TN DY. CM Statement: ತಮಿಳು ಭಾಷೆಯಲ್ಲಿ ನಿಮ್ಮ ಮಕ್ಕಳ ಹೆಸರನ್ನು ಇಡಿ ! – ತಮಿಳುನಾಡುವಿನ ಉಪಮುಖ್ಯಮಂತ್ರಿಯವರಿಂದ ಪೋಷಕರಿಗೆ ಸಲಹೆ

ಸೌಜನ್ಯ: ANI               ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್

ಚೆನ್ನೈ – ತಮಿಳುನಾಡಿನ ನವವಿವಾಹಿತರು ತಮ್ಮ ಮಕ್ಕಳ ಹೆಸರನ್ನು ತಮಿಳು ಭಾಷೆಯಲ್ಲಿಡಬೇಕು ಎಂದು ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸಲಹೆ ನೀಡಿದರು. ಇದರೊಂದಿಗೆ ತಮಿಳು ಭಾಷೆಯ ಮೇಲೆ ಹಿಂದಿ ಭಾಷೆ ಹೇರಬಾರದು ಎಂದೂ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅವರು,

1. ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯಂತೆ ದೇಶದಲ್ಲಿ ಹಿಂದಿ ಹೇರಲು ಯತ್ನಿಸುತ್ತಿದೆ. ಹಿಂದಿ ಹೇರಿಕೆಯನ್ನು ತಮಿಳುನಾಡು ಎಂದಿಗೂ ಒಪ್ಪುವುದಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಹೆಸರನ್ನು ತಮಿಳು ಭಾಷೆಯಲ್ಲಿ ಇಡಬೇಕು.

2. ತಮಿಳಿಗರ ಮೇಲೆ ನೇರವಾಗಿ ಹಿಂದಿ ಭಾಷೆಯನ್ನು ಹೇರಲು ಸಾಧ್ಯವಾಗದ ಕಾರಣ, ಕೇಂದ್ರ ಸರಕಾರವು ತಮಿಳು ರಾಜ್ಯಗೀತೆಯಿಂದ ‘ದ್ರಾವಿಡಂ’ ಪದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ. ತಮಿಳುನಾಡು ರಾಜ್ಯದ ಹೆಸರನ್ನು ಬದಲಾಯಿಸಲು ಅನೇಕರು ಪ್ರಯತ್ನಿಸಿದ್ದಾರೆ. ಸಂಪೂರ್ಣ ರಾಜ್ಯವು ಇದನ್ನು ವಿರೋಧಿಸಿದ್ದರಿಂದ ಹೀಗೆ ಮಾಡುವವರು ಕ್ಷಮೆ ಕೇಳಬೇಕಾಯಿತು.

3. ದ್ರಮುಕ ಪಕ್ಷದ ಕೊನೆಯ ವಾರಸುದಾರರು ಬದುಕಿರುವವರೆಗೂ ತಮಿಳು ಭಾಷೆ ಜೀವಂತವಾಗಿರುತ್ತದೆ. ತಮಿಳು, ತಮಿಳುನಾಡು, ದ್ರಾವಿಡಂ ಅನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.

ಸಂಪಾದಕೀಯ ನಿಲುವು

ಉಪಮುಖ್ಯಮಂತ್ರಿ ಉದಯನಿಧಿ ಅವರ ತಂದೆ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೆಸರನ್ನು ಅಂದಿನ ಸೋವಿಯತ್ ರಷ್ಯಾದ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಅವರ ಹೆಸರಿನ ಮೇಲೆ ಇಟ್ಟಿರುವುದಾಗಿ ಉಲ್ಲೇಖಿಸುತ್ತಾರೆ. ಸ್ವಂತ ಭಾಷೆಯ ಬಗ್ಗೆ ಹೆಮ್ಮೆ ಪಡುವ ಬಗ್ಗೆ ಇತರರಿಗೆ ಸಲಹೆ ನೀಡುವ ಮೊದಲು ಉದಯನಿಧಿಯವರು ತಮ್ಮ ತಂದೆಗೆ ನೀಡಿರುವ ಸರ್ವಾಧಿಕಾರಿಯ ವಿದೇಶಿ ಭಾಷೆಯ ಹೆಸರು ಅವರಿಗೆ ಒಪ್ಪಿಗೆಯೇ ? ಎನ್ನುವುದನ್ನೂ ಅವರು ತಮಿಳಿಯರಿಗೆ ಹೇಳಬೇಕು !