|
ಮಂಡ್ಯ – ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಡೆದ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ ಕುಮಾರ್ ಕರ್ತವ್ಯ ಲೋಪವೆಸಗಿರುವ ಆರೋಪ ಹೊರಿಸಿ ಅವರನ್ನು ಅಮಾನತು ಮಾಡುವಂತೆ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ. ನಾಗಮಂಗಲದಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆ ದರ್ಗಾದ ಮುಂದೆ ಬಂದ ತಕ್ಷಣ ಮತಾಂಧ ಮುಸ್ಲಿಮರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಪೊಲೀಸರ ಎದುರೇ ಪೆಟ್ರೋಲ್ ಬಾಂಬ್ ದಾಳಿ ನಡೆಸಿದರು. ಅವರು ಮೆರವಣಿಗೆಯ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ತೂರಿದರು ಮತ್ತು ಹಿಂದೂಗಳ ಮೇಲೆ ತಲವಾರು ಝಳಪಿಸಿದರು.
ಇದುವರೆಗೆ 52 ಜನರ ಬಂಧನ
ನಾಗಮಂಗಲದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ 150 ಆರೋಪಿಗಳ ವಿರುದ್ಧ ಅಪರಾಧ ದಾಖಲಿಸಿದ್ದು, 23 ಹಿಂದೂಗಳು ಮತ್ತು 30 ಮುಸ್ಲಿಮರು ಹೀಗೆ ಒಟ್ಟು 53 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಪತ್ರಕರ್ತರಿಗೆ ಮಾಹಿತಿ ನೀಡಿದರು. ಅವರು ಮಾತನಾಡಿ, ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಂಗಡಿಕಾರರು ಅಂಗಡಿಗಳನ್ನು ತೆರೆದಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಬಂಧಿತ 53 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಲಯ ಅವರನ್ನು ಸೆಪ್ಟೆಂಬರ್ 25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ.
ಮಸೀದಿಯು ಗಲಭೆ ನಡೆಸುವ ಕೇಂದ್ರವಾಗಿದೆಯೇ ? – ಪ್ರಮೋದ ಮುತಾಲಿಕ
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮಾತನಾಡಿ, ನಾಗಮಂಗಲದಲ್ಲಿ ವಿಸರ್ಜನೆಯ ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮಸೀದಿಯು ಗಲಭೆಗಳನ್ನು ನಡೆಸುವ ಕೇಂದ್ರವಾಗಿದೆಯೇ ? ಗಣೇಶನ ಮೆರವಣಿಗೆ ಮಸೀದಿ ಮುಂದೆ ಹೋಗಬಾರದೇ ? ಇದು ಪೂರ್ವ ಯೋಜಿತ ಗಲಭೆಯಾಗಿದ್ದು, ಪೊಲೀಸರಿಗೆ ಈ ವಿಷಯ ಹೇಗೆ ತಿಳಿದಿಲ್ಲ ?’ ಎಂದು ಪ್ರಶ್ನಿಸಿದರು.
ಸರಕಾರ ಕರ್ನಾಟಕವನ್ನು ಪಾಕಿಸ್ತಾನವನ್ನಾಗಿ ಮಾಡುತ್ತಿದೆ ! – ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ”ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಮೇಲೆ ನಡೆದ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆಯನ್ನು ಮಸೀದಿಯ ಬಳಿ ತೆಗೆದುಕೊಂಡು ಹೋಗಬಾರದು ಎಂಬ ಕಾನೂನು ಏನಾದರೂ ಇದೆಯೇ ? ಕಾಂಗ್ರೆಸ್ ಸರಕಾರ ರಾಜಕೀಯ ಓಲೈಕೆಗಾಗಿ ಕರ್ನಾಟಕವನ್ನು ಪಾಕಿಸ್ತಾನವನ್ನಾಗಿ ಮಾಡುತ್ತಿದೆ. ಹಿಂದೂ ಹಬ್ಬಗಳ ಬಗ್ಗೆ ಕಾಂಗ್ರೆಸ್ಸಿಗೆ ಯಾಕೆ ಸಿಟ್ಟು ? ಕಾಂಗ್ರೆಸ್ ಸರಕಾರ ಕೇವಲ ಮತಪೆಟ್ಟಿಗೆಯ ರಾಜಕೀಯದ ಬಗ್ಗೆ ಯೋಚಿಸದೆ ಉದ್ಧಟತನ ತೋರುವವರ ಮೇಲೆ ಕಡಿವಾಣ ಹಾಕಬೇಕು. ಕಾಂಗ್ರೆಸ್ಸಿನ ಹಿಂದೂ ವಿರೋಧಿ ನೀತಿಗಳಿಂದಲೇ ಇಂತಹ ಗಲಭೆಗಳು ಮತ್ತು ಘಟನೆಗಳು ಉದ್ರೇಕವಾಗುತ್ತಿವೆ. ನಾಗಮಂಗಲದ ಘಟನೆಗೆ ರಾಜ್ಯದ ಕಾಂಗ್ರೆಸ್ ಸರಕಾರವೇ ಹೊಣೆಯಾಗಿದೆ.” ಎಂದು ಹೇಳಿದರು.
ಸಂಪಾದಕೀಯ ನಿಲುವು
|