2014 Koppal Riots : 101 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ : ಕೊಪ್ಪಳ ಜಿಲ್ಲಾ ನ್ಯಾಯಾಲಯದ ತೀರ್ಪು

2014 ರ ರಾಜ್ಯದಲ್ಲಿನ ಜಾತಿ ಗಲಭೆ ಪ್ರಕರಣ

ಕೊಪ್ಪಳ ಜಿಲ್ಲಾ ನ್ಯಾಯಾಲಯ

ಕೊಪ್ಪಳ – ಕೊಪ್ಪಳ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ಏಕಕಾಲಕ್ಕೆ 101 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಸಾಮೂಹಿಕ ಶಿಕ್ಷೆ ದೇಶದ ಯಾವುದೇ ಜಾತಿ ಸಂಬಂಧಿತ ಪ್ರಕರಣದಲ್ಲಿನ ಅತಿದೊಡ್ಡ ಶಿಕ್ಷೆಯಾಗಿದೆ. ಇವರೆಲ್ಲರೂ ಆಗಸ್ಟ 28, 2014ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದ ಜಾತಿ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನಿರ್ಧರಿಸಲಾಗಿತ್ತು. ಹಿಂಸಾಚಾರದ ಸಮಯದಲ್ಲಿ, 117 ಜನರು ದಲಿತ ಗುಡಿಸಲುಗಳನ್ನು ಸುಟ್ಟಿದ್ದರು; ಆದಾಗ್ಯೂ, 10 ವರ್ಷಗಳ ವರೆಗೆ ನಡೆದ ಪ್ರಕರಣದ ಕಾಲಾವಧಿಯಲ್ಲಿ 16 ಆರೋಪಿಗಳು ಸಾವನ್ನಪ್ಪಿದ್ದಾರೆ. ನ್ಯಾಯಮೂರ್ತಿ ಚಂದ್ರಶೇಖರ ಸಿ. ಇವರು ಪ್ರತಿಯೊಬ್ಬ ಅಪರಾಧಿಗೆ 2 ರಿಂದ 5 ಸಾವಿರ ರೂಪಾಯಿಗಳ ದಂಡವನ್ನು ಕೂಡ ವಿಧಿಸಿದ್ದಾರೆ.

ಕೊಪ್ಪಳದಲ್ಲಿ ದಲಿತರಿಗೆ ಹೇರ್ ಕಟಿಂಗ್ ಮತ್ತು ಆಹಾರ ಪದಾರ್ಥಗಳ ಅಂಗಡಿಗಳಿಗೆ ಹೋಗದಂತೆ ತಡೆಯಲಾಗಿತ್ತು. ಆ ಸಮಯದಲ್ಲಿ ಎರಡು ಜನಾಂಗೀಯ ಗುಂಪುಗಳ ನಡುವೆ ಘರ್ಷಣೆ ನಡೆಯಿತು. ನಂತರ ಅದು ಹಿಂಸೆಗೆ ತಿರುಗಿತು. ಹಿಂಸಾಚಾರದಲ್ಲಿ ದಲಿತರ ಗುಡಿಸಲುಗಳನ್ನು ಸುಟ್ಟಿದ್ದರು.

‘ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ’ ಯು ಈ ಹಿಂಸಾಚಾರವನ್ನು ನಿಷೇಧಿಸಿ, ಮರಕುಂಬಿಯಿಂದ ಬೆಂಗಳೂರಿಗೆ ಮೆರವಣಿಗೆ ನಡೆಸಿತ್ತು. ಹಿಂಸಾಚಾರದ ಪ್ರಭಾವ ಎಷ್ಟು ದೊಡ್ಡದಾಗಿತ್ತು ಎಂದರೆ ಸಂಪೂರ್ಣ ಪ್ರದೇಶವನ್ನು ಮೂರು ತಿಂಗಳ ಕಾಲ ಪೊಲೀಸರ ನಿಗಾದಲ್ಲಿ ಇಡಲಾಗಿತ್ತು. ಹಿಂಸಾಚಾರದ ಎಲ್ಲಾ ಆರೋಪಿಗಳು ಈಗ ಬಳ್ಳಾರಿ ಕಾರಾಗೃಹದಲ್ಲಿದ್ದಾರೆ.