ಲಂಡನ್ (ಬ್ರಿಟನ್) – ಭಾರತೀಯ ಉದ್ಯಮಿ ರತನ ಟಾಟಾ ಇವರು ಅಕ್ಟೋಬರ್ ೯ ರಂದು ನಿಧನರಾದರು. ಬ್ರಿಟನ್‌ನ ಆಕ್ಸಫೋರ್ಡ್ ವಿದ್ಯಾಪೀಠವು ರತನ ಟಾಟಾ ಇವರಿಗೆ ಗೌರವ ನೀಡುವ ನಿರ್ಣಯ ತೆಗೆದುಕೊಂಡಿದೆ. ಆಕ್ಸಫೋರ್ಡ್ ವಿದ್ಯಾಪೀಠ ರತನ್ ಟಾಟಾ ಇವರ ಹೆಸರಿನಲ್ಲಿ ಒಂದು ನೂತನ ಕಟ್ಟಡ ನಿರ್ಮಾಣ ಮಾಡಲಿದೆ. ಟಾಟಾ ಗ್ರೂಪ್ ಮತ್ತು ಆಕ್ಸಫೋರ್ಡ್ ವಿದ್ಯಾಪೀಠದಲ್ಲಿನ ಸೋಮರವಿಲೆ ಕಾಲೇಜ್ ಇವರಿಂದ ಈ ಕಟ್ಟಡ ಕಟ್ಟಲಾಗುವುದು. ಇದರ ಉದ್ದೇಶ ‘ವಿದ್ಯಾಪೀಠದಲ್ಲಿನ ಅಧ್ಯಯನ ಮತ್ತು ಶೈಕ್ಷಣಿಕ ಉಪಕ್ರಮ ಉನ್ನತ ಗುಣಮಟ್ಟ’ ಮಾಡುವುದಾಗಿದೆ.
ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಕ್ಸಫೋರ್ಡ್ ವಿದ್ಯಾಪೀಠದಲ್ಲಿ ‘ರಾಡಕ್ಲಿಪ್ ಅಬ್ಜರ್ವೇಟರಿ ಕ್ವಾರ್ಟರ್’ನಲ್ಲಿ ಈ ಕಟ್ಟಡ ಕಟ್ಟಲಾಗುವುದು. ‘ಟಾಟಾ ಸನ್ಸ್’ ನ ಅಧ್ಯಕ್ಷ ಎನ್. ಚಂದ್ರಶೇಖರನ್ ಇವರು ಮಾತನಾಡಿ, ರತನ ಟಾಟಾ ಇವರ ಹೆಸರಿನಿಂದ ಕಟ್ಟಿರುವ ಕಟ್ಟಡ ಭಾರತಕ್ಕಾಗಿ ಮಹತ್ವದ ಸಂಶೋಧನಾ ಕೇಂದ್ರ ಆಗಲಿದೆ. ರತನ್ ಟಾಟಾ ಇವರು ಮಾನವ ಕಲ್ಯಾಣಕ್ಕಾಗಿ ಮಾಡಿರುವ ಕಾರ್ಯಕ್ಕೆ ಇದು ಗೌರವವಾಗಿದೆ ಎಂದು ಹೇಳಿದರು.