ನವದೆಹಲಿ – ಕೇಂದ್ರ ಸರಕಾರವು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ವಿಶೇಷ ನೆರವು ಯೋಜನೆಯಡಿ ಅಂಡರ್ ವಾಟರ್ ಮ್ಯೂಸಿಯಂ(ನೀರಿನ ಅಡಿಯಲ್ಲಿ ಸಂಗ್ರಹಾಲಯ), ಕೃತಕ ಬಂಡೆ (ಕಡಲ ಜೀವಿಗಳನ್ನು ಉತ್ತೇಜಿಸಲು ಮಾನವ ನಿರ್ಮಿತ ರಚನೆ) ಮತ್ತು ಜಲಾಂತರ್ಗಾಮಿ ಪ್ರವಾಸೋದ್ಯಮಕ್ಕಾಗಿ ಕೇಂದ್ರ ಸರಕಾರವು 46 ಕೋಟಿ 91 ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಿದೆ. ಅಲ್ಲದೆ ನಾಸಿಕ್‌ನಲ್ಲಿ ಮುಂಬರುವ ಸಿಂಹಸ್ಥ ಕುಂಭಮೇಳದ ಹಿನ್ನೆಲೆಯಲ್ಲಿ ಗೋದಾಘಾಟ್ ಪ್ರದೇಶದಲ್ಲಿ ‘ರಾಮ್ ಕಾಲ್ ಪಥ್’ ನಿರ್ಮಾಣಕ್ಕೆ 99 ಕೋಟಿ 14 ಲಕ್ಷ ರೂಪಾಯಿಗಳ ಆರ್ಥಿಕ ನೆರವಿಗೆ ಒಪ್ಪಿಗೆ ನೀಡಿದೆ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಘೋಷಿಸಿದ್ದಾರೆ.