ಸ್ಟಾಲಿನ್ ಅವರು ತಮಿಳಿನವರಿಗೆ ತಮ್ಮ ಮಕ್ಕಳ ಹೆಸರನ್ನು ತಮಿಳು ಭಾಷೆಯಲ್ಲಿ ಇಡುವಂತೆ ಕರೆ ನೀಡಿದ ಪ್ರಕರಣ
ಚೆನ್ನೈ (ತಮಿಳುನಾಡು) – ಉದಯನಿಧಿ ಸ್ಟಾಲಿನ್ ಈ ಹೆಸರು ತಮಿಳಾ ? ಸ್ಟಾಲಿನ್ ರವರು ಮೊದಲು ಕುಟುಂಬದಲ್ಲಿನ ಸದಸ್ಯರಿಗೆ ತಮಿಳು ಹೆಸರುಗಳನ್ನು ಇಡಬೇಕು ನಂತರ ಮಾತನಾಡಬೇಕು, ಎಂದು ಕೇಂದ್ರ ಸಚಿವ ಎಲ್. ಮುರುಗನ್ ರವರು ಟೀಕೆ ಮಾಡಿದ್ದಾರೆ. ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ರವರು ಕೇಂದ್ರ ಸರಕಾರವು ತಮಿಳು ಜನರ ಮೇಲೆ ಹಿಂದಿ ಹೇರುತ್ತಿದೆ ಎಂದು ಆರೋಪಿಸುತ್ತಾ ‘ತಮಿಳುನಾಡಿನ ನವವಿವಾಹಿತರು ತಮ್ಮ ಮಕ್ಕಳಿಗೆ ತಮಿಳು ಭಾಷೆಯಲ್ಲಿ ಹೆಸರಿಡಬೇಕು’, ಎಂದು ಸಲಹೆ ನೀಡಿದ್ದರು. ಈ ಬಗ್ಗೆ ಮುರುಗನ್ ಮೇಲಿನಂತೆ ಟೀಕೆ ಮಾಡಿದ್ದಾರೆ. ಅವರು, ತಮಿಳುನಾಡಿನಲ್ಲಿ ಯಾರೂ ಹಿಂದಿಯನ್ನು ಬಲವಂತವಾಗಿ ಹೇರುತ್ತಿಲ್ಲ ಮತ್ತು ಯಾರಿಗೆ ಹಿಂದಿ ಕಲಿಯುವದಿದೆಯೋ, ಅವರು ಯಾವುದೇ ಅಡೆತಡೆಯಿಲ್ಲದೆ ಹಿಂದಿ ಕಲಿಯಬಹುದು ಎಂದು ಹೇಳಿದರು.
ಮುರುಗನ್ ಅವರು ಮಾತು ಮುಂದುವರೆಸುತ್ತಾ, ದ್ರಮುಕ (ದ್ರಾವಿಡ ಮುನ್ನೇತ್ರ ಕಳಘಂ, ಅಂದರೆ ದ್ರಾವಿಡ ಪ್ರಗತಿ ಸಂಘ) ಪಕ್ಷವು ಸಾಮಾಜಿಕ ನ್ಯಾಯದ ಭಾಷೆಯನ್ನು ಬಳಸುತ್ತದೆ. ವಾಸ್ತವದಲ್ಲಿ ಮಾತ್ರ ಅದರ ಸಂಪೂರ್ಣ ವಿರುದ್ಧವಾಗಿ ನಡೆಯುತ್ತಾರೆ. ನಿಜವಾಗಿಯೂ ಪ್ರಧಾನಿ ಮೋದಿ ತಮಿಳನ್ನು ಪ್ರಪಂಚದಾದ್ಯಂತ ತಲುಪಿಸುವ ಕೆಲಸ ಮಾಡುತ್ತಿದ್ದಾರೆ; ಆದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತ್ರ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಏನಿದು ಪ್ರಕರಣ ?ತಮಿಳುನಾಡಿನಲ್ಲಿ ಹಿಂದಿ ಭಾಷೆ ಹೇರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಒಂದು ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದರು. ದೂರದರ್ಶನ ಕೇಂದ್ರದಲ್ಲಿ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ‘ದ್ರಾವಿಡಂ’ ಪದವನ್ನು ಕೈಬಿಡಲಾಗಿದೆ. ದ್ರಮುಕ ಕಾರ್ಯಕರ್ತರು ಮತ್ತು ತಮಿಳುಪ್ರೇಮಿಗಳು ಇರುವವರೆಗೂ ತಮಿಳು ಭಾಷೆಯಿಂದ ‘ದ್ರಾವಿಡಂ’ ಪದ ತೆಗೆಯುವುದಿಲ್ಲ. ಹಿಂದಿ ಹೇರಿಕೆಯನ್ನು ತಮಿಳುನಾಡು ಎಂದಿಗೂ ಒಪ್ಪುವುದಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ತಮಿಳು ಭಾಷೆಯಲ್ಲಿ ಹೆಸರಿಡಬೇಕು ಎಂದು ಹೇಳಿದ್ದರು. |