ಕುಗ್ಗುತ್ತಿರುವ ಜನಸಂಖ್ಯೆಯ ಕುರಿತು ಕಳವಳ ವ್ಯಕ್ತ !
ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ವಿವಾಹಿತ ಜೋಡಿಗಳಿಗೆ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಹಾಗೂ ಚಂದ್ರಬಾಬು ನಾಯ್ಡು ಇವರು ಆ ಸಮಯದಲ್ಲಿ ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯ ಕುರಿತು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತು ಮುಂದುವರೆಸುತ್ತಾ,
೧. ಜನಸಂಖ್ಯೆ ಕಡಿಮೆ ಆಗುವುದು ಮತ್ತು ಯುವಕರ ಸ್ಥಳಾಂತರ, ಇದು ರಾಜ್ಯಕ್ಕಾಗಿ ಅಪಾಯಕಾರಿ ಆಗಬಹುದು. ಜನಸಂಖ್ಯೆ ವ್ಯವಸ್ಥಾಪನೆಯ ಅಡಿಯಲ್ಲಿ ಕಾನೂನು ತರುವುದರ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಅದರಲ್ಲಿ ದೊಡ್ಡ ಕುಟುಂಬಗಳಿಗೆ ಪ್ರೋತ್ಸಾಹ ನೀಡುವ ವಿಚಾರ ಇದೆ.
೨. ಎರಡಕ್ಕಿಂತ ಹೆಚ್ಚು ಮಕ್ಕಳು ಇರುವವರಿಗೆ ಸ್ಥಳಿಯ ಸ್ವರಾಜ್ಯ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸುಲು ನಿಷೇಧ ಇರುವ ಹಿಂದಿನ ಕಾನೂನನ್ನು ಸರಕಾರ ರದ್ದುಪಡಿಸಿದೆ.
೩. ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಜನರಿಗೆ ಸ್ಥಳಿಯ ಸ್ವರಾಜ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಬೇಕು, ಅದಕ್ಕಾಗಿ ಸರಕಾರ ಕಾನೂನು ರೂಪಿಸುವ ಯೋಚನೆ ಮಾಡುತ್ತಿದೆ.
೪. ರಾಜ್ಯದಲ್ಲಿನ ಜನನ ದರ ಶೇಖಡ ೧.೬ ಕೆ ಬಂದಿದೆ, ಅದು ರಾಷ್ಟ್ರೀಯ ಸರಾಸರಿ ೨.೧ ಕ್ಕಿಂತಲೂ ಬಹಳ ಕಡಿಮೆ ಇದೆ. ಈ ದಿಕ್ಕಿನತ್ತ ಹೆಜ್ಜೆ ಇಡದಿದ್ದರೆ ಆಂಧ್ರಪ್ರದೇಶಕ್ಕೂ ಜಪಾನ್ ಮತ್ತು ಯುರೋಪ್ ಅಂತಹ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ತಪ್ಪಾದ ಸಲಹೆ ನೀಡುವ ರಾಜಕಾರಣಿಗಳು ಎಂದಾದರೂ ಸಮಾಜದ ಹಿತವನ್ನು ಮಾಡಲು ಸಾಧ್ಯವೇ ? ನಾಯ್ಡು ಇವರ ಈ ಸಲಹೆ ಎಂದರೆ, ‘ರೋಗಕ್ಕಿಂತ ಚಿಕಿತ್ಸೆ ಭಯಾನಕ’ ಈ ರೀತಿ ಇದೆ ! ಅದಕ್ಕಿಂತಲೂ ಅವರು ಯುವಕರಿಗೆ ಕಾರ್ಯಕ್ಷಮತೆ ಮತ್ತು ಕೌಶಲ್ಯ ವೃದ್ಧಿಯ ಬಗ್ಗೆ ಒತ್ತು ನೀಡುವುದು ಹೆಚ್ಚು ಯೋಗ್ಯ ಅನಿಸುತ್ತಿದೆ ! |