ವಿಜಯಪುರದ ರೈತರ ಜಮೀನಿನ ಬಳಿಕ ಈಗ ಹಿಂದೂ ಮಠಗಳ ಜಮೀನುಗಳೂ ‘ವಕ್ಫ್’ ಆಸ್ತಿ !

ವಿಜಯಪುರ – ಸಿಂದಗಿಯ ವಿರಕ್ತ ಮಠದ ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿ ಮಾರ್ಪಟ್ಟಿದೆ. ‘ಸರ್ವೆ ನಂ. 1020’ರಲ್ಲಿರುವ ಆಸ್ತಿಯನ್ನು ‘ವಕ್ಫ್ ಬೋರ್ಡ’ ಸ್ಮಶಾನ ಎಂದು ನೋಂದಾಯಿಸಿದೆ. ಸಿದ್ದಲಿಂಗ ಸ್ವಾಮೀಜಿ ಈ ಮಠದ ಪೀಠಾಧಿಪತಿ ಆಗಿದ್ದಾಗ ಸರ್ವೆ ಸಂಖ್ಯೆ 11 ಖಾಲಿಯಾಗಿತ್ತು. 2018-19ನೇ ಸಾಲಿನಲ್ಲಿ ಈ ಖಾಲಿ ಕ್ಷೇತ್ರವನ್ನು ‘ವಕ್ಫ್ ಬೋರ್ಡ್’ ಎಂದು ಸೇರಿಸಲಾಗಿದೆ.

13 ನೇ ಶತಮಾನದಲ್ಲಿ ಸ್ಥಾಪಿತವಾದ ಮಠವು ಹೇಗೆ ಸ್ಮಶಾನವಾಯಿತು? 1.28 ಎಕರೆ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ಸೇರಿಸಿರುವುದು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸಿಂದಗಿ ತಾಲೂಕಿನ ಹಲವು ಹಿಂದೂ ಮಠಗಳ ಆಸ್ತಿಗಳು ವಕ್ಫ್ ಮಂಡಳಿಗೆ ಸೇರ್ಪಡೆಯಾಗಿರುವ ಬಗ್ಗೆ ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ವಕ್ಫ್ ಬೋರ್ಡ್ ಸೇರ್ಪಡೆ ಬಗ್ಗೆ ಮಾಹಿತಿ ಪಡೆದ ಭಕ್ತರು ಸಂಘಟಿತರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ದೇಶದಲ್ಲಿರುವ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಹಿಂದೂ ಮಠಗಳು ವಕ್ಫ್ ಆಸ್ತಿ ಎಂದು ಹೇಳುವವರು ನಾಳೆ ಭಾರತದ ಬಹುಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಭಾರತವನ್ನು ಅನೇಕ ವಿಭಜನೆಗಳನ್ನು ಮಾಡುತ್ತಾರೆ.
  • ಇದರಿಂದ, ವಕ್ಫ್ ಕಾನೂನನ್ನು ಬದಲಾಯಿಸುವ ಅಗತ್ಯವಿರದೇ ಅದನ್ನು ರದ್ದುಗೊಳಿಸುವುದು ಅವಶ್ಯಕ ಎಂಬುದು ಸ್ಪಷ್ಟವಾಗುತ್ತದೆ ! ಆದ್ದರಿಂದ ಹಿಂದೂಗಳು ಸಂಘಟಿತರಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ವಕ್ಫ್ ಕಾಯ್ದೆಯನ್ನು ರದ್ದುಪಡಿಸಬೇಕು !