂದೂ ಮಕ್ಕಳು ಜನಿಸಿವೆ. ಹಾಗೂ ಇದೇ ಸಮಯದಲ್ಲಿ ೨ ಲಕ್ಷ ೧೧ ಸಾವಿರ ಮುಸಲ್ಮಾನ ಮಕ್ಕಳು ಜನಿಸಿವೆ. ೨೦೧೭ ರಲ್ಲಿ ಕೂಡ ಇದೇ ಪರಿಸ್ಥಿತಿ ಇತ್ತು. ಆಗ ೨ ಲಕ್ಷ ೧೦ ಸಾವಿರದ ೭೧ ಹಿಂದೂ ಮಕ್ಕಳು ಜನಿಸಿದವು, ಹಾಗೂ ಮುಸಲ್ಮಾನರ ೨ ಲಕ್ಷ ೧೬ ಸಾವಿರದ ೫೨೫ ಮಕ್ಕಳು ಜನಿಸಿದ್ದವು. ೨೦೨೦ ವರೆಗೆ ಹೀಗೆ ಮುಂದುವರೆದಿತ್ತು. ಕೇವಲ ೨೦೨೧ ರಲ್ಲಿ ಹಿಂದೂ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ವರ್ಷವಾಗಿತ್ತು.
೩. ರಾಜ್ಯದಲ್ಲಿ ಹಿಂದೂ ಜನಸಂಖ್ಯೆ ಸುಮಾರು ಶೇಕಡಾ ೫೫ ರಷ್ಟು ಮತ್ತು ಮುಸಲ್ಮಾನರ ಜನಸಂಖ್ಯೆ ಸುಮಾರು ಶೇಕಡ ೨೭ ಇರುವಾಗ ಇದು ನಡೆಯುತ್ತಿದೆ. ೨೦೦೮ ರಲ್ಲಿ ಕೇರಳದಲ್ಲಿ ಜನಿಸಿರುವ ಮಕ್ಕಳಲ್ಲಿ ಶೇಕಡ ೪೫ ಹಿಂದೂಗಳಾಗಿದ್ದವು, ಹಾಗೂ ಶೇಕಡ ೩೬ ಮುಸಲ್ಮಾನ ಆಗಿದ್ದವು. ಕ್ರೈಸ್ತರು ಸುಮಾರು ಶೇಕಡಾ ೧೭.೫ ರಷ್ಟು ಇದ್ದವು; ಆದರೆ ೨೦೨೦ ವರಗೆ ಒಟ್ಟು ಜನನದಲ್ಲಿ ಹಿಂದೂ ಮಕ್ಕಳ ಪಾಲು ಶೇಕಡ ೪೧.೪ ವರೆಗೆ ಕಡಿಮೆ ಆಗಿದೆ ಹಾಗೂ ಇದೇ ಸಮಯದಲ್ಲಿ ಒಟ್ಟು ಜನನದಲ್ಲಿ ಮುಸಲ್ಮಾನ ಮಕ್ಕಳ ಪಾಲು ಶೇಕಡಾ ೪೪ ವರೆಗೆ ಹೆಚ್ಚಾಗಿದೆ.
೪. ೧೯೫೦ ರಿಂದ ಕೇರಳದಲ್ಲಿ ಮುಸಲ್ಮಾನರ ಜನಸಂಖ್ಯೆ ಎಲ್ಲಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ೨೦೦೧ ರಿಂದ ೨೦೧೧ ಈ ಸಮಯದಲ್ಲಿ ಕೇರಳದಲ್ಲಿ ಹಿಂದೂ ಜನಸಂಖ್ಯೆ ಕೇವಲ ಶೇಕಡ ೨.೨೩ ಮತ್ತು ಕ್ರೈಸ್ತ ಜನಸಂಖ್ಯೆ ಕೇವಲ ಶೇಕಡ ೧.೩೮ ರಷ್ಟು ಹೆಚ್ಚಾಗಿದೆ ಹಾಗೂ ಈ ಸಮಯದಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇಕಡ ೧೨.೮ ರಷ್ಟು ಹೆಚ್ಚಾಗಿದೆ.
೫. ೨೦೦೮ ರಿಂದ ೨೦೨೧ ಈ ಸಮಯದಲ್ಲಿ ಕೇರಳದಲ್ಲಿ ಸಾವನ್ನಪ್ಪಿರುವ ಮುಸಲ್ಮಾನರ ಪ್ರಮಾಣ ಸುಮಾರು ಶೇಕಡ ೨೦ ರಷ್ಟು ಇತ್ತು, ಅದು ಅವರ ಶೇಕಡ ೨೬.೫ ಜನಸಂಖ್ಯೆಗಿಂತಲೂ ಬಹಳ ಕಡಿಮೆ ಇದೆ. ತದ್ವಿರುದ್ಧ ಹಿಂದೂಗಳಲ್ಲಿ ಸಾವಿನ ಪ್ರಮಾಣ ಸುಮಾರು ಶೇಕಡ ೬೦ ರಷ್ಟು ಇದೆ.
೬. ಕೇರಳದ ಜನಸಂಖ್ಯೆಯಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಮುಸಲ್ಮಾನರ ಸಂಖ್ಯೆ ಏರುತ್ತಿದೆ. ೨೦೨೧ ರಲ್ಲಿ ೧ ಲಕ್ಷ ೪ ಸಾವಿರ ಹೆಚ್ಚಿನ ಜನರು ಮುಸಲ್ಮಾನ ಜನಾಂಗಕ್ಕೆ ಸೇರಿದ್ದಾರೆ, ಹಾಗೂ ಹಿಂದುಗಳ ಜನಸಂಖ್ಯೆ ಕೇವಲ ೧ ಸಾವಿರದ ೯೯ ರಷ್ಟು ಹೆಚ್ಚಾಗಿದೆ. ಕ್ರೈಸ್ತ ಜನಸಂಖ್ಯೆಯಲ್ಲಿ ೬ ಸಾವಿರದ ೨೧೮ ರಷ್ಟು ಇಳಿಕೆ ಆಗಿದೆ. (ಇದರಲ್ಲಿ ಅಕ್ರಮವಾಗಿ ವಾಸಿಸುವ ಬಾಂಗ್ಲಾದೇಶ ಮುಸಲ್ಮಾನ ನುಸುಳುಕೋರರ ಗಣತಿ ಇಲ್ಲ, ಇದು ಕೂಡ ಮರೆಯಬಾರದು ! – ಸಂಪಾದಕರು)
೭. ೨೦೧೧-೨೦ ಸಮಯದಲ್ಲಿನ ಜನಸಂಖ್ಯೆಯಲ್ಲಿ ಮುಸಲ್ಮಾನರ ಪಾಲು ಶೇಕಡ ೨೬ ರಿಂದ ೨೯ ಕ್ಕಿಂತಲೂ ಹೆಚ್ಚಾಗಿದೆ. ಅದೇ ಸಮಯದಲ್ಲಿ ಕೇರಳದ ಜನಸಂಖ್ಯೆಯಲ್ಲಿನ ಹಿಂದುಗಳ ಪಾಲು ಕಡಿಮೆ ಆಗುತ್ತಿದೆ. ಇದೇ ಸಮಯದಲ್ಲಿ ಈ ವ್ಯತ್ಯಾಸ ಹೆಚ್ಚುತ್ತಾ ಹೋಗಬಹುದೆಂದು ವರದಿಯಲ್ಲಿ ಹೇಳಲಾಗಿದೆ.
ಸಂಪಾದಕೀಯ ನಿಲುವುಇದರಿಂದ ಮುಂಬರುವ ೩೦-೪೦ ವರ್ಷಗಳಲ್ಲಿ ಕೇರಳ ಮುಸಲ್ಮಾನ ಬಾಹುಳ್ಯ ರಾಜ್ಯವಾಗುವುದು, ಹೀಗೆ ಕಂಡು ಬರುತ್ತಿದೆ. ಹೀಗೆ ಆದರೆ ಕೇರಳ ಕಾಶ್ಮೀರವಾಗುವುದರಲ್ಲಿ ಆಶ್ಚರ್ಯವಿಲ್ಲ ! ಈ ಸ್ಥಿತಿ ಬರುವ ಮುನ್ನ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಆವಶ್ಯಕವಾಗಿದೆ ! |