ಬೆಂಗಳೂರು – ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ 8 ಆರೋಪಿಗಳಿಗೆ ಅಕ್ಟೋಬರ್ 9 ರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ 8 ಜನರಲ್ಲಿ ಪರಶುರಾಮ ವಾಘಮೊರೆ, ಮನೋಹರ ಯಡವೆ, ರಾಜೇಶ ಬಂಗೇರಾ, ಅಮೋಲ ಕಾಳೆ, ವಾಸುದೇವ ಸೂರ್ಯವಂಶಿ, ಹೃಷಿಕೇಶ ದೇವಡಿಕರ, ಗಣೇಶ ಮಿಸ್ಕಿನ ಮತ್ತು ಅಮಿತ ರಾಮಚಂದ್ರ ಬದ್ದಿ ಸೇರಿದ್ದಾರೆ.
ಈ ಪ್ರಕರಣದಲ್ಲಿ ಶಂಕಿತ ಆರೋಪಿಗಳಾದ ಭರತ ಕುರಣೆ, ಸುಧನ್ವ ಗೊಂಧಳೇಕರ್, ಸುಜಿತ ಕುಮಾರ ಮತ್ತು ಶ್ರೀಕಾಂತ ಪಾಂಗರಕರ ಅವರನ್ನು ಕರ್ನಾಟಕ ಉಚ್ಚನ್ಯಾಯಾಲಯವು ಸೆಪ್ಟೆಂಬರ್ 4 ರಂದು ಜಾಮೀನು ಮಂಜೂರು ಮಾಡಿತ್ತು. ಶಂಕಿತರ ಪರವಾಗಿ ಹಿರಿಯ ನ್ಯಾಯವಾದಿ ಅರುಣ ಶ್ಯಾಮ, ನ್ಯಾಯವಾದಿ ಅಮರ ಕೊರ್ರಿಯಾ, ನ್ಯಾಯವಾದಿ ದಿವ್ಯಾ ಬಾಳೆಹಿತ್ತಲು ಮತ್ತು ನ್ಯಾಯವಾದಿ ಉಮಾಶಂಕರ ಮೇಗುಂಡಿ ಇವರು ಉಚ್ಚನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು.