
ಪ್ರಯಾಗರಾಜ, ಜನವರಿ 29 (ಸುದ್ದಿ.) – ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಸಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಅವರು `ಪತಂಜಲಿ ಯೋಗಪೀಠ’ದ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ಶ್ರೀ. ವಿಶ್ವನಾಥ ಕುಲಕರ್ಣಿ ಅವರು ಆಚಾರ್ಯ ಬಾಳಕೃಷ್ಣ ಅವರಿಗೆ ಸಮಿತಿಯ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಕಾರ್ಯದ ಬಗ್ಗೆ ತಿಳಿದುಕೊಂಡ ನಂತರ, ಆಚಾರ್ಯ ಬಾಳಕೃಷ್ಣರು “ಸಮಿತಿಯ ಕೆಲಸಕ್ಕೆ ಅನೇಕ ಶುಭಾಶಯಗಳು!” ಎಂದು ಉದ್ಗರಿಸಿದರು. ಈ ಸಂದರ್ಭದಲ್ಲಿ ಕುಂಭನಗರದ ಸೆಕ್ಟರ್ ಸಂಖ್ಯೆ 6 ರಲ್ಲಿರುವ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಲಾಯಿತು.