ಕಾಂಗ್ರೆಸ್ಸಿನ ಹಿರಿಯ ನಾಯಕ ರಾಶಿದ ಅಲ್ವಿ ಹೇಳಿಕೆ !
ನವ ದೆಹಲಿ – ಉತ್ತರಖಂಡ ಮತ್ತು ಹಿಮಾಚಲಪ್ರದೇಶ ಸಹಿತ ಇತರ ರಾಜ್ಯಗಳಲ್ಲಿ ಅಕ್ರಮ ಮಸೀದಿಯ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಮಾಡುತ್ತಿದೆ. ದೇಶಾದ್ಯಂತ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತಿದೆ. ಹೆಚ್ಚುತ್ತಿರುವ ನಿಷೇಧದಿಂದ ಆತಂಕ ವ್ಯಕ್ತಪಡಿಸಲಾಗುತ್ತಿದೆ, ವಿಶೇಷವಾಗಿ ಭಾಜಪ ಆಡಳಿತ ಇರುವ ರಾಜ್ಯಗಳಲ್ಲಿ ಇದು ಕಂಡು ಬರುತ್ತಿದೆ. (ಭಾಜಪ ಸರಕಾರದ ಕಾಲದಲ್ಲಿ ಅಕ್ರಮ ಮಸೀದಿಗಳಿಗೆ ವಿರೋಧಿಸುವ ಶಕ್ತಿ ಕಾನೂನ ಪ್ರೇಮಿ ಜನರಲ್ಲಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸಹಿತ ಇದರ ಪಕ್ಷದ ಅಧಿಕಾರ ಅವಧಿಯಲ್ಲಿ ಆ ಧ್ರೈರ್ಯ ಮಾಡಲು ಸಾಧ್ಯವಿರಲಿಲ್ಲ, ಇದು ಅಲ್ವಿ ಒಪ್ಪಿಕೊಳ್ಳುತ್ತಿದ್ದಾರೆ ! – ಸಂಪಾದಕರು) ಮಸೀದಿಯ ಬಗ್ಗೆ ಹೆಚ್ಚುತ್ತಿರುವ ದ್ವೇಷ ನೋಡಿ ನನಗೆ ದುಃಖವಾಗುತ್ತಿದೆ ಮತ್ತು ನಾನು ಚಿಂತೆಯಲ್ಲಿದ್ದೇನೆ. ಎಲ್ಲಾಕಡೆ ಮಸೀದಿ ಕೆಡವುವ ಬಗ್ಗೆ ಬೇಡಿಕೆ ಮಾಡಲಾಗುತ್ತಿದೆ.
Senior Congress leader Rashid Ali’s statement!
‘If Hindus continue to raise their voices against illegal mo$que$, then there will be civil war!’This is nothing but a direct threat to Hindus from Ali !
It is important to note that he expects Hindus to do nothing even if… pic.twitter.com/Z1TBmS5OwK
— Sanatan Prabhat (@SanatanPrabhat) October 26, 2024
ಒಂದು ಕಡೆ ಇಸ್ಲಾಮಿ ದೇಶದಲ್ಲಿ ದೇವಸ್ಥಾನಗಳು ಕಟ್ಟುತ್ತಿರುವಾಗ ಇನ್ನೊಂದು ಕಡೆ ಭಾರತದಲ್ಲಿ ಮಸೀದಿಗಳನ್ನು ಗುರಿ ಮಾಡಲಾಗುತ್ತಿದೆ. (ಇಸ್ಲಾಮಿ ದೇಶದಲ್ಲಿ ದೇವಸ್ಥಾನಗಳು ಕಟ್ಟುತ್ತಿರುವಾಗ ಭಾರತದಲ್ಲಿ ಮತಾಂಧ ಮುಸಲ್ಮಾನರಿಂದ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ, ಹಿಂದುಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮಸೀದಿಯಿಂದ ದಾಳಿಗಳು ಮಾಡಲಾಗುತ್ತವೆ ಇದರ ಬಗ್ಗೆ ಅಲ್ವಿ ಇವರು ಬಾಯಿ ತೆರೆಯುವರೇ ? -ಸಂಪಾದಕರು) ಈ ಪರಿಸ್ಥಿತಿ ಬಹಳ ಕಾಲ ಉಳಿಯುವುದಿಲ್ಲ, ಇದರ ಗಂಭೀರ ಪರಿಣಾಮ ಆಗಬಹುದು. ಇಂತಹ ಘಟನೆಗಳು ದೇಶವನ್ನು ಅಂತರ್ಯುದ್ಧದ ಕಡೆಗೆ ಕೊಂಡೋಯುತ್ತಿದೆ, ಎಂದು ಕಾಂಗ್ರೆಸ್‌ನ ನಾಯಕ ರಾಶಿದ ಆಲ್ವಿ ಇವರು ‘ಐ.ಎ.ಏನ್.ಎಸ್. (ಇಂಡೋ ಏಷಿಯನ್ ನ್ಯೂಸ್ ಸರ್ವಿಸ್) ಈ ವಾರ್ತಾ ಸಂಸ್ಥೆಯ ಜೊತೆಗೆ ಮಾತನಾಡುವಾಗ ಹೇಳಿದರು.
ರಾಶಿದ ಅಲ್ವಿ ಮಾತು ಮುಂದುವರೆಸಿ, ಇಂದು ನಿಮ್ಮ ಹತ್ತಿರ (ಭಾಜಪದ ಹತ್ತಿರ) ಅಧಿಕಾರ ಮತ್ತು ಶಕ್ತಿ ಇದೆ; ಆದರೆ ಸರಕಾರ ಶಾಶ್ವತವಾಗಿ ಉಳಿಯುವುದಿಲ್ಲ. ಆದ್ದರಿಂದ ಮಸೀದಿ ಮತ್ತು ದೇವಸ್ಥಾನ ಇವುಗಳಿಗೆ ಸುರಕ್ಷೆಯ ಅಗತ್ಯವಿದೆ. ಎಲ್ಲಾ ಧಾರ್ಮಿಕ ಸ್ಥಳಗಳ ರಕ್ಷಣೆ ಮಾಡುವುದು, ಸರಕಾರದ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|