ವಿಶ್ವ ಹಿಂದೂ ಪರಿಷತ್ ಮತ್ತು ಸನಾತನ ಸಂಸ್ಥೆಯ ಕಾರ್ಯ ಒಂದೇ ! – ಯೋಗಿ ಪುರಣನಾಥ ಮಹಾರಾಜ, ನಾಂದೇಡ್

ಪ್ರಯಾಗರಾಜ ಕುಂಭಮೇಳ 2025

ನಾಂದೇಡನ ಯೋಗಿ ಹಿರಾಜಿ ಮಹಾರಾಜರು ಸೇವಾಶ್ರಮದ ಯೋಗಿ ಪುರಣನಾಥ ಮಹಾರಾಜರಿಂದ ಆಶೀರ್ವಚನ

(ಬಲಗಡೆ) ಶ್ರೀ. ಯೋಗಿ ಪುರಣನಾಥ ಮಹಾರಾಜರು ಇವರನ್ನು ಸನ್ಮಾನಿಸುವಾಗ (ಬಲಗಡೆ) ಶ್ರೀ. ಚೇತನ ರಾಜಹಂಸ

ಪ್ರಯಾಗರಾಜ (ಉತ್ತರ ಪ್ರದೇಶ), ಜನವರಿ 27 (ಸುದ್ದಿ) – ಯಾವ ರೀತಿ ಗಂಗಾ, ಯಮುನಾ ಮತ್ತು ಸರಸ್ವತಿ ಈ ಪವೀತ್ರ ನದಿಗಳಿಂದ ರೂಪುಗೊಂಡಿರುವ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ಪಡೆಯುತ್ತಾರೆಯೋ, ಅದರಂತೆ ‘ಸನಾತನ ಸಂಸ್ಥೆ’ಯ ಈ ಪ್ರದರ್ಶನವೆಂದರೆ, ಭಕ್ತಿ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗದ ಅಪೂರ್ವ ಸಂಗಮವೇ ಆಗಿದೆ ಎನ್ನುವ ಅನುಭವ ನನಗೆ ಆಗುತ್ತಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಸನಾತನ ಸಂಸ್ಥೆಯ ಕಾರ್ಯ ಒಂದೇ ಆಗಿದೆಯೆಂದು ನಾಂದೇಡನ ಯೋಗಿ ಹಿರಾಜಿ ಮಹಾರಾಜ ಸೇವಾಶ್ರಮದ ಮತ್ತು ವಿಶ್ವ ಹಿಂದೂ ಪರಿಷತ್ತಿನ ಅರ್ಧಾಪುರದ (ಮಹಾರಾಷ್ಟ್ರ) ಉಸ್ತುವಾರಿ ಸಚಿವ ಯೋಗಿ ಪುರಣನಾಥ ಮಹಾರಾಜ ಅವರು ಮಾರ್ಗದರ್ಶನ ಮಾಡಿದರು. ಜನವರಿ 26 ರಂದು ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರಲ್ಲಿ ನಡೆದ ಸನಾತನ ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಿಂಪರಿ ಚಾರಳವಾಡಿಯಲ್ಲಿರುವ ಶ್ರೀ ಕ್ಷೇತ್ರ ಮಾವುಲಿ ಸಂಸ್ಥಾನದ ತಪೋನಿಧಿ ನಾರಾಯಣ ಮಹಾರಾಜರೂ ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರು ಇಬ್ಬರನ್ನೂ ಸನ್ಮಾನಿಸಿದರು.

ನಾವು ಪ್ರತಿಯೊಂದು ಕಾರ್ಯದಲ್ಲಿಯೂ ಸನಾತನ ಸಂಸ್ಥೆಗೆ ಸೇವೆಯ ರೂಪದಲ್ಲಿ ಖಂಡಿತವಾಗಿಯೂ ಸಹಾಯ ಮಾಡುತ್ತೇವೆ !

ಯೋಗಿ ಪುರಣನಾಥ ಮಹಾರಾಜರು ಮಾತನಾಡಿ, “ನಾಲ್ಕು ಪುರುಷಾರ್ಥಗಳ ಪ್ರಾಪ್ತಿ ಮಾಡಿಕೊಟ್ಟು ಮೋಕ್ಷ ಸಿಗುವ ಮಾರ್ಗದ ಸನಾತನದ ಈ ಕಾರ್ಯವು ಅನುಕರಣೀಯ ಮತ್ತು ಶ್ಲಾಘನೀಯವಾಗಿದೆ” ಎಂದು ಹೇಳಿದರು. ಇಂದಿನ ಕಾಲದಲ್ಲಿ ಶಕ್ತಿಯ ಅವಶ್ಯಕತೆ ಬಹಳಷ್ಟಿದೆ. ಮಕ್ಕಳು ಮತ್ತು ಯುವಕರ ಮೇಲೆ ಈ ಎಲ್ಲಾ ಧರ್ಮ ಸಂಸ್ಕಾರವನ್ನು ಮಾಡುವುದು ಇಂದಿನ ಕಾಲದ ಅಗತ್ಯವಾಗಿದೆ. ಈ ಪ್ರದರ್ಶನವನ್ನು ನೋಡಿ ನನಗೆ ತುಂಬಾ ಆನಂದವಾಯಿತು. ನಾನು ಈ ಕಾರ್ಯದೊಂದಿಗೆ ಜೋಡಿಸಲ್ಪಟ್ಟಿದ್ದೇನೆ. ಈ ಕಾರ್ಯಕ್ಕೆ ಅನೇಕ ಶುಭಾಷಯಗಳನ್ನು ನೀಡುತ್ತೇನೆ. ಸನಾತನದ ಈ ಧರ್ಮಪ್ರಸಾರ ಕಾರ್ಯವು ನಿರಂತರವಾಗಿ ಬೆಳೆಯಲಿ. ನಮಗೆ ಆಹ್ವಾನ ಬಂದಾಗಲೆಲ್ಲಾ, ನಾವು ಸನಾತನ ಸಂಸ್ಥೆಯ ಪ್ರತಿಯೊಂದು ಕಾರ್ಯದಲ್ಲೂ ಸೇವೆಯ ರೂಪದಲ್ಲಿ ಖಂಡಿತವಾಗಿಯೂ ಸಹಾಯ ಮಾಡುತ್ತೇವೆ.” ಎಂದು ಹೇಳಿದರು.