Biggest Land Mafia WAQF BOARD : ವಕ್ಫ್ ಬೋರ್ಡ್ ಬಳಿ 45 ದೇಶಗಳಿಗಿಂತ ಹೆಚ್ಚಿನ ಭೂಮಿ !

ನವದೆಹಲಿ – ಕೇಂದ್ರ ಸರಕಾರ ವಕ್ಫ್ ಬೋರ್ಡ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾವನೆ ಸಲ್ಲಿಸಿದ ನಂತರ ನಡೆದ ಚರ್ಚೆಯಲ್ಲಿ ವಕ್ಫ್ ಮಂಡಳಿಯ ಸಂಪತ್ತಿನ ಬಗ್ಗೆ ತಿಳಿದು ದೇಶದ ಜನರು ಆಘಾತಕ್ಕೊಳಗಾಗಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ವಕ್ಫ್ ಮಂಡಳಿಯು ವಿಶ್ವದ 45 ದೇಶಗಳಿಗಿಂತ ಹೆಚ್ಚಿನ ಭೂಮಿಯನ್ನು ಹೊಂದಿರುವುದು ಬಹಿರಂಗವಾಗಿದೆ. ವಕ್ಫ್ ಮಂಡಳಿಯು 3,804 ಚದರ ಕಿಲೋಮೀಟರಗಳಷ್ಟು ಭೂಮಿಯನ್ನು ಹೊಂದಿದೆ. ಇದು ವಿಶ್ವದ 45 ದೇಶಗಳ ಒಟ್ಟು ಭೂ ಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಉದಾಹರಣೆಗೆ, ಸಮೋವಾ ದೇಶದ ಒಟ್ಟು ವಿಸ್ತೀರ್ಣ 2,803 ಚದರ ಕಿಲೋಮೀಟರ್, ಮಾರಿಷಸ್ 2007, ಹಾಂಗ್ ಕಾಂಗ್ 1,114, ಬಹ್ರೇನ್ 787 ಮತ್ತು ಸಿಂಗಾಪುರ್ 735 ಚದರ ಕಿಲೋಮೀಟರಗಳಷ್ಟು ಭೂ ಪ್ರದೇಶ ಹೊಂದಿವೆ.

ರೈಲ್ವೆ, ರಕ್ಷಣಾ ಮತ್ತು ಕ್ಯಾಥೋಲಿಕ್ ಚರ್ಚ್ ನಂತರ, ವಕ್ಫ್ ಬೋರ್ಡ್ ಹೆಚ್ಚು ಭೂಮಿಯನ್ನು ಹೊಂದಿದೆ !

ಪ್ರಸ್ತುತ ವಕ್ಫ್ ಬೋರ್ಡ್ ಕಾಯ್ದೆಯಲ್ಲಿನ ವಿವಾದಾತ್ಮಕ ನಿಬಂಧನೆಯ ಪ್ರಕಾರ, ಭೂಮಿ ಒಮ್ಮೆ ವಕ್ಫ್ ಮಂಡಳಿಗೆ ಹೋದರೆ, ಅದನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ. ಅಂಕಿ-ಅಂಶಗಳ ಪ್ರಕಾರ, ರೈಲ್ವೇ, ರಕ್ಷಣಾ ಮತ್ತು ಕ್ಯಾಥೋಲಿಕ್ ಚರ್ಚ್ ನಂತರ, ವಕ್ಫ್ ಮಂಡಳಿಯು ದೇಶದಲ್ಲಿ ಅತಿ ಹೆಚ್ಚಿನ ಭೂಮಿಯನ್ನು ಹೊಂದಿದೆ.

ಸಂಪಾದಕೀಯ ನಿಲುವು

ವಕ್ಫ್ ಬೋರ್ಡ್ ಎಂದರೆ ಭಾರತದಲ್ಲಿ ಲ್ಯಾಂಡ್ ಜಿಹಾದ್ ನಡೆಸಲು ಮುಸ್ಲಿಮರಿಗೆ ಸರಕಾರವು ನೀಡಿರುವಂತಹ ಸಾಧನವಾಗಿದೆ. ವಕ್ಫ್ ಕಾನೂನು ರದ್ದುಗೊಳಿಸುವುದು ಯಾಕೆ ಅಗತ್ಯ ಎನ್ನುವುದು ಇದರಿಂದ ಅರ್ಥವಾಗುತ್ತದೆ !