|
ನವ ದೆಹಲಿ – ಇಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ 22 ರ ಸಾಯಂಕಾಲ ಹಿಂದೂ ವಿದ್ಯಾರ್ಥಿಗಳು ದೀಪಾವಳಿ ಆಚರಿಸುತ್ತಿರುವಾಗ ಮುಸಲ್ಮಾನ ವಿದ್ಯಾರ್ಥಿಗಳು ಅದನ್ನು ವಿರೋಧಿಸಿದ್ದರಿಂದ ದೊಡ್ಡ ವಿವಾದ ನಡೆಯಿತು. ಆ ಸಮಯದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳು ಅಲ್ಲಿ ಹಚ್ಚಲಾಗಿದ್ದ ಹಣತೆಗಳನ್ನು ಒದ್ದು ಆರಿಸಿದರು, ಅಲ್ಲದೇ ರಂಗೋಲಿಗಳನ್ನು ಅಳಿಸಿದರು. ಅವರು `ಅಲ್ಲಾಹು ಅಕಬರ’ (ಅಲ್ಲಾ ಮಹಾನ ಆಗಿದ್ದಾನೆ) `ನಾರಾ-ಎ- ತಕಬೀರ’ (ಅಲ್ಲಾ ಎಲ್ಲರಿಗಿಂತ ದೊಡ್ಡವನಾಗಿದ್ದಾನೆ) `ಪ್ಯಾಲೆಸ್ಟೇನ ಜಿಂದಾಬಾದ’ ಎಂದು ಘೋಷಣೆ ಕೂಗಿದರು. ತದನಂತರ ಎರಡೂ ಗುಂಪುಗಳಲ್ಲಿ ಘರ್ಷಣೆ ನಡೆಯಿತು, ಈ ಮಾಹಿತಿ ಸಿಗುತ್ತಲೇ ಪೊಲೀಸರು ಘಟನಾಸ್ಥಳವನ್ನು ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಇದುವರೆಗೂ ಈ ಪ್ರಕರಣದಲ್ಲಿ ಅಪರಾಧ ದಾಖಲಿಸಿರುವ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸಧ್ಯಕ್ಕೆ ಇಲ್ಲಿ ಭಾರಿ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ.
Mu$|!m students in Delhi’s Jamia Millia Islamia University prevent the celebration of #Diwali!
Lamps were kicked over, and rangoli was erased; Hindu students assaulted.
Mu$|!m students threatened Hindu girls, saying, “Wear a hijab, or we will rape you”; the administration… pic.twitter.com/bMyvz3GDkE
— Sanatan Prabhat (@SanatanPrabhat) October 23, 2024
ಮುಸಲ್ಮಾನ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿನಿಯರಿಗೆ `ಹಿಜಾಬ ಧರಿಸಿ, ಇಲ್ಲದಿದ್ದರೆ ಬಲಾತ್ಕಾರ ಮಾಡುತ್ತೇವೆ’ ಎಂದು ಬೆದರಿಕೆ
ಪ್ರತ್ಯಕ್ಷದರ್ಶಿಗಳು, ಮುಸಲ್ಮಾನ ವಿದ್ಯಾರ್ಥಿಗಳು ದೀಪಾವಳಿಯನ್ನು ವಿರೋಧಿಸುವಾಗ ಹಿಂದೂ ವಿದ್ಯಾರ್ಥಿನಿಯರಿಗೆ ನೀವು ಹಿಜಾಬ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆ ಮುಚ್ಚಲು ಉಪಯೋಗಿಸುವ ವಸ್ತ್ರ) ಧರಿಸಿರಿ, ಇಲ್ಲದಿದ್ದರೆ ನಾವು ಬಲಾತ್ಕಾರ ಮಾಡುತ್ತೇವೆ ಎಂದರು. ಅವರೇ ದೀಪಗಳನ್ನು ಒದ್ದು ಹಾರಿಸಿದರು, ರಂಗೋಲಿಯನ್ನು ಅಳಿಸಿದರು.
ಆಡಳಿತದಿಂದ ಮೌನ ! – ವಿದ್ಯಾರ್ಥಿಗಳ ಆರೋಪ
ವಿಶ್ವವಿದ್ಯಾಲಯದ ಪರಿಸರದಲ್ಲಿ ಗದ್ದಲ ಪ್ರಾರಂಭವಾದಾಗ ವಿಶ್ವವಿದ್ಯಾಲಯದ ಮುಖ್ಯ ಅಧಿಕಾರಿಯೊಂದಿಗೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು; ಆದರೆ ಅವರು ವಿದ್ಯಾರ್ಥಿಗಳನ್ನು ತಡೆಯಲಿಲ್ಲ ಎಂದು ಆಕ್ರೋಶಗೊಂಡ ಹಿಂದೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಗಾಯಗೊಳ್ಳುತ್ತಿರುವಾಗಲೂ ವಿಶ್ವವಿದ್ಯಾಲಯವು ಮೌನವಹಿಸಿದೆ.
ಸಂಪಾದಕೀಯ ನಿಲುವು
|