ಶ್ರೀ ಕೃಷ್ಣನ ಜನ್ಮಭೂಮಿಯ ಮುಕ್ತಿಗಾಗಿ ಮಹಾಕುಂಭ ಕ್ಷೇತ್ರದಲ್ಲಿ ಸಂತರು ಸಂಘಟಿತರಾಗಿ ಹೋರಾಡಲು ದೃಢನಿರ್ಧಾರ !

ಪ್ರಯಾಗರಾಜ್ ಕುಂಭಮೇಳ 2025

ಕುಂಭ ಕ್ಷೇತ್ರದಲ್ಲಿ ಆಯೋಜಿಸಲಾದ ಮಹಾಸಂವಾದ ಸಮಾರಂಭದಲ್ಲಿ ಸಂತ-ಮಹಂತ್, ಮಹಾಮಂಡಲೇಶ್ವರ ಭಾಗವಹಿಸುತ್ತಿರುವುದು.

ಪ್ರಯಾಗರಾಜ್, ಫೆಬ್ರವರಿ 1 (ಸುದ್ದಿ) – ಫೆಬ್ರವರಿ 1 ರಂದು, ಪ್ರಯಾಗರಾಜ್ ಕುಂಭ ಕ್ಷೇತ್ರದಲ್ಲಿ, ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ರಾಜೇಶ್ವರ ಮಾಉಲಿ ಸರಕಾರ್ ಅವರ ಶ್ರೀ ರುಕ್ಮಿಣಿ ವಿದರ್ಭ ಪೀಠದಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಮತ್ತು ದೇವಾಲಯ ನಿರ್ಮಾಣ ಮಹಾಸಂವಾದ ಕಾರ್ಯಕ್ರಮದಲ್ಲಿ, ಜಗದ್ಗುರು ಶಂಕಾರಾಚಾರ್ಯರು, ಅನೇಕ ಸಂತರು-ಮಹಂತರು, ಮಹಾಮಂಡಲೇಶ್ವರರು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಸಂಘಟಿತರಾಗಿ ಹೋರಾಡಲು ನಿರ್ಧರಿಸಿದರು. ಎಲ್ಲಾ ಸಂತರು, ಮಹಂತರು ಮತ್ತು ಮಹಾಮಂಡಲೇಶ್ವರರು ಶ್ರೀ ಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಕಾನೂನು ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು ಮತ್ತು ಈ ಹೋರಾಟವನ್ನು ವಿರೋಧಿಸುವ ಜಾತ್ಯತೀತರಿಗೆ ಅವರದೇ ಆದ ಭಾಷೆಯಲ್ಲಿ ‘ಪ್ರತ್ಯುತ್ತರ’ ನೀಡಲು ನಿರ್ಧರಿಸಿದರು. ಎಲ್ಲಾ ಸಂತರು, ಮಹಂತರು ಮಹಾಮಂಡಲೇಶ್ವರರು ಮತ್ತು ಎಲ್ಲಾ ಭಕ್ತರು ತಮ್ಮ ಜಾತಿ ಮತ್ತು ಧರ್ಮವನ್ನು ಮರೆತು ಈ ಹೋರಾಟದಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.