(ಖಬರಿ ಎಂದರೆ ಮಾಹಿತಿ ನೀಡುವವ)
ಬಿಜಾಪುರ (ಛತ್ತೀಸ್‌ಗಢ) – ಜಿಲ್ಲೆಯ ದುರ್ಗಮ ಹಳ್ಳಿಯೊಂದರಲ್ಲಿ ಇಬ್ಬರು ಗ್ರಾಮಸ್ಥರನ್ನು ಪೊಲೀಸ್ ಮಾಹಿತಿದಾರರೆಂದು ಶಂಕಿಸಿ ನಕ್ಸಲೀಯರು ನೇಣಿಗೆ ಹಾಕಿದ್ದಾರೆ. ಇತ್ತೀಚೆಗೆ ನಕ್ಸಲವಾದಿಗಳು ಜಪ್ಪೆಮಾರ್ಕಾ ಗ್ರಾಮದಿಂದ ಓರ್ವ ಶಾಲಾ ವಿದ್ಯಾರ್ಥಿ ಸೇರಿದಂತೆ ಮೂವರು ಗ್ರಾಮಸ್ಥರನ್ನು ಅಪಹರಿಸಿದ್ದರು. ಬಳಿಕ ‘ಜನ ಅದಾಲತ್’ ನಡೆಸಿ ಇಬ್ಬರನ್ನು ಮರಕ್ಕೆ ನೇಣು ಹಾಕಿದರು ಮತ್ತು ಶಾಲಾ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಿದರು. (ಭಾರತೀಯ ನ್ಯಾಯ ವ್ಯವಸ್ಥೆಗೆ ಸಮಾನಾಂತರವಾದ ನಕ್ಸಲೀಯರು ಜನ ಅದಾಲತ್ ನಡೆಸುತ್ತಿರುವುದು ನಾಚಿಕೆಗೇಡು! – ಸಂಪಾದಕರು) ಈ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಾವೋವಾದಿಗಳ ಭೈರಮಗಡ ಪ್ರದೇಶ ಸಮಿತಿಯು ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಗಲ್ಲಿಗೇರಿಸಿದ ಇಬ್ಬರೂ ‘ಪೊಲೀಸ್ ಮಾಹಿತಿದಾರರಾಗಿ’ ಕೆಲಸ ಮಾಡುತ್ತಿದ್ದರು ಎಂಬುದು ನಕ್ಸಲರಿಗೆ ಅನುಮಾನವಿತ್ತು ಎಂದು ಹೇಳಿದರು.
ನಾಲ್ವರು ನಕ್ಸಲೀಯರು ಶರಣು !
ಈ ನಡುವೆ ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಹಲವು ಘಟನೆಗಳಲ್ಲಿ ಭಾಗಿಯಾಗಿದ್ದ ಮತ್ತು 12 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿದ್ದ ನಾಲ್ವರು ನಕ್ಸಲೀಯರು, ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿ ನಕ್ಸಲವಾದ ಕೊನೆಗೊಳ್ಳುವುದು ಯಾವಾಗ ? |