ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕುಂಭಕ್ಕೆ ಬರುವ ಎಲ್ಲಾ ಮಾರ್ಗಗಳ ವೈಮಾನಿಕ ಸಮೀಕ್ಷೆ !

ಪ್ರಯಾಗರಾಜ, ಫೆಬ್ರವರಿ ೧ (ವಾರ್ತೆ) – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ ಮೂಲಕ ಕುಂಭ ಕ್ಷೇತ್ರಕ್ಕೆ ಬರುವ ಎಲ್ಲಾ ಮಾರ್ಗಗಳನ್ನು ಪರಿಶೀಲಿಸಿದರು. ಅವರು ವಸಂತ ಪಂಚಮಿಯಂದು ಸ್ನಾನ ಮಾಡುವ ಸಿದ್ಧತೆಯ ವರದಿಯನ್ನು ತೆಗೆದುಕೊಂಡರು. ‘ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಭಕ್ತರಿಗೆ ಕುಂಭ ಕ್ಷೇತ್ರಕ್ಕೆ ಬರಲು ಏನಾದರೂ ತೊಂದರೆ ಆಗುತ್ತಿದೆಯೇ?’, ಎಮಬ ವಿಷಯಗಳ ಬಗ್ಗೆ ತಿಳಿದುಕೊಂಡರು. ವೈಮಾನಿಕ ಸಮೀಕ್ಷೆಯ ನಂತರ, ಯೋಗಿ ಆದಿತ್ಯನಾಥ್ ಅವರು ಸಂಗಮ ನದಿಯನ್ನು ವೀಕ್ಷಿಸಿ ಅಮೃತ ಸ್ನಾನವನ್ನೂ ಮಾಡಿದರು.