ಮಹಾಕುಂಭದಲ್ಲಿ ಸನಾತನದ ಗ್ರಂಥ ಪ್ರದರ್ಶನವನ್ನು ನೋಡಿ 8 ರಾಜ್ಯಗಳ ಜಿಜ್ಞಾಸುಗಳು ಬಹಳ ಪ್ರಭಾವಿತರಾದರು !

  • ಅನೇಕ ಜಿಜ್ಞಾಸುಗಳಿಂದ ಸನಾತನದ ಕಾರ್ಯದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿದರು

  • ಸನಾತನ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲು ಮತ್ತು ಇತರ ಹಳ್ಳಿಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸಲು ಜಿಜ್ಞಾಸುಗಳಿಂದ ಕೋರಿಕೆ

ಸನಾತನದ ಗ್ರಂಥಗಳು ಮತ್ತು ಧರ್ಮಶಿಕ್ಷಣ ಪ್ರದರ್ಶನವನ್ನು ನೋಡಲು ನೆರೆದಿದ್ದ ಭಕ್ತರ ಜನಜಂಗುಳಿ

ಶ್ರೀ. ಸಚಿನ ಕೌಲಕರ, ವಿಶೇಷ ವರದಿಗಾರ, ಪ್ರಯಾಗರಾಜ

ಪ್ರಯಾಗರಾಜ, ಜನವರಿ 26 (ಸುದ್ದಿ) – ಮಹಾಕುಂಭ ಕ್ಷೇತ್ರದಲ್ಲಿ ಹಾಕಲಾದ ಸನಾತನದ ಗ್ರಂಥ ಮತ್ತು ಧರ್ಮ ಶಿಕ್ಷಣದ ಪ್ರದರ್ಶನಕ್ಕೆ ಜಿಜ್ಞಾಸುಗಳಿಂದ ಪ್ರತಿಕ್ರಿಯೆಗಳ ಪ್ರವಾಹವೇ ಹರಿದು ಬರುತ್ತಿದೆ. ಈ ಪ್ರದರ್ಶನವನ್ನು ನೋಡಲು ಭಕ್ತರು ಗಮನಾರ್ಹ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಸನಾತನದ ಪ್ರದರ್ಶನದಿಂದ ಅಮೃತದಂತಹ ಸುಂದರ ಮಾಹಿತಿಯನ್ನು ಓದಿ ಬಹಳ ಪ್ರಭಾವಿತರಾಗಿ “ನಾವು ಸನಾತನದ ಕಾರ್ಯದಲ್ಲಿ ಭಾಗವಹಿಸಲು ಬಯಸುತ್ತೇವೆ. ಈ ಪ್ರದರ್ಶನವನ್ನು ನಮ್ಮ ಹಳ್ಳಿಯಲ್ಲಿ ಏರ್ಪಡಿಸಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರದರ್ಶನದ ವಿಷಯಗಳನ್ನು ಸೇರಿಸಬೇಕು’’ಎಂದು ಅನೇಕ ಜಿಜ್ಞಾಸುಗಳು ಸ್ವಯಂ ಪ್ರೇರಿತರಾಗಿ ಅಭಿಪ್ರಾಯವನ್ನು ಹೇಳಿದ್ದಾರೆ. ವಿಶೇಷವೆಂದರೆ ಈ ಬಾರಿಯ ಮಹಾಕುಂಭದಲ್ಲಿ ಸನಾತನದ ಕಾರ್ಯದಲ್ಲಿ ಭಾಗವಹಿಸಲು ಉತ್ತರ ಪ್ರದೇಶ ಸೇರಿದಂತೆ, ಗುಜರಾತ, ರಾಜಸ್ಥಾನ, ಪಂಜಾಬ, ಹರಿಯಾಣ, ಅಸ್ಸಾಂ, ಒಡಿಶಾ ಮತ್ತು ಕಾಶ್ಮೀರ ರಾಜ್ಯಗಳ ಜಿಜ್ಞಾಸುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸನಾತನ ಗ್ರಂಥ ಪ್ರದರ್ಶನಕ್ಕೆ ಕುಂಭ ಕ್ಷೇತ್ರದ ವಿವಿಧ ಅಖಾಡಗಳಿಂದ ಬಂದ ಸಂತರು ಮತ್ತು ಮಹಂತರು ಭೇಟಿ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಪ್ರದರ್ಶನಕ್ಕೆ ಭೇಟಿ ನೀಡಿದ ಎಲ್ಲಾ ಸಂತರು ಮತ್ತು ಮಹಂತರುಗಳಿಗೆ ಈ ಪ್ರದರ್ಶನವನ್ನು ಇಷ್ಟಪಟ್ಟಿದ್ದಾರೆ. ಇದರೊಂದಿಗೆ, ಅನೇಕ ಜಿಜ್ಞಾಸುಗಳು ಪ್ರದರ್ಶನವು ಉತ್ತಮ ಮತ್ತು ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅನೇಕ ಜಿಜ್ಞಾಸುಗಳು ‘ಸನಾತನ ಪ್ರದರ್ಶನದಲ್ಲಿನ ಮಾಹಿತಿಯಿಂದಾಗಿ ಮಹತ್ವಪೂರ್ಣ ಧರ್ಮಶಿಕ್ಷಣ ಸಿಗುತ್ತಿದೆ, ಬಹಳಷ್ಟು ಕಲಿಯಲು ಸಿಗುತ್ತದೆ, ಸಧ್ಯದ ಕಾಲದಲ್ಲಿ ಇಂತಹ ಪ್ರದರ್ಶನಗಳ ಆವಶ್ಯಕತೆಯಿದೆ’, ಎಂದೂ ಅಭಿಪ್ರಾಯವನ್ನು ನೀಡಿದ್ದಾರೆ. ಇದರೊಂದಿಗೆ ಸನಾತನದ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ದೀರ್ಘಕಾಲದವರೆಗೆ ಉತ್ಸಾಹದಿಂದ ಸೇವೆ ಸಲ್ಲಿಸುತ್ತಿರುವ ಸನಾತನ ಸಾಧಕರನ್ನು ಶ್ಲಾಘಿಸಿದ್ದಾರೆ.

ಸನಾತನದ ಗ್ರಂಥಗಳು ಮತ್ತು ಧರ್ಮಶಿಕ್ಷಣ ಪ್ರದರ್ಶನವನ್ನು ನೋಡಿದ ನಂತರ ಜಿಜ್ಞಾಸುಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ…

1. ಈ ಪ್ರದರ್ಶನವನ್ನು ನೋಡಿ ಸಂತೋಷವಾಯಿತು. ದೇಶದಲ್ಲಿ ಅನೇಕ ಅನಾವಶ್ಯಕ ವಿಷಯಗಳಿಗೆ ಹಣ ಖರ್ಚು ಮಾಡಲಾಗುತ್ತಿದೆ. ಅದಕ್ಕಿಂತ ಹೆಚ್ಚು ಉತ್ತಮವಾಗಿ ಸನಾತನ ಸಂಸ್ಥೆಯು ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. ವಾಸ್ತವವಾಗಿ, ಹಿಂದೂ ರಾಷ್ಟ್ರಕ್ಕಾಗಿ ಹಣವನ್ನು ಖರ್ಚು ಮಾಡಬೇಕು. – ಆಚಾರ್ಯ ರಾಮಾಯಣ ಪ್ರಸಾದ, ಪಟವಾರಿ ಆಶ್ರಮ, ರಿಗಾ, ಮಧ್ಯಪ್ರದೇಶ

2. ಸನಾತನ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯ ಮಾಡಲು ಮತ್ತು ಹಿಂದೂ ರಾಷ್ಟ್ರಕ್ಕೆ ಕೊಡುಗೆ ನೀಡಲು ನಾನು ಇಚ್ಛಿಸುತ್ತೇನೆ! – ಶ್ರೀ. ಅಭಯ ಸಿಂಗ, ಶ್ರೀ. ಆಶಿಷ ಸಿಂಗ ಮತ್ತು ಶ್ರೀ. ಅನುರಾಗ ಮಿಶ್ರಾ, ಮಿರ್ಜಾಪುರ, ಉತ್ತರ ಪ್ರದೇಶ.

3. ಈ ಪ್ರದರ್ಶನ ನೋಡಿ ನನಗೆ ತುಂಬಾ ಸಂತೋಷವಾಯಿತು. ನಾನು ಸನಾತನ ಸಂಸ್ಥೆಯ ಕಾರ್ಯದಲ್ಲಿ ಭಾಗವಹಿಸಲು ಬಯಸುತ್ತೇನೆ. ನನ್ನ ಜಿಲ್ಲೆಯಲ್ಲೂ ಈ ಪ್ರದರ್ಶನ ನಡೆಯಬೇಕು ! – ಹಿಮಾಂಶು, ನವಾಬಗಂಜ, ಬರೇಲಿ, ಉತ್ತರ ಪ್ರದೇಶ.

4. ಅತ್ಯಂತ ಆಕರ್ಷಕವಾಗಿ ಗ್ರಂಥ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನೀವು ಧರ್ಮ ಜಾಗೃತಿಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಪ್ರದರ್ಶನವನ್ನು ಏರ್ಪಡಿಸುವ ಸೇವೆಯನ್ನು ಮಾಡುತ್ತಿರುವ ಎಲ್ಲಾ ಸಾಧಕರ ಉತ್ಸಾಹ ಅದ್ಭುತವಾಗಿದೆ. – ಶ್ರೀ. ಸುನಿಲ ಕುಮಾರ ಶುಕ್ಲಾ, ಬಿದ್ದಿಯಾ, ನವಾಬಗಂಜ, ಪ್ರಯಾಗರಾಜ, ಉತ್ತರ ಪ್ರದೇಶ.

5. ಪ್ರತಿಯೊಬ್ಬರೂ ಸಮಯವನ್ನು ಮೀಸಲಿಟ್ಟು ಸನಾತನದ ಗ್ರಂಥ ಪ್ರದರ್ಶನವನ್ನು ವೀಕ್ಷಿಸಬೇಕು ಮತ್ತು ಸನಾತನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಈ ಪ್ರದರ್ಶನ ಅದ್ಭುತ ಮತ್ತು ಸುಂದರವಾಗಿದೆ. ಇದರಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ಈಶ್ವರನು ಈ ಸಂಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯಲಿ. – ಶ್ರೀ. ಅನುರಾಗ ತಿವಾರಿ, ಪ್ರಯಾಗರಾಜ, ಉತ್ತರ ಪ್ರದೇಶ.

6. ಸನಾತನದ ಗ್ರಂಥ ಪ್ರದರ್ಶನ ನನ್ನ ಊರಿನಲ್ಲಿಯೂ ನಡೆಯಬೇಕೆಂದು ನಾನು ಬಯಸುತ್ತೇನೆ! – ಸ್ವಾಮಿ ಸೋಮ ಪ್ರಕಾಶ ಮಹಾರಾಜ, ಸಂಧೌಡ, ಪಂಜಾಬ.

7. ಸನಾತನದ ಕಾರ್ಯವನ್ನು ಪ್ರಚಾರ ಮಾಡಲು ನಾನು ಬಯಸುತ್ತೇನೆ ! – ಗಾಯತ್ರಿ ಗಿರಿ, ಜುನಾ ಆಖಾಡಾ, ಶ್ರೀನಗರ, ಗುಜರಾತ.

8. ಪ್ರದರ್ಶನವನ್ನು ನೋಡಿ ಆನಂದವಾಯಿತು. ನಾವೆಲ್ಲರೂ ಒಟ್ಟಾಗಿ ಸನಾತನ ಧರ್ಮವನ್ನು ಪ್ರಚಾರ ಮಾಡುವ ಕಾರ್ಯ ಮಾಡೋಣ ! – ಶ್ರೀ. ಜಿಲೆ ಸಿಂಗ, ಭಿಪಾಲಿ, ಹರಿಯಾಣಾ.

9. ನಾನು ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುತ್ತೇನೆ. ನಾನು ಸ್ವತಃ ಬಾಲಸಂಸ್ಕಾರವರ್ಗವನ್ನು ತೆಗೆದುಕೊಳ್ಳುತ್ತೇನೆ. -ಶ್ರೀ. ರಸಿಕ ಲೋಚನ ಪಾಂಡೆ, ಒಡಿಶಾ

10. ನಾನು ಸನಾತನ ಸಂಸ್ಥೆಯ ಸಹಯೋಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ ! – ಶ್ರೀ. ರಾಜೇಶ ಸಾಹು ಮತ್ತು ಶ್ರೀ. ಫುಲಚಂದ್ರ ವಿಶ್ವಕರ್ಮ, ಲಲಿತಪುರ, ಉತ್ತರ ಪ್ರದೇಶ.

11. ವಕೀಲ ಪವನ ಕುಮಾರ ಖನುರಿಯಾ, ಜಮ್ಮು – ಸನಾತನ ಸಂಸ್ಥೆಯ ಪ್ರದರ್ಶನವನ್ನು ನೋಡಿ ಒಳ್ಳೆಯದೆನಿಸಿತು. ಈ ಕಾರ್ಯ ಮಾಡುತ್ತಿರುವುದಕ್ಕಾಗಿ ಸನಾತನದ ಸಾಧಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಿಮ್ಮ ಪರವಾಗಿ ಆಯೋಜಿಸಲಾದ ವಕೀಲರ ಸಭೆಯಲ್ಲಿ ನಾನು ಆನ್ಲೈನ್ನಲ್ಲಿ ಭಾಗವಹಿಸುತ್ತೇನೆ.

12. ಶ್ರೀ. ಕುಲದೀಪ ಕುಮಾರ, ಪ್ರಯಾಗರಾಜ, ಉತ್ತರ ಪ್ರದೇಶ – ಈ ಪ್ರದರ್ಶನವನ್ನು ವೀಕ್ಷಿಸಿದ ನಂತರ, ಧರ್ಮ, ಕರ್ಮ, ಪೂಜೆ, ಸ್ನಾನ ಮಾಡುವುದು ಹೇಗೆ ಮತ್ತು ದಾನದ ಮಹತ್ವದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಸಿಕ್ಕಿತು. ಈ ಪ್ರದರ್ಶನದಿಂದ ನನಗೆ ಬಹಳಷ್ಟು ಕಲಿಯಲು ಸಿಕ್ಕಿದೆ.

13. ರೂಪಾಲಿ ಅಗ್ರವಾಲ, ಹರಿಯಾಣ – ಇಂದಿನ ಕಾಲದಲ್ಲಿ, ಸನಾತನ ಸಂಸ್ಕೃತಿಯ ಜ್ಞಾನವು ಕಣ್ಮರೆಯಾಗುತ್ತಿದೆ. ಈ ಪ್ರದರ್ಶನದ ಮೂಲಕ ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳು ಶ್ಲಾಘನೀಯವಾಗಿದೆ.

14. ಶ್ರೀ. ಮದನ ಮೋಹನ ಪಂಡಾ, ಒಡಿಶಾ – ನಾನು ಹಿಂದೂ ರಾಷ್ಟ್ರದ ಕಾರ್ಯಗಳಲ್ಲಿ ಭಾಗವಹಿಸಲು ಬಯಸುತ್ತೇನೆ.

15. ಶ್ರೀ. ಮುಕುಂದ ಲಾಲ, ಪ್ರಯಾಗರಾಜ, ಉತ್ತರ ಪ್ರದೇಶ – ನನಗೆ ಸಾಧನೆಯ ಬಗ್ಗೆ ಮಾಹಿತಿಬೇಕು, ಮತ್ತು ನಾನು ಸಾಧನೆಯನ್ನೂ ಮಾಡಲು ಬಯಸುತ್ತೇನೆ.

16. ಶ್ರೀ. ಪ್ರೇಮಚಂದ ಮೂಂಡ, ರಾಜಸ್ಥಾನ – ನನಗೆ ಸನಾತನ ಸಂಸ್ಥೆಯ ಸದಸ್ಯನಾಗಬೇಕಿದೆ. ನೀವು ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ. ನಾನು ನನ್ನ ಹಳ್ಳಿಯಲ್ಲಿ, ಉಚಿತವಾಗಿ ಆಯುರ್ವೇದ ಔಷಧಿಗಳನ್ನು ನೀಡುವ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತೇನೆ. ಹಾಗೆಯೇ ಜನರಿಗೆ ಉತ್ತಮ ನೈತಿಕತೆ, ಆರೋಗ್ಯ, ಉತ್ತಮ ಜ್ಞಾನ ಮತ್ತು ಉದ್ಯೋಗ ನೀಡುವ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

17. ಶ್ರೀ. ಅಮಿತ ಗುಪ್ತಾ, ಜಮ್ಮು ಮತ್ತು ಕಾಶ್ಮೀರ – ಪ್ರದರ್ಶನ ತುಂಬಾ ಚೆನ್ನಾಗಿದೆ. ಸನಾತನ ಸಂಸ್ಥೆಯ ಶಾಖೆ ಜಮ್ಮುವಿನಲ್ಲಿರಬೇಕೆಂದು ನಾನು ಭಾವಿಸುತ್ತೇನೆ.

18. ಶ್ರೀ. ಮನೋಜ ಕುಮಾರ, ಹರಿಯಾಣ – ಪ್ರದರ್ಶನವು ತುಂಬಾ ಪ್ರಭಾವಶಾಲಿಯಾಗಿದೆ. ಸನಾತನದ ಕಾರ್ಯದಲ್ಲಿ ಭಾಗವಹಿಸಿ ನಾನು ನಿಮಗೆ ಸಹಾಯ ಮಾಡಲು ಬಯಸುತ್ತೇನೆ.