Jaishankar Statement : ಮಣಿಪುರ ಹಿಂಸಾಚಾರದ ಕುರಿತು ರಾಜಕೀಯ ಮಾಡಿ ದೇಶದ ಘನತೆಯನ್ನು ಹಾಳು ಮಾಡುವುದು ದುರದೃಷ್ಟಕರ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಮುಂಬಯಿ – ಮಣಿಪುರ ಹಿಂಸಾಚಾರವನ್ನು ರಾಜಕೀಯಗೊಳಿಸುವುದು ದುರದೃಷ್ಟಕರ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿನ ಭಾಜಪ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಜೈಶಂಕರ್ ಮಾತು ಮುಂದುವರೆಸಿ, ಮಣಿಪುರದಲ್ಲಿನ ಸಮಸ್ಯೆಗಳು ಹಳೆಯ ಮತ್ತು ಜಟಿಲವಾಗಿವೆ; ಆದರೆ ಮಣಿಪುರದ ಹಿಂಸಾಚಾರದಿಂದ ಜಗತ್ತಿನ ಮುಂದೆ ಭಾರತದ ಘನತೆಗೆ ಮಸಿ ಬಳಿಯುವ ರಾಜಕೀಯ ನಿಲುವು ಸರಿಯಲ್ಲ ಎಂದು ಹೇಳಿದರು.

2014ರ ಹಿಂದೆ ಆದಂತೆ ಯಾವುದೇ ನುಸುಳುವಿಕೆ ಆಗುತ್ತಿಲ್ಲ !

ವಿದೇಶಾಂಗ ಸಚಿವ ಜೈಶಂಕರ ಇವರು ಮಾತು ಮುಂದುವರೆಸಿ, ಕಳೆದ 10 ವರ್ಷಗಳಲ್ಲಿ ದೇಶದ ಗಡಿ ಪ್ರದೇಶದಲ್ಲಿ ಭಾರಿ ಬದಲಾವಣೆಯಾಗಿದ್ದು, ಗಡಿ ಬೇಲಿ ನಿರ್ಮಾಣದ ಪ್ರಗತಿಯಿಂದಾಗಿ ಹಿಂದಿನಂತೆ ಒಳನುಸುಳುವಿಕೆ ನಡೆಯುತ್ತಿಲ್ಲ. ಇನ್ನು ಮುಂದೆ 2014ರ ಮೊದಲು ಯಾರು ಬೇಕಾದರೂ ಭಾರತವನ್ನು ಪ್ರವೇಶಿಸಬಹುದಿತ್ತು. ದೇಶದ ಗಡಿಯನ್ನು ಸುಭದ್ರಗೊಳಿಸಲು ನಮ್ಮ ಸರಕಾರ ಪ್ರಯತ್ನಗಳನ್ನು ಮುಂದುವರೆಸುತ್ತದೆ. ಅಗತ್ಯವಿರುವಲ್ಲಿ ಬೇಲಿ ಕೂಡ ಹಾಕಲಾಗುವುದು ಎಂದು ಹೇಳಿದರು.

ಹೂಡಿಕೆಗೆ ಮಹಾರಾಷ್ಟ್ರ ಸೂಕ್ತ ರಾಜ್ಯ!

ದೇಶದಲ್ಲಿ ವಿದೇಶಿ ಹೂಡಿಕೆ ಕುರಿತು ಮಾತನಾಡಿದ ಡಾ. ಜೈಶಂಕರ್ ಇವರು, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯನ್ನು ಈಡೇರಿಸುವಲ್ಲಿ ಮಹಾರಾಷ್ಟ್ರದ ಪಾತ್ರ ದೊಡ್ಡದಾಗಿದೆ. ಮಹಾರಾಷ್ಟ್ರವು ಪ್ರಮುಖ ಭೌಗೋಳಿಕ ಪ್ರಯೋಜನವನ್ನು ಹೊಂದಿದೆ. ಹಾಗಾಗಿ ಹೂಡಿಕೆಗೆ ಮಹಾರಾಷ್ಟ್ರ ಸೂಕ್ತ ರಾಜ್ಯವಾಗಿದೆ. ಜರ್ಮನಿಯ ಹಲವು ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಆದ್ಯತೆ ನೀಡಿವೆ ಎಂದು ಹೇಳಿದರು.