‘ಡೀಪ್‌ ಸ್ಟೇಟ್’ ಭಾರತಕ್ಕಾಗಿ ಅಪಾಯದ ಕರೆಗಂಟೆ

ಜಗತ್ತಿನಲ್ಲಿನ ಪ್ರತಿಯೊಂದು ದೇಶದ ಸರಕಾರ ಹಾಗೂ ಆ ದೇಶದ ಅರ್ಥವ್ಯವಸ್ಥೆಯನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವ ಪ್ರಭಾವಿ ಜನರ ಗುಂಪು, ಎಂದರೆ ‘ಡೀಪ್‌ ಸ್ಟೇಟ್’ ! ‘ಡೀಪ್‌ ಸ್ಟೇಟ್’ ಇದು ದೊಡ್ಡ ಅಪಾಯಕಾರಿ ವ್ಯವಸ್ಥೆ ಯಾಗಿದೆ. ಆದ್ದರಿಂದ ಪ್ರತಿಯೊಂದು ದೇಶವೂ ಇದರಿಂದ ಜಾಗರೂಕ ಮತ್ತು ಎಚ್ಚರದಿಂದಿರುವ ಅವಶ್ಯಕತೆಯಿದೆ. ಈ ಗುಂಪು ತನ್ನ ಹಿತ ಸಾಧಿಸಲು ಏನು ಬೇಕಾದರೂ ಮಾಡಬಹುದು. ಸರಕಾರವನ್ನು ಉರುಳಿಸಬಹುದು, ಗೃಹಯುದ್ಧ ಮಾಡಿಸಬಹುದು, ರಾಜಕೀಯ ಅಸ್ಥಿರತೆ ಸೃಷ್ಟಿಸಬಹುದು ಹಾಗೂ ಹಿಂಸಾಚಾರ ಅಥವಾ ಯುದ್ಧ ಮಾಡಿಸಬಹುದು. ತೆರೆಮರೆ ಯಲ್ಲಿದ್ದು ಜಗತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ‘ಡೀಪ್‌ ಸ್ಟೇಟ್‌’ನ ಜಾಲದಲ್ಲಿ ಸಿಲುಕದಂತೆ ತನ್ನನ್ನು ರಕ್ಷಿಸಿಕೊಳ್ಳುವುದು ಮತ್ತು ಸೂಕ್ಷ್ಮ ನಿಗಾ ಇಟ್ಟುಕೊಂಡು ಅದನ್ನೇ ಮುಷ್ಟಿಯಲ್ಲಿಟ್ಟುಕೊಳ್ಳುವುದೇ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇದುವರೆಗೆ ಪ್ರಕಟಿಸಲಾದ ಲೇಖನ ದಲ್ಲಿ ನಾವು ‘ತನ್ನ ಪ್ರಭುತ್ವವನ್ನು ಕಾಪಾಡಲು ‘ಡೀಪ್‌ ಸ್ಟೇಟ್’ ಏನು ಮಾಡಬಹುದು ?, ನಿಜವಾಗಿಯೂ ‘ಡೀಪ್‌ ಸ್ಟೇಟ್‌’ಎಂದರೇನು ?

ಅದರ ಕಾರ್ಯ ಹೇಗಿರುತ್ತದೆ ? ಹಾಗೂ ‘ಡೀಪ್‌ ಸ್ಟೇಟ್’ ಮತ್ತು ಭಾರತ ಈ ವಿಷಯಗಳನ್ನು ಓದಿದ್ದೇವೆ. ಈ ವಾರ ಅದರ ಕೊನೆಯ ಭಾಗವನ್ನು ನೋಡೊಣ. ಭಾಗ ೩

ಲೆಫ್ಟಿನೆಂಟ ಜನರಲ್‌ ವಿನೋದ ಖಂದಾರೆ (ನಿವೃತ್ತ)

೭. ಪಾಕಿಸ್ತಾನದ ಸ್ಥಿತಿ

ಈಗ ಪಾಕಿಸ್ತಾನದ ಬಗ್ಗೆ ಹೇಳುವುದಾದರೆ, ಅದಕ್ಕೊಂದು ಸ್ವತಂತ್ರವಾದ ಚಿಂತನೆ ಇಲ್ಲ. ಅವರ ಇಸ್ಲಾಮಿಕ ಧರ್ಮವನ್ನು ಮೌಲಾನಾ (ಇಸ್ಲಾಮ್‌ ಅಧ್ಯಯನಕಾರರು) ನಡೆಸುತ್ತಾರೆ. ಎಲ್ಲವೂ ಕುರಾನ್‌ ಪ್ರಕಾರ ನಡೆಯುತ್ತದೆ. ಇರಾನ್‌ನಲ್ಲಿಯೂ ಹಾಗೆಯೇ ಇದೆ. ಅಲ್ಲದೆ, ಪಾಕಿಸ್ತಾನದ ಸೇನೆ ಸಂಪೂರ್ಣ ಅಮೇರಿಕ ಹೇಳಿದ್ದನ್ನು ಕೇಳುತ್ತದೆ. ಅದರ ಸೂಚನೆಗಳನ್ನು ಅನುಸರಿಸಿ ನೀತಿಗಳನ್ನು ರೂಪಿಸುತ್ತದೆ. ಪಾಕಿಸ್ತಾನದಲ್ಲಿ ೩ ‘ಎ’ಗಳ ರಾಜ್ಯವಿದೆ. ಅವು ೩ ‘ಎ’ಗಳು ಎಂದರೆ ಅಲ್ಲಾ, ಆರ್ಮಿ (ಸೇನೆ) ಮತ್ತು ಅಮೇರಿಕ ! ಈ ೩ ‘ಎ’ಗಳ ಮೇಲೆ ಪಾಕಿಸ್ತಾನದ ವ್ಯವಸ್ಥೆ ನಡೆಯುತ್ತಿದೆ; ಆದರೆ ‘ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ನಮಗೆ ಮೋಸ ಮಾಡಿದೆ’’ ಎಂದು ಅಮೇರಿಕಾಗೆ ಅನಿಸುತ್ತದೆ, ಆದೇ ರೀತಿ ‘ಅಮೇರಿಕವೂ ನಮಗೆ ಮೋಸ ಮಾಡಿದೆ’’ ಎಂದು ಪಾಕಿಸ್ತಾನಕ್ಕೆ ಅನಿಸುತ್ತದೆ. ಇದರಿಂದ ಎರಡು ದೇಶಗಳ ನಡುವಿನ ವಿಶ್ವಾಸದ ಸಮಸ್ಯೆ ಉಂಟಾಗಿದೆ. ‘ಅಮೇರಿಕವೇ ಚೀನಾದಲ್ಲಿ ವಾಣಿಜ್ಯ ಕೇಂದ್ರವನ್ನು ಸೃಷ್ಟಿಸಿತು’, ಎಂದು ಹೇಳಿದರೆ ತಪ್ಪಾಗಲಾರದು; ಏಕೆಂದರೆ ಚೀನಾದಲ್ಲಿ ಕಾರ್ಮಿಕರು ತುಂಬಾ ಕಡಿಮೆ ದರಕ್ಕೆ ಸಿಗುತ್ತಾರೆ. ಇದೇ ಕಾರಣದಿಂದ ಅಮೇರಿಕದ ಗುಪ್ತಚರ ವ್ಯವಸ್ಥೆ ಪಾಕಿಸ್ತಾನದ ಮೇಲೆ ನಿಗಾ ಇಟ್ಟಿರುತ್ತದೆ ಮತ್ತು ಚೀನಾ ಕೂಡ ತನ್ನ ನೆರೆಯ ದೇಶಗಳ ಮೇಲೆ ನಿಗಾ ಇಟ್ಟಿರುತ್ತದೆ. ಪಾಕಿಸ್ತಾನದಲ್ಲಿ ಸೇನೆ ಮತ್ತು ಐ.ಎಸ್‌.ಐ. (ಪಾಕಿಸ್ತಾನದ ಗುಪ್ತಚರ ಸಂಸ್ಥೆ) ನಿರ್ಧರಿಸಿದ ವ್ಯಕ್ತಿಯೇ ಪ್ರಧಾನಿಯಾಗಬಹುದು. ಪಾಕಿಸ್ತಾನದಲ್ಲಿ ಇದು ವರೆಗೂ ಒಬ್ಬ ಪ್ರಧಾನಿಯೂ ೫ ವರ್ಷಗಳ ಕಾಲ ಅಧಿಕಾರದಲ್ಲಿರಲಿಲ್ಲ. ಅಮೇರಿಕ, ಬ್ರಿಟನ್, ಫ್ರಾನ್ಸ್‌, ಇಟಲಿ ಅಥವಾ ಯಾವುದೇ ದೇಶದ ಪ್ರಧಾನಿಯು ಪಾಕಿಸ್ತಾನಕ್ಕೆ ತೆರಳಿದರೆ, ಅವನು ಮೊದಲು ಐ.ಎಸ್‌.ಐ. ಮುಖ್ಯಸ್ಥರನ್ನು ಭೇಟಿಯಾಗುತ್ತಾನೆ; ಏಕೆಂದರೆ ವ್ಯವಹಾರ ಮಾಡಬೇಕಾದರೆ ಅಥವಾ ಇನ್ನೂ ಯಾವುದೇ ಕೆಲಸ ಆಗಬೇಕೆಂದರೆ ಐ.ಎಸ್‌.ಐ. ಜೊತೆ ಕೈಜೋಡಿಸುವುದು ಆವಶ್ಯಕವಾಗಿದೆ; ಏಕೆಂದರೆ ಎಲ್ಲವೂ ಐ.ಎಸ್‌.ಐ.ನ ಕೈಯಲ್ಲಿದೆ.

೮. ಚೀನಾ ಬಳಿ ಸ್ವಂತ ‘ಡೀಪ್‌ ಸ್ಟೇಟ್’ ಇದೆ !

ಅಮೇರಿಕದಲ್ಲೂ ‘ಡೀಪ್‌ ಸ್ಟೇಟ್’ ಇದೆ; ಆದರೆ ಅವರು ಅಲ್ಲಿ ಜನರ ಮುಂದೆ ಬರುವುದಿಲ್ಲ; ಆದರೆ ಪಾಕಿಸ್ತಾನದಲ್ಲಿ ಮುಂದೆ ಬರುತ್ತಾರೆ, ಚೀನಾದಲ್ಲಿ ‘ಕಮ್ಯುನಿಸ್ಟ್ (ಸಾಮ್ಯವಾದಿ) ಪಾರ್ಟಿ’ ಯನ್ನು ಬಂಡವಾಳದಾರರು ನಿರ್ವಹಿಸುತ್ತಾರೆ. ‘ಡೀಪ್‌ ಸ್ಟೇಟ್’ ಇದು ಕಾರ್ಯವಿಧಾನ ಮತ್ತು ರಚನೆಯನ್ನು ನಿರ್ಧರಿಸುತ್ತದೆ. ಚೀನಾದಲ್ಲಿ ಆಂಗ್ಲ ಭಾಷೆಯು ಬಹುಪಾಲು ಬಳಕೆಯಲ್ಲಿಲ್ಲ. ‘ಮ್ಯಾಂಡರಿನ್’ ಎಂಬುದು ಚೀನಾದ ಭಾಷೆಯಾಗಿದೆ. ಚೀನಾವು ತನ್ನದೇ ಆದ ‘ಡೀಪ್‌ ಸ್ಟೇಟ್‌’ವನ್ನು ಸ್ಥಾಪಿಸಿದೆ. ಅವರ ಶಿಕ್ಷಣ, ಪುಸ್ತಕಗಳು ಎಲ್ಲವೂ ಚೀನಾದ ಮಾತೃಭಾಷೆಯಲ್ಲಿ ಲಭ್ಯವಿವೆ. ಚೀನಾದ ಯುವಜನರನ್ನು ಪ್ರಭಾವಿತಗೊಳಿಸುವುದು ಬಹಳ ಕಠಿಣವಿದೆ. ಅವರಿಗೆ ಆಂಗ್ಲ ಭಾಷೆ ಬರುತ್ತಿದ್ದರೂ ಅವರು ಯಾರಿಗೂ ತಿಳಿಯಕೊಡುವುದಿಲ್ಲ. ನಮ್ಮ ದೇಶದಲ್ಲಿ ಇಂಟರ್ನೆಟ್‌ ಎಲ್ಲರಿಗಾಗಿ ಲಭ್ಯವಿದೆ; ಆದರೆ ಚೀನಾದಲ್ಲಿ ಮಾಹಿತಿ ‘ಸೆನ್ಸರ್’ (ನಿರೀಕ್ಷಣೆಗಾಗಿ) ಮಾಡಲಾಗುತ್ತದೆ. ನೀವು ‘ಗೂಗಲ್‌’ನಲ್ಲಿ ಚೀನಾದ ಯಾವುದೇ ‘ವೆಬ್‌ಸೈಟ್’ ತೆರೆಯಲು ಸಾಧ್ಯವಿಲ್ಲ, ಅವರ ದೇಶದ ‘ಇನ್ಫೋರ್ಮೇಶನ್‌ ಕಂಟ್ರೋಲ್’ (ಮಾಹಿತಿಯ ನಿಯಂತ್ರಣ) ಅವರ ಕೈಯಲ್ಲಿದೆ.

೯. ‘ಡೀಪ್‌ ಸ್ಟೇಟ್’ ಬಳಸುತ್ತಿರುವ ಕಾರ್ಯವಿಧಾನ

ನಮ್ಮ ದೇಶದಲ್ಲಿ ಎಲ್ಲವೂ ಎಲ್ಲರಿಗೂ ತೆರೆಯಲ್ಪಟ್ಟಿದೆ. ಆದರೆ ‘ಇನ್ಫೋರ್ಮೇಶನ್‌ ಕಂಟ್ರೋಲ್’ ನಮ್ಮ ಕೈಯಲ್ಲಿರುವುದು ತುಂಬ ಮಹತ್ವದ್ದಾಗಿದೆ. ಈ ಮಾಹಿತಿಯ ಮೂಲಕ ಸರಕಾರಗಳ ಬದಲಾವಣೆ ಸಾಧ್ಯವಾಗಬಹುದು. ಅದು ಬಾಂಗ್ಲಾದೇಶ ದಲ್ಲಾಯಿತು. ಅಲ್ಲಿ ಮೊದಲಿಗೆ ವಿದ್ಯಾರ್ಥಿ ಸಂಘಟನೆಗಳನ್ನು ರೂಪಿಸಿ ಅವುಗಳ ನಾಯಕರನ್ನು ಬೆಳೆಸಲಾಯಿತು. ಯುನುಸ್‌ ಮಹಮದ್‌ ಇವರು ಅಮೇರಿಕದ ಅಡಿಯಾಳಾಗಿದ್ದಾರೆ. ಅವರು ದೇಶದಿಂದ ಹೊರಗಿದ್ದರು. ಅವರನ್ನು ಹೊರಗಿನಿಂದ ಕರೆತಂದು ಬಾಂಗ್ಲಾದೇಶದ ಪ್ರಧಾನಿಯಾಗಿಸಲು ಆಯ್ಕೆ ಮಾಡಲಾಗಿದೆ. ಇದೆಲ್ಲ ಒಂದು ದಿನದಲ್ಲಿ ನಡೆದಿಲ್ಲ. ‘ಡೀಪ್‌ ಸ್ಟೇಟ್’ ಇದನ್ನು ನಿಶ್ಚಯಿಸಿ ಇವೆಲ್ಲಾ ಘಟನೆಗಳನ್ನು ರೂಪಿಸಿದೆ. ದಕ್ಷಿಣ ಏಷ್ಯಾದ ದೇಶಗಳಾದ ನೇಪಾಳ, ಮಾಲ್ದೀವ್, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ರಾಷ್ಟ್ರಪತಿಗಳ ಬದಲಾವಣೆಯ ಪ್ರಕ್ರಿಯೆಯೂ ‘ಡೀಪ್‌ ಸ್ಟೇಟ್‌’ನಿಂದ ಪ್ರೇರಿತವಾಗಿತ್ತು. ‘ಜನಾಂದೋಲನ’ ಎಂಬುದು ಒಂದು ರೀತಿ ‘ಡೀಪ್‌ ಸ್ಟೇಟ್‌’ನ ನಿರ್ದಿಷ್ಠ ಭಾಗವಾಗಿರು ತ್ತದೆ, ಅದನ್ನು ‘ಟೂಲ್‌ ಕಿಟ್’ ಎಂದು ಕರೆಯಲಾಗುತ್ತದೆ. ಈ ‘ಟೂಲ್‌ ಕಿಟ್‌’ನಲ್ಲಿ ಇದರ ಕಾರ್ಯವಿಧಾನವನ್ನು ನಿಖರವಾಗಿ ವಿವರಿಸಲಾಗುತ್ತದೆ. ತಪ್ಪಾದ ಅಥವಾ ಸುಳ್ಳು ಮಾಹಿತಿಯನ್ನು ಕ್ರಮಬದ್ಧವಾಗಿ ಜನರಲ್ಲಿ ಹರಡಲಾಗುತ್ತದೆ. ತಪ್ಪು ಮಾಹಿತಿ ಹರಡುವುದು, ನಂಬಿಗಸ್ಥರ ತಂಡವನ್ನು ಸಿದ್ಧ ಪಡಿಸುವುದು, ಪ್ರತಿಭಟನೆ ಮಾಡಲು ಜನರನ್ನು ಸೇರಿಸುವುದರಿಂದ ಹಿಡಿದು ನಾಯಕತ್ವವನ್ನು ರೂಪಿಸುವ ತನಕ ಪ್ರತಿ ಹಂತದಲ್ಲಿ ‘ಡೀಪ್‌ ಸ್ಟೇಟ್‌’ನ ಸೂಕ್ಷ್ಮ ನಿಗಾ ಇರುತ್ತದೆ. ‘ಡೀಪ್‌ ಸ್ಟೇಟ್’ ಪ್ರತಿಯೊಂದು ದೇಶಕ್ಕೂ ವಿಭಿನ್ನ ‘ಟೂಲ್‌ ಕಿಟ್‌’ಗಳನ್ನು ಅಳವಡಿಸುತ್ತದೆ. ಅದರ ಮೇಲೆ ನಿಗಾ ಇಡುವ ವ್ಯವಸ್ಥೆ ಇರುತ್ತದೆ, ಅದಕ್ಕಾಗಿ ಸಹಾಯಕ ವ್ಯವಸ್ಥೆ ಇರುತ್ತದೆ. ಇಂತಹ ಸಮಯದಲ್ಲಿ ಯುದ್ಧವಾದರೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬೇಕು; ಹೀಗಾಗಿ ‘ಡೀಪ್‌ ಸ್ಟೇಟ್‌’ದ ತಂಡವು ಕಾರ್ಯನಿರ್ವಹಿಸುತ್ತದೆ. ಪಾಕಿಸ್ತಾನಕ್ಕೆ ಅಮೇರಿಕ ಯಾವಾಗಲೂ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ, ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ನಮ್ಮ ಭಾರತ ದೇಶ ‘ಆತ್ಮನಿರ್ಭರ’ ಆದಾಗ ಮಾತ್ರ ‘ಡೀಪ್‌ ಸ್ಟೇಟ್‌’ದಿಂದ ರಕ್ಷಿಸಲ್ಪಡಬಹುದು.

೧೦. ಸಂಚು ಮತ್ತು ಪರಿಹಾರಗಳು

ಭಾರತವು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ‘ಡೀಪ್‌ ಸ್ಟೇಟ್‌’ನಿಂದ ಎಚ್ಚರದಿಂದ ಇರಬೇಕಾಗಿದೆ. ಅದಕ್ಕಾಗಿ ತನ್ನದೇ ಅದ ಬಲಿಷ್ಠ ವ್ಯವಸ್ಥೆ ಬೇಕಿದೆ. ಭಾರತವು ಆರ್ಥಿಕ ದೃಷ್ಟಿಯಿಂದ ಸಕ್ಷಮವಾಗಬೇಕು. ನೋಟು ನಿಷೇಧದಿಂದ ಕಪ್ಪು ಹಣವು ನಿಯಂತ್ರಣಕ್ಕೊಳಪಟ್ಟಿತು. ಬ್ಯಾಂಕ್‌ಗಳು ಮುಚ್ಚುವ ಸ್ಥಿತಿಯಿಂದ ಹೊರಬಂದಿತು. ‘ಬ್ಯಾಂಕರ್’ ಬಲಿಷ್ಠರಾಗಿದ್ದಾರೆ. ಸಾಮಾನ್ಯ ನಾಗರಿಕರು ಆರ್ಥಿಕ ಕ್ಷೇತ್ರದಲ್ಲಿ ದೃಢರಾಗಿದ್ದಾರೆ. ನಕಲಿ ನೋಟುಗಳನ್ನು ನಿಯಂತ್ರಿಸುವುದರಲ್ಲಿ ಯಶಸ್ಸು ಸಿಕ್ಕಿತು.

ಸರಕಾರವು ಹಣದ ವಿನಿಮಯಕ್ಕಾಗಿ ಜಾಲತಾಣವನ್ನು ಪ್ರಾರಂಭಿಸಿದೆ. ಇದರಿಂದ ವ್ಯಾಪಾರಿಗಳು ತಮ್ಮ ಸರಕನ್ನು ನೇರ ಗ್ರಾಹಕರಿಗೆ ಮಾರಾಟ ಮಾಡುವುದು ಸುಲಭವಾಗಿದೆ. ಪಾಸ್‌ಪೋರ್ಟ್ ‘ಡಿಜಿಟಲ್’ ಆಗಿರುವುದರಿಂದ ನಾಗರಿಕರಿಗೆ ಬಹಳ ಅನುಕೂಲ ವಾಗಿದೆ. ಇವೆಲ್ಲಾ ಕ್ರಮಗಳಿಂದ ನಾವು ‘ಡೀಪ್‌ ಸ್ಟೇಟ್‌’ನಿಂದ ರಕ್ಷಿಸಲ್ಪಡಲು ಹಲವು ಉಪಾಯಗಳನ್ನು ರೂಪಿಸಲು ಸಾಧ್ಯ ವಾಯಿತು ಮತ್ತು ಅದರಲ್ಲಿ ಯಶಸ್ವಿಯೂ ಆಗಿದ್ದೇವೆ.

‘ಡೀಪ್‌ ಸ್ಟೇಟ್‌’ನಿಂದ ರಕ್ಷಿಸಲ್ಪಡಲು ಆರ್ಥಿಕ ವ್ಯವಸ್ಥೆಯನ್ನು ದೃಢಗೊಳಿಸುವುದು ಮತ್ತು ಆತ್ಮನಿರ್ಭರ ಆಗಿರುವುದು ಬಹುಮುಖ್ಯವಾಗಿದೆ. ಕಪ್ಪು ಹಣವನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ. ಇದಲ್ಲದೆ ನಾವು ಹೊರಗಿನಿಂದ ಬರುವ ಹಣವನ್ನು ನಿಯಂತ್ರಿಸ ಬಹುದಾದಂತಹ ರೀತಿಯ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ, ಶಿಕ್ಷಣ ಸಂಸ್ಥೆಗಳಿಗೆ ವಿದೇಶದಿಂದ ಬರುವ ಹಣವನ್ನು ತಡೆಯ ಬೇಕಾಗಿದೆ. ಹೊರಗಿನಿಂದ ಬರುವವರನ್ನು, ವಿದೇಶದಿಂದ ನುಸುಳುವವರನ್ನು ಸಮಯಕ್ಕೆ ತಡೆಹಿಡಿಯಬೇಕಾಗಿದೆ. ಇದರಿಂದ

ಕರಾವಳಿ ಪ್ರದೇಶದಲ್ಲಿ (ಕೋಸ್ಟಲ್) ಕಟ್ಟುನಿಟ್ಟಿನ ಭದ್ರತೆ ಇರ ಬೇಕಾಗಿದೆ. ಮರೀನ್‌ ಪೊಲೀಸ್‌ರನ್ನು ಸಕ್ರಿಯಗೊಳಿಸಬೇಕಾ ಗಿದೆ. ಕರಾವಳಿ ಪೊಲೀಸರು ಹೆಚ್ಚು ಪ್ರಸಿದ್ಧವಿಲ್ಲ. ದೇಶದ ಗಡಿಯನ್ನು ಸುರಕ್ಷಿತಗೊಳಿಸಲು ಹೆಚ್ಚು ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸÀಬೇಕಾಗಿದೆ, ಆಗ ಮಾತ್ರ ದೇಶ ಸುರಕ್ಷಿತವಾಗಿರಬಹುದು. ಭಾರತದೊಳಗಿನ ಕೆಲವು ‘ಡೀಪ್‌ ಸ್ಟೇಟ್‌’ಗಳು ಹಲವು ವರ್ಷ ಗಳಿಂದ ಸಕ್ರಿಯವಾಗಿವೆ. ಚೀನಾ ಮತ್ತು ಪಶ್ಚಿಮದ ದೇಶಗಳ ‘ಡೀಪ್‌ ಸ್ಟೇಟ್’ ಪ್ರಕಾರ, ಭಾರತವು ಅವರಿಗಾಗಿ ಸವಾಲೊಡ್ಡುವ ದೇಶವಾಗುತ್ತಿದೆ. ಜಾಗತಿಕ ಕ್ಷಿತಿಜದಲ್ಲಿ ‘ಒಂದು ಪ್ರಮುಖ ರಾಷ್ಟ್ರವಾಗಿ’ ಉದಯಿಸಿದ ಮತ್ತು ಜಾಗತಿಕ ‘ಜಿಡಿಪಿ’ಯಲ್ಲಿ (ಸಕಲ ರಾಷ್ಟ್ರೀಯ ಉತ್ಪನ್ನದಲ್ಲಿ) ಕೊಡುಗೆ ನೀಡುತ್ತಿರುವ ಭಾರತವು ಈಗ ‘ಡೀಪ್‌ ಸ್ಟೇಟ್‌’ಗೆ ಚಿಂತೆಯ ವಿಷಯವಾಗಿದೆ. ಅದರಿಂದಾಗಿ ಭಾರತವು ಅವರಿಗಾಗಿ ಅಪಾಯಕಾರಿ ದೇಶವಾಗಿದೆ.

ಭಾರತದಲ್ಲಿ ಸಾರ್ವಜನಿಕ ಚುನಾವಣೆಗಳನ್ನು ಪ್ರಭಾವಿತ ಗೊಳಿಸುವುದೇ, ಅಖಂಡಭಾರತವನ್ನು ತಡೆಯುವ ಏಕೈಕ ಮಾರ್ಗ ವಾಗಿದೆ ಎಂದು ಅವರು ನಂಬಿದ್ದಾರೆ. ಈ ಕಾರಣದಿಂದ ಅವರು ಭಾರತವನ್ನು ವಿಭಜಿಸುವ ದಾರಿಯನ್ನು ಆಯ್ಕೆ ಮಾಡಿದ್ದಾರೆ. ಮ್ಯಾನ್ಮಾರ್‌ ಸಂಪೂರ್ಣವಾಗಿ ಚೀನಾದ ವಶದಲ್ಲಿದೆ ಮತ್ತು ಕಂಬೋಡಿಯಾದಲ್ಲಿ ಅವರು ಅಮೇರಿಕದ ಸೇನೆಯನ್ನು ತೊಲಗಿಸಿ ಈ ಪ್ರದೇಶದಲ್ಲಿ ಚೀನಾ ಪ್ರಭಾವವನ್ನು ಪ್ರದರ್ಶಿಸಿದೆ. ಡೋನಾಲ್ಡ್ ಟ್ರಂಪ್‌ ಅವರ ಅಧ್ಯಕ್ಷತೆಯ ಕಾಲದಲ್ಲಿ ‘ಡೀಪ್‌ ಸ್ಟೇಟ್’ ಪದವು ಮುಖ್ಯವಾಗಿ ಅಮೇರಿಕದ ರಾಜ್ಯದಲ್ಲಿ ಬಳಸಲ್ಪಟ್ಟಿದೆ.

ನೌಕರವರ್ಗ ಅಥವಾ ನಾಗರಿಕ ಸೇವಕರು ತಮ್ಮ ವ್ಯವಸ್ಥೆಯ ಆದೇಶದ ಪ್ರಕಾರ ಕಾರ್ಯನಿರ್ವಹಿಸುತ್ತಾರೆ. ಮತ್ತೊಂದೆಡೆ, ಪಶ್ಚಿಮ, ಮಧ್ಯಪ್ರಾಚ್ಯ, ಪೂರ್ವ ಮತ್ತು ಆಗ್ನೇಯ ಏಷ್ಯಾದ ಪ್ರಮುಖ ದೇಶಗಳೊಂದಿಗೆ ಭಾರತದ ಸಂಬಂಧಗಳು ಸುಧಾರಿಸಿದ್ದು ಇದನ್ನು ಪಶ್ಚಿಮ ದೇಶಗಳ ‘ಡೀಪ್‌ ಸ್ಟೇಟ್‌’ಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿದೇಶಿ ಮಾಧ್ಯಮಗಳು ಭಾರತೀಯ ಸಮಾಜದ ದೋಷಗಳನ್ನು ಸ್ಪಷ್ಟವಾಗಿ ಪತ್ತೆಹಚ್ಚುತ್ತವೆ. ಆದಕಾರಣ, ಭಾರತ ದಲ್ಲಿನ ಕೋಮುಗಲಭೆ ಮತ್ತು ಸಮಾಜದಲ್ಲಿ ಒಡಕನ್ನುಂಟು ಮಾಡುವ ಇತಿಹಾಸದ ದುರ್ಲಾಭ ಪಡೆದು ಭಾರತೀಯ ಸಮಾಜವನ್ನು ಶೋಷಿಸಲು ಅವರಿಗೆ ತುಂಬ ಸುಲಭವಾಗುತ್ತದೆ. ಈ ವಿಷಯವನ್ನು ಗಮನಿಸಿದಾಗ, ಬ್ರಿಟಿಷ್‌ ವಸಾಹತುಗಾರರು ಭಾರತೀಯ ಸಮಾಜದಲ್ಲಿ ಆಂತರಿಕ ದೋಷಗಳ ಆಧಾರದಲ್ಲಿ ಮಾಡಿದ ಕ್ರೂರ ಶೋಷಣೆಯತ್ತ ಒಂದು ದೃಷ್ಟಿ ಬೀರೋಣ.

೧೧. ಪ್ರಸಿದ್ಧಿ ಮಾಧ್ಯಮಗಳ ಮೌನ ಮತ್ತು ಭಾರತವು ‘ಡೀಪ್‌ ಸ್ಟೇಟ್‌’ನಿಂದ ಎಚ್ಚರಿಕೆಯಿಂದ ಇರಬೇಕಾದ ಅಗತ್ಯತೆ !

ಭಾರತದ ಜಾತಿವ್ಯವಸ್ಥೆಯನ್ನು ಬ್ರಿಟಿಷ್‌ ಮಾಧ್ಯಮಗಳು ತೀಕ್ಷ್ಣವಾಗಿ ಟೀಕಿಸಿದ್ದವು; ಆದರೆ, ಈ ಮಾಧ್ಯಮಗಳು ಸೌದಿ ಅರೇಬಿಯಾ, ಯುನೈಟೆಡ್‌ ಅಮಿರೇಟ್, ಕತಾರ್, ಕುವೈತ್, ಬಹರೇನ್‌ ಮತ್ತು ಓಮಾನ್‌ ದೇಶಗಳಲ್ಲಿ ನಡೆಯುತ್ತಿರುವ ಘಟನೆ ಗಳ ಬಗ್ಗೆ ಮೌನ ವಹಿಸುತ್ತಿವೆ. ಈ ದೇಶಗಳು ನಿರ್ವಸತಿಗರನ್ನು ಎಂದಿಗೂ ಸ್ವೀಕರಿಸಲಿಲ್ಲ. ಪೋಲ್ಯಾಂಡ್, ಹಂಗೇರಿ ಮತ್ತು ಚೆಕ್‌ ದೇಶಗಳು ಕಾನೂನು ವ್ಯವಸ್ಥೆಗೆ ಅಪಾಯವಿದೆ ಎಂದು ಹೇಳಿ ಆಶ್ರಯ ಕೇಳುವವರಿಗೆ ಯಾವುದೇ ಸಹಾಯವೂ ಮಾಡಿಲ್ಲ. ಈ ಕುರಿತು ಪಶ್ಚಿಮ ಮಾಧ್ಯಮಗಳು ಕೂಡ ಮೌನವಾಗಿವೆ. ೨೦೨೩ ನೇ ವರ್ಷದಲ್ಲಿ ಆಸ್ಟ್ರೇಲಿಯಾದ ಜನತೆ ತಮ್ಮ ಸ್ವಾಭಾವಿಕ ಜನರ ಹೆಚ್ಚಿನ ಹಕ್ಕುಗಳನ್ನು ನಿರಾಕರಿಸಿದೆ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಮಾಓರಿ ಜನಾಂಗ (ಮೂಲ ಪೋಲೆನೇಶಿಯನ್‌ ಜನಾಂಗ)ದ ಹಿತದೃಷ್ಟಿಯನ್ನು ೧೮೦ ವರ್ಷ ಹಳೆಯ ಡಜನ್‌ಗಟ್ಟಲೆ ನೀತಿ ಗಳನ್ನು ಹೇಗೆ ಕೊನೆಗೊಳಿಸಲಾಯಿತು ಎಂಬುದರ ವಿವರಣೆ ನೀಡದ ಪಶ್ಚಿಮ ಮಾಧ್ಯಮಗಳು ಈ ಬಗ್ಗೆ ಗಂಭೀರವಾಗಿ ಮೌನ ವಹಿಸಿದ್ದವು. ಸ್ವಲ್ಪದರಲ್ಲಿ ಹೇಳಬೇಕಾದರೆ, ‘ಡೀಪ್‌ ಸ್ಟೇಟ್’ ಎನ್ನುವ ವ್ಯವಸ್ಥೆ ತನ್ನ ಅನುಕೂಲಕ್ಕಾಗಿ ತನ್ನ ಭೂಮಿಕೆಯನ್ನು ನಿರ್ಧರಿಸುತ್ತಿರುತ್ತದೆ ಮತ್ತು ಮುಂದಿನ ಹೆಜ್ಜೆಗಳನ್ನು ತೀರ್ಮಾನಿಸುತ್ತದೆ. ಆದ್ದರಿಂದ ಭಾರತವು ‘ಡೀಪ್‌ ಸ್ಟೇಟ್‌’ನಿಂದ ಎಚ್ಚರಿಕೆಯಿಂದ ಇರಬೇಕು.

– ಲೆಫ್ಟನಂಟ್‌ ಜನರಲ್‌ ವಿನೋದ ಖಂದಾರೆ (ನಿವೃತ್ತ), ಸಲಹೆಗಾರ, ರಕ್ಷಣಾ ಸಚಿವಾಲಯ, ನವ ದೆಹಲಿ.

(ಕೃಪೆ : ಸಾಪ್ತಾಹಿಕ ‘ಹಿಂದುಸ್ಥಾನ ಪೋಸ್ಟ್‌’ನ, ದೀಪಾವಳಿ ವಿಶೇಷಾಂಕ, ವರ್ಷ ೧, ಅಕ್ಟೋಬರ್‌-ನವೆಂಬರ್‌ ೨೦೨೪)