ಬಾಂಗ್ಲಾದೇಶದಲ್ಲಿ ಚಿನ್ಮಯ ಪ್ರಭು ಅವರ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ

ಗಂಭೀರ ಸ್ಥಿತಿ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಕೋಲಕಾತಾ (ಬಂಗಾಳ) – ಇಲ್ಲಿಯ ಇಸ್ಕಾನ್ ವಕ್ತಾರ ರಾಧಾರಮಣ ದಾಸ ಇವರು, ‘ಬಾಂಗ್ಲಾದೇಶದ ಹಿಂದೂ ಸಮಾಜದ ಪ್ರಮುಖ ಮುಖ ಚಿನ್ಮಯ್ ಪ್ರಭು ಪರ ವಾದಿಸುತ್ತಿದ್ದ ವಕೀಲ ರಮೆನ ರಾಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಅವರ ಮನೆಯ ಮೇಲೂ ದಾಳಿ ನಡೆದಿದೆ. ರಾಯ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ’, ಎಂದು ಹೇಳಿದರು.
ರಾಧಾರಾಮಣ ದಾಸ್ ಇವರು, ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ರಾಯ ಇವರು ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ. ರಾಯ್ ಅವರಿಗಾಗಿ ಪ್ರಾರ್ಥಿಸುವಂತೆಯೂ ಮನವಿ ಮಾಡಿದರು. ದೇಶದ್ರೋಹದ ಆರೋಪದ ಮೇಲೆ ಚಿನ್ಮಯ ಪ್ರಭು ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರ ಜಾಮೀನು ಅರ್ಜಿಯನ್ನೂ ತಿರಸ್ಕರಿಸಲಾಗಿದೆ. ಜನವರಿ 2, 2025 ರಂದು ಅವರ ಪ್ರಕರಣದ ವಿಚಾರಣೆ ನಡೆಯಲಿದೆ.

ಚಿನ್ಮಯ್ ಪ್ರಭು ಪರ ವಕೀಲರಿಗೆ ಭದ್ರತೆ ಒದಗಿಸಬೇಕು !

ರಾಯ ಮೇಲಿನ ದಾಳಿಯ ನಂತರ, ಭದ್ರತಾ ಕಾರಣಗಳಿಗಾಗಿ ಚಿನ್ಮೋಯ್ ಪ್ರಭು ಪರವಾಗಿ ಯಾವುದೇ ವಕೀಲರು ಮುಂದೆ ಬಂದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯ್ ಪ್ರಭು ಪರವಾಗಿ ವಾದಿಸುವ ವಕೀಲರಿಗೆ ಸೂಕ್ತ ಭದ್ರತೆ ಒದಗಿಸುವಂತೆ ನಾವು ಬಾಂಗ್ಲಾದೇಶ ಸರಕಾರದ ಕೋರುತ್ತೇವೆ ಎಂದು ರಾಧಾರಮಣ ದಾಸ್ ಹೇಳಿದ್ದಾರೆ.

ಸಾರ್ವಜನಿಕವಾಗಿ ತಮ್ಮ ಧಾರ್ಮಿಕ ಗುರುತನ್ನು ಬಹಿರಂಗಪಡಿಸುವ ಬಟ್ಟೆಗಳನ್ನು ಧರಿಸಬೇಡಿ ! – ಬಾಂಗ್ಲಾದೇಶದಲ್ಲಿ ಇಸ್ಕಾನ್ ಅನುಯಾಯಿಗಳಿಗೆ ಸಲಹೆ

ರಾಧಾರಾಮನ್ ದಾಸ್ ಇವರು, ಬಾಂಗ್ಲಾದೇಶದ ಪರಿಸ್ಥಿತಿ ಆತಂಕಕಾರಿಯಾಗಿದೆ, ನಮಗೆ ಫೋನ್ ಮಾಡುತ್ತಿರುವ ಸಾಧುಗಳು ಮತ್ತು ಭಕ್ತರು, ಸಾರ್ವಜನಿಕವಾಗಿ ತಮ್ಮನ್ನು ಇಸ್ಕಾನ್ ಅನುಯಾಯಿಗಳು ಅಥವಾ ಸಾಧುಗಳು ಎಂದು ಗುರುತಿಸಿಕೊಳ್ಳಬೇಡಿ. ಮನೆ ಅಥವಾ ದೇವಸ್ಥಾನಗಳಲ್ಲಿ ಅವರ ಧರ್ಮವನ್ನು ಪಾಲಿಸುವಂತೆ ಕೇಳಿಕೊಂಡಿದ್ದೇವೆ. ಗಮನ ಸೆಳೆಯದ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಿದ್ದೇವೆ. ಈ ಕ್ರಮವು ತಾತ್ಕಾಲಿಕವಾಗಿದೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾತ್ರ ಉದ್ದೇಶಿಸಲಾಗಿದೆ. ಇದು ಸಲಹೆ ಅಥವಾ ಸಾಮಾನ್ಯ ಮಾರ್ಗದರ್ಶನವಲ್ಲ; ಆದರೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಮ್ಮನ್ನು ಕರೆ ಮಾಡುತ್ತಿರುವ ಸಾಧುಗಳು ಮತ್ತು ಭಕ್ತರಿಗೆ ಇದು ನನ್ನ ವೈಯಕ್ತಿಕ ಸಲಹೆಯಾಗಿದೆ. ನಮ್ಮ ಅನೇಕ ಭಕ್ತರು ಮತ್ತು ಅವರ ಕುಟುಂಬಗಳಿಗೆ ಬೆದರಿಕೆಗಳು ಬಂದಿವೆ. ಅವರನ್ನು ಹೆದರಿಸಲಾಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅಂತಹ ಸುದ್ದಿಗಳನ್ನು ಪ್ರತಿದಿನ ಓದಬೇಕಾಗಬಹುದು !