ಪಾಟಲಿಪುತ್ರ (ಬಿಹಾರ) – ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಬಿಹಾರದಲ್ಲಿ ಹಿಂದೂ ಸ್ವಾಭಿಮಾನ ಯಾತ್ರೆ ನಡೆಸಿದರು. ಬಿಹಾರದ ಕಿಶನಗಂಜ ಜಿಲ್ಲೆಯಲ್ಲಿ ಯಾತ್ರೆಯ ಸಮಯದಲ್ಲಿ ಜನರಿಗೆ ಉದ್ದೇಶಿಸಿ ಮಾತನಾಡುವಾಗ ಅವರು ಹಿಂದುಗಳಿಗೆ, ‘ಮನೆಯಲ್ಲಿ ಈಟೀ, ಖಡ್ಗ ಮತ್ತು ತ್ರಿಶೂಲ ಇಟ್ಟುಕೊಳ್ಳಿ, ಎಂದು ಕರೆ ನೀಡಿದರು. ‘ಈ ಆಯುಧಗಳನ್ನು ಶುದ್ಧಿಗೊಳಿಸಿ ಅದರ ಪೂಜೆ ಮಾಡಿರಿ ಮತ್ತು ಆವಶ್ಯಕತೆ ಬಂದಾಗ ಸ್ವರಕ್ಷಣೆಗಾಗಿ ಅದನ್ನು ಉಪಯೋಗಿಸಿ ಹೀಗೆ ಅವರು ಹೇಳಿದರು.
‘Keep spears, swords and tridents at Home – Use For Self-Defence’: Union Minister Giriraj Singh during #HinduSwabhimanYatra
गिरिराज सिंह I त्रिशूल I हिंदू स्वाभिमान यात्रा pic.twitter.com/87ULRHVfaX
— Sanatan Prabhat (@SanatanPrabhat) October 23, 2024
ಗಿರಿರಾಜ ಸಿಂಹ ಇವರು ಮಾತು ಮುಂದುವರೆಸಿ,
೧. ಹಿಂದೂ ಸಮುದಾಯ ಅಪಾಯದಲ್ಲಿದೆ ಮತ್ತು ಅದು ಸಂಘಟಿತವಾಗುವ ಅಗತ್ಯವಿದೆ. ನಾನು ಇಲ್ಲಿ (ಕಿಶನಗಂಜನಲ್ಲಿ) ಬರುವ ಮೊದಲು ಅರರಿಯ, ಕಟಿಹಾರ ಮತ್ತು ಪೂರ್ಣಿಯ ಈ ಹತ್ತಿರದ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ.
೨. ಎಲ್ಲಾ ಕಡೆಯ ಜನರು ಅವರ ಸಹೋದರಿ ಮತ್ತು ಹುಡುಗಿಯರ ಗೌರವದ ಕುರಿತು ನನ್ನ ಹತ್ತಿರ ಕಳವಳ ವ್ಯಕ್ತಪಡಿಸಿದರು. ನನಗೆ, ಪ್ರತಿವರ್ಷ ಅನೇಕ ಹಿಂದೂ ಹುಡುಗಿಯರು ‘ಲವ್ ಜಿಹಾದ್ ‘ಗೆ ಬಲಿಯಾಗುತ್ತಾರೆ. ಅದರ ನಂತರ ಅವರನ್ನು ಮತಾಂತರ (ಇಸ್ಲಾಂ) ಗೋಳಿಸಲಾಗುತ್ತದೆ ಎಂದು ಹೇಳಿದರು.
೩. ನನಗೆ, ಯಾವ ಸ್ಥಳದಲ್ಲಿ ಮುಸಲ್ಮಾನರ ಸಂಖ್ಯೆ ಹಿಂದುಗಳಿಗಿಂತಲೂ ಹೆಚ್ಚಾಗಿದೆ, ಅಲ್ಲಿ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದೆ ಮತ್ತು ಮಹಿಳೆಯರು ಸಿಂಧೂರ ಹಚ್ಚಿಕೊಳ್ಳುವಂತಹ ಧಾರ್ಮಿಕ ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡಲಾಗುತ್ತದೆ ಎಂಬುದು ಗೊತ್ತಿದೆ ಎಂದು ಹೇಳಿದರು.
೪. ಈ ಪ್ರದೇಶದಲ್ಲಿ ಕ್ರೈಸ್ತ ಮಷೀನರಿಗಳು ಕೂಡ ಸಕ್ರಿಯವಾಗಿವೆ; ಆದರೆ ಮುಸಲ್ಮಾನರು ಕೇವಲ ಹಿಂದುಗಳನ್ನೇ ಗುರಿ ಮಾಡುತ್ತಾರೆ.