ಕೇರಳದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಿದ್ದ ಜಮಾಲುದ್ದೀನ ಎಂಬ ನಕಲಿ ವೈದ್ಯನ ಬಂಧನ !

ಕಾಸರಗೋಡು (ಕೇರಳ) – ನಕಲಿ ಔಷಧ ತಯಾರಿಸಿ ಚಿಕಿತ್ಸೆಯೂ ನೀಡುತ್ತಿದ್ದ ನಕಲಿ ವೈದ್ಯನನ್ನು ಮೇರೆಗೆ ಕೇರಳ ಪೊಲೀಸರು ಮಂಜೇಶ್ವರದಿಂದ ಬಂಧಿಸಿದ್ದಾರೆ. ಪಾಲಕ್ಕಾಡನ ಮರ್ಣ್ಣಾಕಾಡ ಕಳರಿಕ್ಕಲ ಇಲ್ಲಿನ ನಿವಾಸಿ 56 ವರ್ಷದ ಸಿ.ಎಂ. ಜಮಾಲುದ್ದೀನ ಬಂಧಿತ ನಕಲಿ ವೈದ್ಯನಾಗಿದ್ದಾನೆ.

1. ಪೊಲೀಸ್ ಉಪನಿರೀಕ್ಷಕ ಕೆ.ವಿ. ಸುಮೇಶರಾಜ ಇವರು, ನಕಲಿ ವೈದ್ಯನನ್ನು ಉಪ್ಪಳ ಪಚ್ಚಂಪಾರದಲ್ಲಿ ಬಂಧಿಸಲಾಗಿದ್ದು, ಅಲ್ಲಿನ ‘ಫ್ರೆಂಡ್ಸ್ ಕ್ಲಬ್’ನಲ್ಲಿ ಜಮಾಲುದ್ದೀನ ನೇತೃತ್ವದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.

2. ಯಾವುದೇ ಅರ್ಹತೆ ಅಥವಾ ದಾಖಲೆಗಳಿಲ್ಲದೆ, ರೋಗಿಗಳನ್ನು ಪರೀಕ್ಷಿಸಿ, ಔಷಧಿಗಳನ್ನು ನೀಡುತ್ತಿದ್ದ ಆರೋಪದ ಮೇರೆಗೆ ಅವನನ್ನು ಬಂಧಿಸಲಾಯಿತು.

3. ನಕಲಿ ವೈದ್ಯ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆಂದು ಜಿಲ್ಲಾ ವೈದ್ಯಾಧಿಕಾರಿ ಕೆ. ಸಂತೋಷ ಇವರಿಗೆ ಮಾಹಿತಿ ಸಿಕ್ಕಿತ್ತು. ಈ ಸಂದರ್ಭದಲ್ಲಿ ತನಿಖೆಯ ಜವಾಬ್ದಾರಿಯನ್ನು ಉಪ ಜಿಲ್ಲಾ ವೈದ್ಯಾಧಿಕಾರಿಗಳಿಗೆ ನೀಡಲಾಗಿತ್ತು.

4. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಜಮಾಲುದ್ದೀನ ಬಳಿ ಯಾವುದೇ ವೈದ್ಯಕೀಯ ಅರ್ಹತೆ ಇಲ್ಲ ಎಂಬುದು ತಿಳಿದು ಬಂದಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಬಹುಸಂಖ್ಯಾತರು !