ಬಾಬಾ ಸಿದ್ದಿಕಿ ಹತ್ಯೆಯ ಪ್ರಕರಣದಲ್ಲಿನ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವೆವು ! – ಏಕನಾಥ ಶಿಂದೆ, ಮುಖ್ಯಮಂತ್ರಿ, ಮಹಾರಾಷ್ಟ್ರ

ಮುಂಬಯಿ – ಬದಲಾಪುರದ ಆರೋಪಿಯು ಪೊಲೀಸರ ಮೇಲೆ ಗುಂಡು ಹಾರಿಸಿದನು, ಅದಕ್ಕೆ ಪೊಲೀಸರು ಪ್ರತ್ಯುತ್ತರ ನೀಡಿದರು. ಆಗ ವಿರೋಧಕರು, ‘ಪೊಲೀಸರು ಆರೋಪಿಗಳ ಮೇಲೆ ಗುಂಡು ಏಕೆ ಹಾರಿಸಿದರು ? ಹಾಗಾದರೆ ಪೊಲೀಸರೆನು ಗುಂಡು ಹೊಡೆಸಿಕೊಳ್ಳಬೇಕಿತ್ತೆ ? ರಾಷ್ಟ್ರವಾದಿ ಕಾಂಗ್ರೆಸ್ಸಿನ (ಅಜಿತ್ ಪವಾರ್ ಗುಂಪಿನ) ಮಾಜಿ ಮಂತ್ರಿ ಬಾಬಾ ಸಿದ್ದಿಕೀ ಇವರ ಹತ್ಯೆಯ ಪ್ರಕರಣದಲ್ಲಿನ ಒಬ್ಬನೇ ಒಬ್ಬ ಆರೋಪಿಯನ್ನು ನಾವು ಬಿಡುವುದಿಲ್ಲ. ಎಲ್ಲರನ್ನು ಗಲ್ಲಿಗೇರಿಸುವೆವು, ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಹೇಳಿದರು.

ಬಾಬಾ ಸಿದ್ದಿಕಿ ಇವರ ಹತ್ಯೆಯ ಪ್ರಕರಣದಲ್ಲಿ ೫ ಹೆಸರುಗಳು ಬೆಳಕಿಗೆ ಬಂದಿವೆ. ಶಿವಕುಮಾರ ಗೌತಮ, ಮಹಮ್ಮದ್ ಝಿಶಾನ್ ಅಖ್ತರ, ಶುಭಂ ಲೋಣಕರ, ಗುರುಮೇರ ಸಿಂಗ್ ಮತ್ತು ಧರ್ಮರಾಜ ಅಶ್ಯಪ ಎಂದು ಗುರುತಿಸಲಾಗಿದೆ. ಈಗ ಶಿವಕುಮಾರ ಗೌತಮ್, ಮಹಮ್ಮದ ಝಿಶಾನ್ ಅಖ್ತರ, ಶುಭಂ ಲೋಣಕರ್ ಇವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಶುಭಂ ಲೋಣಕರ್ ಇವನು ಫೇಸ್ಬುಕ್ ಪೋಸ್ಟ್ ಮೂಲಕ ಬಾಬಾ ಸಿದ್ದಿಕೀ ಇವರ ಹತ್ಯೆಯ ಹೊಣೆ ಸ್ವೀಕರಿಸಿದ್ದಾನೆ.