ಯಾದವ್ ಅವರ ಕರೆಯನ್ನು ಜನರು ವಿರೋಧಿಸಿದ್ದರು
ಮುಂಬಯಿ – ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಬೇಡಿ ಎಂದು ಸಲಹೆ ನೀಡಿದ್ದ ನಟ ರಾಜಪಾಲ ಯಾದವ್ ಇದೀಗ ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು, 2 ದಿನಗಳ ಹಿಂದೆ ನನ್ನ ಎಕ್ಸ್ ಖಾತೆಯಿಂದ ವೀಡಿಯೊವನ್ನು ಪೋಸ್ಟ್ ಮಾಡಲಾಗಿತ್ತು, ಅದನ್ನು ನಾನು ತಕ್ಷಣವೇ ಅಳಿಸಿದ್ದೇನೆ. ಈ ವೀಡಿಯೋದಿಂದ ದೇಶದಲ್ಲಿನ ಮತ್ತು ಜಗತ್ತಿನ ಯಾರ ಭಾವನೆಗಳಿಗೆ ನೋವಾಗಿದ್ದರೆ, ನಾನು ಮನಃಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ರಾಜಪಾಲ್ ಯಾದವ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಪಟಾಕಿಗಳನ್ನು ಸಿಡಿಸುವುದರಿಂದ ಪ್ರಾಣಿಗಳು ಹೆದರುತ್ತವೆ ಮತ್ತು ಪಟಾಕಿಗಳಿಂದ ವಾಯು ಮಾಲಿನ್ಯ ಆಗುತ್ತದೆ ಎಂದು ಹೇಳಿದ್ದರು.
Actor Rajpal Yadav faces Social Media backlash for urging people to avoid bursting firecrackers during 🪔🎇; Apologises
🛑 How did he even have the courage to make such an appeal? Why doesn’t anyone make a similar appeal to people of other religions?#Bollywood l राजपाल यादव… pic.twitter.com/IvWOLykwse
— Sanatan Prabhat (@SanatanPrabhat) November 1, 2024
ಸಂಪಾದಕೀಯ ನಿಲುವು
ಮೂಲತಃ, ಅಂತಹ ಕರೆಯನ್ನು ಮಾಡಲು ಹೇಗೆ ಧೈರ್ಯ ವಾಗುತ್ತದೆ ? ಬೇರೆ ಧರ್ಮದವರಿಗೆ ಯಾರೂ ಈ ವಿಷಯದ ಬಗ್ಗೆ ಏಕೆ ಕರೆ ನೀಡುವುದಿಲ್ಲ ? |