ನರ್ಮದಾಪುರಂ (ಮಧ್ಯಪ್ರದೇಶ) ಕ್ರೈಸ್ತ ಸಂಸ್ಥೆಯ ಅನಾಥಾಶ್ರಮದಲ್ಲಿ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ

  • ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಅವರ ಮಾಹಿತಿ

  • ಬಾಲಕಿಯ ಮತಾಂತರಕ್ಕೆ ಸಂಚು ರೂಪಿಸಿದ್ದ ಆರೋಪ

ನರ್ಮದಾಪುರಂ (ಮಧ್ಯಪ್ರದೇಶ) – ಜಿಲ್ಲೆಯ ಇಟಾರಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯಲ್ಲಿ ಬಾಲಕಿಯ ಲೈಂಗಿಕ ಶೋಷಣೆ ಮಾಡಲಾಗಿದ್ದು ಆಕೆಯ ಮತಾಂತರ ಮಾಡುವ ಸಂಚು ನಡೆದಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಆರೋಪಿಸಿದ್ದಾರೆ. ಈ ಸಂಸ್ಥೆಯಲ್ಲಿ ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಯಿತು; ಆದರೆ ಈ ಬಗ್ಗೆ ಸಂಸ್ಥೆಯು ಪೊಲೀಸ್ ಠಾಣೆಯಲ್ಲಿ ದೂರು ನೀಡಲಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ಲೈಂಗಿಕ ಶೋಷಣೆಯ ನಂತರ ಬಾಲಕಿಯ ಮೇಲೆ ಒತ್ತಡ ಹೇರಿ ಅವಳ ಮತಾಂತರ ಮಾಡುವುದೇ ಸಂಸ್ಥೆಯ ದುರುದ್ದೇಶವಾಗಿತ್ತು ಎಂದು ಕಾನೂನಗೊ ಹೇಳಿದ್ದಾರೆ.

1. ನರ್ಮದಾಪುರಂನಲ್ಲಿ ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ನಡೆಸುತ್ತಿರುವ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಓರ್ವ ನಿರ್ಗತಿಕ ಹಿಂದೂ ಹುಡುಗಿಯನ್ನು ಅಲ್ಲಿಂದ ಕ್ರಿಶ್ಚಿಯನ್ ಯುವಕನೊಬ್ಬ ಅಪಹರಿಸಿದನು ಎಂದು ಪ್ರಿಯಾಂಕ ಕಾನೂನಗೊ ಅವರು ‘ಎಕ್ಸ್’ ನಲ್ಲಿ ಪ್ರಸಾರವಾದ ‘ಪೋಸ್ಟ್’ನಲ್ಲಿ ಹೇಳಿದ್ದಾರೆ.

2. ಕೆಲವು ದಿನಗಳ ನಂತರ, ಬಾಲಕಿಯನ್ನು ಅತ್ಯಾಚಾರಿ ಯುವಕನ ಸಹೋದರಿಯ ಬಳಿ ಇರಿಸಲಾಯಿತು. 4 ದಿನಗಳ ನಂತರ, ಆರೋಪಿ ಕ್ರಿಶ್ಚಿಯನ್ ಹುಡುಗನು ಆ ಸಂತ್ರಸ್ತ ಹಿಂದೂ ಹುಡುಗಿಯನ್ನು ಅಲ್ಲಿಂದ ತನ್ನ ಮನೆಗೆ ಕರೆದೊಯ್ದು ಅಲ್ಲಿ ಒಂದು ವಾರದ ತನಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

3. ಈ ಸಂಪೂರ್ಣ ಪ್ರಕರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಮಾನವ ಕಳ್ಳಸಾಗಣೆ ಪ್ರಕರಣವಾಗಿದೆ. ಕ್ರಿಶ್ಚಿಯನ್ ರ ಓಲೈಕೆಗಾಗಿ ಅಧಿಕಾರಿಗಳು ಕ್ರಿಶ್ಚಿಯನ್ ಸಂಸ್ಥೆ ಯನ್ನು ಉಳಿಸಲು ಪ್ರಯತ್ನಿಸಿದ್ದಾರೆ, ಎಂದು ಪ್ರಿಯಾಂಕ ಅವರು ಆರೋಪಿಸಿದ್ದಾರೆ. (ಕ್ರಿಶ್ಚಿಯನ್ ಆಡಳಿತ! – ಸಂಪಾದಕರು)

4. ಸಂತ್ರಸ್ತ ಬಾಲಕಿಯು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಆರೋಪಿ ವಿರುದ್ಧ ಈ ಹಿಂದೆಯೂ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು. (ಮೊದಲ ಪ್ರಕರಣದ ಸರಿಯಾಗಿ ತನಿಖೆ ನಡೆಸಿ ಪೊಲೀಸರು ಕ್ರಮ ಕೈಗೊಂಡಿದ್ದರೆ, ಅತ್ಯಾಚಾರಿ ಯುವಕ ಮತ್ತೆ ಇಂತಹ ಕೃತ್ಯವನ್ನು ಮಾಡಲು ಧೈರ್ಯ ಮಾಡುತ್ತಿರಲಿಲ್ಲ! – ಸಂಪಾದಕರು)

ಸಂಪಾದಕೀಯ ನಿಲುವು

ಕ್ರೈಸ್ತ ಸಂಸ್ಥೆಗಳು ಅನೈತಿಕತೆ ಚಟುವಟಿಕೆಗಳ ಅಡ್ಡೆಗಳಾಗುತ್ತಿವೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಇದಾಗಿದೆ. ಇಂತಹ ಸಂಸ್ಥೆಗಳ ವಿರುದ್ಧ ನಾಸ್ತಿಕರು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ!