ಗೋವಾದಲ್ಲಿ ಭಾಜಪ ಗೋಮಾಂಸ ನಿಷೇಧಿಸಿದರೆ ಒಂದೇ ದಿನದಲ್ಲಿ ಸರಕಾರ ಪತನ ! – ಶಾಸಕ ಹಫೀಜ್ ರಫೀಕುಲ್ ಇಸ್ಲಾಂ

ಅಸ್ಸಾಂನ ಭಾಜಪ ಸರಕಾರವು ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸವನ್ನು ನಿಷೇಧಿಸಿದ ನಂತರ ಶಾಸಕ ಹಫೀಜ್ ರಫೀಕುಲ್ ಇಸ್ಲಾಂ ಇವನ ಟೀಕೆ !

ಗೋಹಾಟಿ (ಅಸ್ಸಾಂ) – ಜನರು ಏನು ತಿನ್ನಬೇಕು ಮತ್ತು ಏನನ್ನು ಧರಿಸಬೇಕು ಎಂಬುದನ್ನು ರಾಜ್ಯ ಸಚಿವ ಸಂಪುಟ ನಿರ್ಧರಿಸಬಾರದು. ಗೋವಾದಲ್ಲಿ ಭಾಜಪ ಗೋಮಾಂಸವನ್ನು ನಿಷೇಧಿಸಲು ಸಾಧ್ಯವಿಲ್ಲ; ಏಕೆಂದರೆ ಅಲ್ಲಿ ಹಾಗೆ ಮಾಡಿದರೆ ಅವರ ಸರಕಾರ ಒಂದೇ ದಿನದಲ್ಲಿ ಬೀಳಬಹುದು, ಎಂದು ಅಸ್ಸಾಂನ ವಿರೋಧ ಪಕ್ಷದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹಫೀಜ್ ರಫೀಕುಲ್ ಇಸ್ಲಾಂ ಅವರು ಅಸ್ಸಾಂ ಸರಕಾರವನ್ನು ಟೀಕಿಸಿದರು, ಸರಕಾರವು ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸವನ್ನು ನಿಷೇಧಿಸಿರುವ ಬಗ್ಗೆ ಅವರು ಮಾತನಾಡುತ್ತಿದ್ದರು.

ಶಾಸಕ ರಫೀಕುಲ್ ಇಸ್ಲಾಂ ಮಾತನಾಡಿ, ಈಶಾನ್ಯದ ಪ್ರತಿಯೊಂದು ರಾಜ್ಯಗಳಲ್ಲಿ ಭಾಜಪ ಸ್ವ ಬಲದ ಸರಕಾರ ಇದೆ. ಅಥವಾ ಅದು ಮಿತ್ರಪಕ್ಷಗಳ ನೆರವಿನಿಂದ ಸರಕಾರ ನಡೆಸುತ್ತಿದೆ. ಈಶಾನ್ಯದ ಎಲ್ಲಾ ರಾಜ್ಯಗಳಲ್ಲಿ ಗೋಮಾಂಸವನ್ನು ತಿನ್ನಲಾಗುತ್ತದೆ ಅಥವಾ ತಿನ್ನಲು ಅನುಮತಿಸಲಾಗಿದೆ. ಅಲ್ಲಿ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಭಾಜಪ ಅಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ; ಆದರೆ ಅಸ್ಸಾಂನಲ್ಲಿ ಹೀಗೆ ಏಕೆ ಮಾಡುತ್ತಿದ್ದಾರೆ ? ಅಸ್ಸಾಂನಲ್ಲಿ ಮುಸ್ಲಿಮರು, ಕ್ರೈಸ್ತರು ಹಾಗೆಯೇ ಬುಡಕಟ್ಟು ಜನರ ಅನೇಕ ಸಮಸ್ಯೆಗಳಿದ್ದು ಆ ಸಮಸ್ಯೆಗಳನ್ನು ಚರ್ಚಿಸಬೇಕು. ಯಾರ ಮನೆಯಲ್ಲಿ ಏನು ಬೇಯಿಸುತ್ತಾರೆ, ಯಾರು ಏನು ಉಡುತ್ತಾರೆ, ಯಾರು ಏನು ತಿನ್ನುತ್ತಾರೆ ಈ ವಿಷಯಗಳ ಮೇಲೆ ಚರ್ಚೆ ನಡೆಯಬಾರದು ಎಂದಿದ್ದಾರೆ.