
ಪ್ರಯಾಗರಾಜ, ಜನವರಿ 25 (ಸುದ್ದಿ) – ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕರಾದ ಶ್ರೀ. ಸುನೀಲ ಘನವಟ ಇವರು ಜನವರಿ 24 ರಂದು ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರನ್ನು ಭೇಟಿಯಾದರು. ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರು ಪಂಚಾಯತ್ ನಿರಂಜನಿ ಅಖಾಡದ ಮುಖ್ಯಸ್ಥರಾಗಿದ್ದಾರೆ.

ಅವರ ಭವ್ಯ ಶಿಬಿರವು ಸೆಕ್ಟರ್ 9 ರಲ್ಲಿದೆ. ಈ ಸಂದರ್ಭದಲ್ಲಿ, ಸಮಿತಿಯ ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸಮನ್ವಯಕರಾದ ಶ್ರೀ. ಶ್ರೀರಾಮ ಲುಕತುಕೆ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಾಮಿ ಕೈಲಾಶಾನಂದ ಗಿರಿ ಇವರಿಗೆ ಶ್ರೀ. ಘನವಟ ಇವರು ಜನವರಿ 31 ರಂದು ಪ್ರಯಾಗರಾಜನಲ್ಲಿ ನಡೆಯಲಿರುವ ಹಿಂದೂ ಅಧಿವೇಶನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ಸ್ವಾಮೀಜಿ, “ನನಗೆ ನಿನ್ನ ಪರಿಚಯವಿದೆ” ಎಂದರು. ನಾನು ಪ್ರಸ್ತುತ ಅಖಾಡ ನಡೆಯುತ್ತಿರುವ ಸಭೆಗಳಲ್ಲಿ ನಿರತನಾಗಿದ್ದೇನೆ. “ನನ್ನ ಆಶೀರ್ವಾದ ಇದೆ” ಎಂದು ಅವರು ಹೇಳಿದರು.