ಪ್ರಯಾಗರಾಜ ಕುಂಭಮೇಳ 2025
ಮೌನಿ ಅಮವಾಸ್ಯೆಯಂದು ಸಂಭವಿಸಿದ ದುರಂತವನ್ನು ಎದುರಿಸಿದ ಕೀರ್ತಿ ಸಂತರಿಗೆ ಸಲ್ಲುತ್ತದೆ

ಪ್ರಯಾಗರಾಜ್ – ಮೌನಿ ಅಮವಾಸ್ಯೆಯ ದಿನದಂದು ನಡೆದ ದುರಂತದಲ್ಲಿ ಸಂತರು ತೋರಿಸಿದ ಧೈರ್ಯದಿಂದ ಸನಾತನ ಧರ್ಮದ ವಿರೋಧಿಗಳು ಸೋತರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹೇಳಿದ್ದಾರೆ. ಮಹಾಕುಂಭ ಕ್ಷೇತ್ರದ ಸೆಕ್ಟರ್ 22 ರಲ್ಲಿ ಸಂತೋಷ ದಾಸ್ ಸತುವಾ ಬಾಬಾ ಮತ್ತು ಸ್ವಾಮಿ ರಾಮ ಕಮಲಾಚಾರ್ಯ ಈ ಸಂತರ ಪಟ್ಟಾಭಿಷೇಕ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ತುಳಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರು ಇಬ್ಬರೂ ಸಂತರನ್ನು ಜಗದ್ಗುರು ಹುದ್ದೆಗೆ ನಾಮನಿರ್ದೇಶನ ಮಾಡಿದರು. ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರು, ರಾಮ ಕಮಲಾಚಾರ್ಯ ಮಹಾರಾಜ ಅವರನ್ನು ಇನ್ನು ಮುಂದೆ ‘ಜಗದ್ಗುರು ಸ್ವಾಮಿ ರಾಮ ಕಮಲಾಚಾರ್ಯ ಮಹಾರಾಜ್’ ಮತ್ತು ಸಂತೋಷ ದಾಸ್ ಅವರನ್ನು ‘ಜಗದ್ಗುರು ವಿಷ್ಣು ಸ್ವಾಮಿ ಸಂತೋಷ ದಾಸ ಮಹಾರಾಜ್ ಸತುವಾ ಬಾಬಾ’ ಎಂದು ಕರೆಯಲಾಗುತ್ತದೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಂತರ ಆಶೀರ್ವಾದ ಪಡೆದು, ಹೊಸದಾಗಿ ನೇಮಕಗೊಂಡ ಜಗದ್ಗುರುಗಳಿಗೆ ಶುಭ ಹಾರೈಸಿದರು.

ಮುಖ್ಯಮಂತ್ರಿಗಳು ಮಾತು ಮುಂದುವರೆಸುತ್ತಾ, “ಮೌನಿ ಅಮವಾಸ್ಯೆಯ ದಿನದಂದು ನಡೆದ ಘಟನೆಯಲ್ಲಿ ಸಂತರು ಅಪಾರ ಧೈರ್ಯವನ್ನು ತೋರಿಸಿದರು. ಕೆಲವು ಸಂತರು ಅಪಘಾತಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು; ಆದರೆ ಆ ಸನ್ನಿವೇಶದಲ್ಲಿ, ನಮ್ಮ ಸಂತರು ರಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡರು. ಒಂದು ಕುಟುಂಬವು ಬಿಕ್ಕಟ್ಟನ್ನು ಎದುರಿಸಿದಾಗ, ಕುಟುಂಬದ ಮುಖ್ಯಸ್ಥನು ಹೆದರುವುದಿಲ್ಲ, ಹಾಗೆಯೇ ಈ ಸಂತರು ಸಹ ಬಿಕ್ಕಟ್ಟಿನ ಸಂದರ್ಭದಲ್ಲಿ ದೃಢವಾಗಿ ನಿಂತು ಎಲ್ಲರಿಗೂ ಮಾರ್ಗದರ್ಶನ ನೀಡಿದರು. ಪ್ರತಿಕೂಲ ಸಂದರ್ಭಗಳಲ್ಲಿಯೂ ಧೈರ್ಯದಿಂದ ಸವಾಲುಗಳನ್ನು ಎದುರಿಸುವ ಮೂಲಕ ಈ ಅಭಿಯಾನವನ್ನು ಮುಂದುವರಿಸಬೇಕು; ಏಕೆಂದರೆ ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ. ಸನಾತನ ಉಳಿದರೆ, ಮಾನವ ಧರ್ಮ ಉಳಿಯುತ್ತದೆ. ನೀವೆಲ್ಲ ಸಂತರು ಸನಾತನ ಧರ್ಮದ ಆಧಾರಸ್ತಂಭಗಳಾಗಿದ್ದೀರಿ. ಸನಾತನ ಧರ್ಮದ ವಿರೋಧಿಗಳು ಸಂತರ ಧೈರ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು ಮತ್ತು ಪ್ರಪಂಚದಾದ್ಯಂತ ಹಿಂದೂ ಧರ್ಮವನ್ನು ನಗೆಪಾಟಲಿಗೆ ಈಡುಮಾಡಲು ಪ್ರಯತ್ನಿಸಿದರು; ಆದರೆ ಸಂತರಿಂದಾಗಿ ಅವರು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.” ಎಂದು ಹೇಳಿದರು.
19 ದಿನಗಳಲ್ಲಿ 32 ಕೋಟಿಗೂ ಹೆಚ್ಚು ಭಕ್ತರು ಗಂಗಾ ಸ್ನಾನ ಮಾಡಿದರು!ಸಂತರ ಪ್ರೇರಣೆಯಿಂದ ಮಹಾಕುಂಭಮೇಳ ಪ್ರಾರಂಭವಾದಾಗಿನಿಂದ 19 ದಿನಗಳಲ್ಲಿ 32 ಕೋಟಿಗೂ ಹೆಚ್ಚು ಭಕ್ತರು ಗಂಗಾನದಿಯಲ್ಲಿ ಸ್ನಾನ ಮಾಡಿ ಪುಣ್ಯ ಪಡೆದಿದ್ದಾರೆ, ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. |
ಸನಾತನ ಧರ್ಮದ ವಿರುದ್ಧದ ಪಿತೂರಿಗಳಿಂದ ಎಚ್ಚರದಿಂದಿರಿ ! – ಮುಖ್ಯಮಂತ್ರಿಕೆಲವರು ಸಮಾಜವನ್ನು ಗೊಂದಲಗೊಳಿಸುವ ಮೂಲಕ ಸನಾತನ ಧರ್ಮದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ರಾಮಜನ್ಮಭೂಮಿಗಾಗಿ ಹಿಂದೂ ಚಳುವಳಿಯಿಂದ ಇಂದಿನವರೆಗೆ ಅವರ ನಡವಳಿಕೆ ಮತ್ತು ಉದ್ದೇಶಗಳು ಬಹಿರಂಗಗೊಂಡಿವೆ. ನಾವು ಅಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸನಾತನ ಧರ್ಮದ ಆದರ್ಶಗಳನ್ನು ಅನುಸರಿಸಿ ಸಂತರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು. ಸಂತರನ್ನು ಗೌರವಿಸುವವರೆಗೆ ಸನಾತನ ಧರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ’, ಎಂದು ಹೇಳಿದರು. |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation