ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು ಮತ್ತು ದಾಖಲೆಗಳ ಮೇಲೆ ಸಹಿ ಮಾಡದಂತೆ ಷರತ್ತು
ನವ ದೆಹಲಿ – ಮದ್ಯ ಹಗರಣದ ಪ್ರಕರಣದಲ್ಲಿ ಕಳೆದ 177 ದಿನಗಳಿಂದ ಬಂಧನದಲ್ಲಿದ್ದ ಆಮ್ ಆದ್ಮಿ ಪಕ್ಷದ ಮುಖ್ಯ ನಾಯಕ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೆಪ್ಟೆಂಬರ್ 13 ರಂದು 10 ಲಕ್ಷ ರೂಪಾಯಿಗಳ ವೈಯಕ್ತಿಕ ಮುಚ್ಚಳಿಕೆ ಪತ್ರದ (ಬಾಂಡ್)ಮೇಲೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (‘ಇಡಿ’) ಬಂಧಿಸಿತ್ತು. ಈ ಹಿಂದೆ, ಕೇಜ್ರಿವಾಲ್ ಅವರ ಬಂಧನವನ್ನು ಸರ್ವೋಚ್ಚ ನ್ಯಾಯಾಲಯವು ಕಾನೂನುಬಾಹಿರ ಎಂದು ಪರಿಗಣಿಸಿರಲಿಲ್ಲ; ಆದರೆ ‘ಈಗ ಯಾವುದೇ ನಾಯಕನನ್ನು ಹೆಚ್ಚು ಕಾಲ ಜೈಲಿನಲ್ಲಿ ಇಡುವಂತಿಲ್ಲ’ ಎಂದು ನ್ಯಾಯಾಲಯವು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ವಿಧಿಸಿರುವ ಷರತ್ತುಗಳು
1. ಕೇಜ್ರಿವಾಲ್ ಯಾವುದೇ ದಾಖಲೆಗೆ ಸಹಿ ಮಾಡುವ ಹಾಗಿಲ್ಲ.
2. ಮುಖ್ಯಮಂತ್ರಿಗಳ ಕಚೇರಿ ಹಾಗೂ ಸಚಿವಾಲಯಕ್ಕೆ ಹೋಗುವಂತಿಲ್ಲ.
3. ಮದ್ಯದ ಹಗರಣದ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ.
4. ಮದ್ಯದ ಹಗರಣದ ಪ್ರಕರಣದಲ್ಲಿ ಯಾವುದೇ ಫೈಲ್ ನೋಡಬಾರದು ಅಥವಾ ತರಿಸುವಂತಿಲ್ಲ.
5. ವಿಚಾರಣೆಗೆ ಸಹಕರಿಸಬೇಕು ಹಾಗೆಯೇ ವಿಚಾರಣೆಯ ಸಮಯದಲ್ಲಿ ಹಾಜರಿರಬೇಕು.